ಬ್ರೇಕಿಂಗ್ ನ್ಯೂಸ್
07-01-21 10:51 pm Filmibeat ಸಿನಿಮಾ
Photo credits : BehindwoodsTV
ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಅವಧಿಗೂ ಮುನ್ನವೇ ಬಿಡುಗಡೆಗೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಕೆಜಿಎಫ್ 2 ಸಿನಿಮಾದ ಟೀಸರ್ ಅನ್ನು ನಾಳೆ (ಜನವರಿ 08) ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಕೆಜಿಎಫ್ ಟೀಸರ್ ಜನವರಿ 08 ರಂದು ಬೆಳಿಗ್ಗೆ 10:18 ಕ್ಕೆ ಹೊಂಬಾಳೆ ಸಿನಿಮಾದ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಲಿತ್ತು. ಆದರೆ ವಿಡಿಯೋ ಲೀಕ್ ಆದ ಕಾರಣ ಬೇಗನೆ ಟೀಸರ್ ಬಿಡುಗಡೆ ಮಾಡಲಾಗಿದೆ.
ನಿಗದಿಗೊಳಿಸಿದ್ದ ಅವಧಿಗೂ ಮುನ್ನ ಅಂದರೆ ಗುರುವಾರ ರಾತ್ರಿ 9:29 ಕ್ಕೆ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದರು.
ಟೀಸರ್‌ನಲ್ಲಿ ನರಾಚಿಯ ಏರಿಯಲ್ ಲುಕ್‌ಗಳು ಭೀತಿ ಹುಟ್ಟಿಸುವಂತಿದೆ. ಆಧುನಿಕ ಸ್ಟೆನ್ ಗನ್‌ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ಅಭಿಮಾನಿಗಳಿಗೆ ಹುಚ್ಚು ಹಿಡಿಸುವುದು ಗ್ಯಾರೆಂಟಿ.
ಅದ್ಭುತವಾದ ಹಿನ್ನೆಲೆ ಸಂಗೀತ ರಾಕಿ ಭಾಯ್‌ಗಾಗಿ ಆರತಿ ತಟ್ಟೆ ಹಿಡಿದು ಕಾಯುತ್ತಿರುವ ಮೀರಾ, ರಾಕಿ ಭಾಯ್ ಅನ್ನು ಮುಗಿಸಲು ಬರುವ ದೊಡ್ಡ ಜನಸಾಗರ, ನರಾಚಿಯೊಳಗೆ ನುಗ್ಗುವ ಸರ್ಕಾರದ ಸೇನೆ ಎಲ್ಲವೂ ಟೀಸರ್‌ನಲ್ಲಿದೆ. ಟೀಸರ್‌ನ ವೇಗಕ್ಕೆ ತಕ್ಕಂತೆ ದಂಗುಬಡಿಸುವ ಹಿನ್ನೆಲೆ ಸಂಗೀತವೂ ಇದೆ.
ಕೆಜಿಎಫ್ ನಲ್ಲಿ 'ಪವರ್‌ಫುಲ್ ಪೀಪಲ್ಸ್ ಕಮ್ ಫ್ರಂ ಪವರ್‌ಫುಲ್ ಪ್ಲೇಸಸ್' ಎಂದಿದ್ದ ಸ್ಲೋಗನ್ ಕೆಜಿಎಫ್ 2 ಬದಲಾಗಿದೆ. 'ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್' ಎಂದು ಬದಲು ಮಾಡಿರುವುದು ಈ ಟೀಸರ್‌ನಲ್ಲಿ ಗೊತ್ತಾಗುತ್ತಿದೆ.
ರವೀನಾ ಟಂಡನ್ ಲುಕ್ ಸೂಪರ್ ಪಾರ್ಲಿಮೆಂಟ್‌ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿರುವ ನಟಿ ರವೀನಾ ಟಂಡನ್, ಉದ್ದ ಜಡೆ ಬಿಟ್ಟು ಮಾರುದ್ದದ ಕತ್ತಿ ಹಿಡಿದು ನಿಂತಿರುವ ಸಂಜಯ್ ದತ್ ಲುಕ್‌ಗಳು ಹುಬ್ಬೇರಿಸುವಂತಿವೆ. ಟೀಸರ್‌ನ ಕೊನೆಯಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಲಾಗಿದೆ.
The most-awaited teaser of KGF: Chapter 2 was released on Thursday to contain the damage of the video’s leak, hours before its official launch.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm