ಬ್ರೇಕಿಂಗ್ ನ್ಯೂಸ್
03-09-26 09:15 pm HK News Staffer ಕ್ರೈಂ
ಮಂಗಳೂರು, ಸೆ.3: ಮುಲ್ಕಿ ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯಲ್ಲಿದ್ದ ದೈವದ ಮೊಗ, ಬೆಳ್ಳಿಯ ಮುಖವಾಡ, ಚಿನ್ನದ ಪದಕ ಸೇರಿ ದೈವದ ಪರಿಕರಗಳನ್ನು ಕಳ್ಳರು ಕದ್ದೊಯ್ದ ಘಟನೆ ಸೆ.1ರ ರಾತ್ರಿ ನಡೆದಿದ್ದು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರ್ದಬ್ಬು ದೈವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದ ಕಿಶೋರ್, ಸೆ. 01ರಂದು ಸಂಜೆ ದೈವಸ್ಥಾನದಲ್ಲಿ ಪೂಜೆ ಮಾಡಿದ್ದು ಬಳಿಕ 7 ಗಂಟೆ ಸುಮಾರಿಗೆ ದೈವಸ್ಥಾನದ ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಸೆ. 02ರಂದು ಬೆಳಗ್ಗೆ 7 ಗಂಟೆಗೆ ದೈವಸ್ಥಾನಕ್ಕೆ ಪೂಜೆಗೆಂದು ಬಂದಾಗ ದೈವಸ್ಥಾನದ ಮುಖ್ಯ ದ್ವಾರದ ಚಿಲಕ ಹಾಕಿದ್ದು, ಬೀಗ ತುಂಡರಿಸಿದ ಸ್ಥಿತಿಯಲ್ಲಿ ಕೆಳಗೆ ಬಿದ್ದಿತ್ತು. ಗರ್ಭಗುಡಿಯಲ್ಲಿದ್ದ ಕೋರ್ದಬ್ಬು ದೈವದ ಮೂರ್ತಿಗೆ ಹಾಕಿದ್ದ ಬೆಳ್ಳಿಯ ಮುಖವಾಡ, ಖಡ್ಗ ಮತ್ತು ಸೊಂಟಪಟ್ಟಿ ಕಳುವಾಗಿರುವುದು ಕಂಡುಬಂತು.
ಸೆ.1ರ ಸಂಜೆ ಸುಮಾರು 7 ಗಂಟೆಯಿಂದ ಸೆ.02ರ ಬೆಳಗ್ಗಿನ 7 ಗಂಟೆಯ ಮಧ್ಯದಲ್ಲಿ ಕಳ್ಳರು ಕೋರ್ದಬ್ಬು ದೈವಸ್ಥಾನದ ಬೀಗ ಮುರಿದು ಒಳನುಗ್ಗಿ ಗರ್ಭಗುಡಿಯ ಮೂರ್ತಿಗೆ ಹಾಕಿದ್ದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಕೋರ್ದಬ್ಬು ದೈವದ ಬೆಳ್ಳಿಯ ಮೊಗ -1, ಇದರಲ್ಲಿ ಬಂಗಾರದ ತಗಡು ರೀತಿಯ ನಾಲಿಗೆ ಮತ್ತು ಮೀಸೆ ಇರುತ್ತದೆ. ಹಣೆಯಲ್ಲಿ ಸೂರ್ಯ ಚಂದ್ರ ಆಕೃತಿಯ ಬಂಗಾರದ ಪದಕ ಇರುತ್ತದೆ. ಬಂಗಾರದ ದೃಷ್ಟಿ ಹಾಗೂ ಕಣ್ಣು ಹುಬ್ಬು ಇರುತ್ತದೆ. ಕೆಂಪು ಕಲ್ಲಿನ ಹಣೆಯ ಬೊಟ್ಟು ಇದ್ದು ಕಣ್ಣಿನ ಮದ್ಯದಲ್ಲಿ ನೀಲಿ ಕಲ್ಲಿನ ದೃಷ್ಟಿ ಇರುತ್ತದೆ. ಹಾಗೂ ತಲೆಯ ಮೇಲ್ಬಾಗ ಪ್ರಭಾವಳಿ ರೀತಿಯ ಕಿರೀಟ ಇರುತ್ತದೆ. ಬೆಳ್ಳಿಯ ಕವಚ ಇರುವ ಖಡ್ಗ (ಖಡ್ಸಲೆ)-1 ಇದರ ತುದಿಯಲ್ಲಿ ಬಂಗಾರದ ಕವಚ ಇರುತ್ತದೆ. ಕೋರ್ದಬ್ಬು ದೈವದ ಬೆಳ್ಳಿಯ ಸೊಂಟಪಟ್ಟಿ -2, ಕಳುವಾದ ಬೆಳ್ಳಿಯ ಮೊಗದಲ್ಲಿ ಸುಮಾರು 6 ಕೆಜಿ ಬೆಳ್ಳಿ, ಖಡ್ಗದಲ್ಲಿ 1 ಕೆಜಿ ಬೆಳ್ಳಿ, ಸೊಂಟಪಟ್ಟಿಯಲ್ಲಿ ಒಟ್ಟು 4 ಕೆಜಿ ಬೆಳ್ಳಿ ಇದ್ದು ಬಂಗಾರದ ಆಭರಣಗಳು ಒಟ್ಟು 5 ಪವನ್ ಆಗಬಹುದು. ಸೊತ್ತುಗಳ ಅಂದಾಜು ಬೆಲೆ 14,95,000/- ರೂಪಾಯಿ ಆಗಿರುತ್ತದೆ ಎಂದು ದೇವಸ್ಥಾನದ ಅರ್ಚಕ ಕಿಶೋರ್ ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
03-09-26 07:27 pm
HK News Staffer
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
03-09-26 10:19 pm
HK News Staffer
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
03-09-26 09:51 pm
HK News Staffer
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm
ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ...
03-09-26 05:21 pm
ನೀಟ್ ಪರೀಕ್ಷೆ ಅಕ್ರಮ ; ಸುನಿಲ್ ಕುಮಾರ್ ರಾಜೀನಾಮೆಗೆ...
02-09-26 07:18 pm