ಬ್ರೇಕಿಂಗ್ ನ್ಯೂಸ್
04-07-26 08:09 pm HK News Staffer ದೇಶ - ವಿದೇಶ
ನವದೆಹಲಿ, ಜುಲೈ 4: ಚೀನಾದ ಮಹಾ ಗೋಡೆಯ ಮಾದರಿಯಲ್ಲೇ ಆಫ್ರಿಕಾ ಖಂಡದ ಬಂಜರು ಭೂಮಿಯಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಬರೋಬ್ಬರಿ 8,000 ಕಿಲೋಮೀಟರ್ ಉದ್ದಕ್ಕೆ 'ಮರಗಳ ಗೋಡೆ'ಯನ್ನು ನಿರ್ಮಿಸುವ ಮಹಾ ಅಭಿಯಾನ ಕೈಗೊಳ್ಳಲಾಗಿದೆ. ಇದನ್ನು 'ಗ್ರೇಟ್ ಗ್ರೀನ್ ವಾಲ್' ಎಂದು ಕರೆಯಲಾಗುತ್ತದೆ.
ಆಫ್ರಿಕಾ ಖಂಡದ ನಡುವೆ ಹರಡಿಕೊಂಡಿರುವ ಸಹಾರಾ ಮರುಭೂಮಿಯ ಗಡಿಯಲ್ಲಿರುವ 'ಸಾಹೇಲ್' (Sahel) ಎಂಬ ಅರೆ-ಶುಷ್ಕ ಪ್ರದೇಶದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ. ಇದು ಅಟ್ಲಾಂಟಿಕ್ ಮಹಾಸಾಗರದ ಕರಾವಳಿಯ ಸೆನೆಗಲ್‌ನಿಂದ ಹಿಡಿದು ಕೆಂಪು ಸಮುದ್ರದ ಜಿಬೂಟಿ ದೇಶದ ವರೆಗೆ ಸುಮಾರು 8,000 ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ.
2007 ರಲ್ಲಿ ಆಫ್ರಿಕನ್ ಯೂನಿಯನ್ ಈ ಯೋಜನೆಯನ್ನು ಪ್ರಾರಂಭಿಸಿದಾಗ, ಕೇವಲ 15 ಕಿ.ಮೀ ಅಗಲದಲ್ಲಿ ಸತತ ಮರಗಳ ಸಾಲನ್ನು ನೆಡುತ್ತಾ ಹೋಗುವು ಮೂಲ ಉದ್ದೇಶವಾಗಿತ್ತು. ಆದರೆ ಈಗ, ಕೇವಲ ಮರ ನೆಡುವುದಷ್ಟೇ ಅಲ್ಲದೆ, ಸ್ಥಳೀಯ ಪರಿಸರಕ್ಕೆ ತಕ್ಕಂತೆ ಕಾಡುಗಳು, ಹುಲ್ಲುಗಾವಲುಗಳು, ಜೌಗು ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ಪುನಶ್ಚೇತನಗೊಳಿಸುವ ವಿಶಾಲ ರೂಪವನ್ನು ಯೋಜನೆ ಪಡೆದುಕೊಂಡಿದೆ.

100 ಮಿಲಿಯನ್ ಹೆಕ್ಟೇರ್ ಮರುಸೃಷ್ಟಿ:
ಎಂಟು ಸಾವಿರ ಕಿಮೀ ಉದ್ದಕ್ಕೆ ಈ ಯೋಜನೆ ಸಾಕಾರವಾದರೆ ಆಫ್ರಿಕಾದ ಅತಿ ದೊಡ್ಡ ದೇಶ ಈಜಿಪ್ಟ್ ಗಾತ್ರದಷ್ಟು ಆಗಬಹುದೆಂಬ ಅಂದಾಜಿದೆ. ಏನೂ ಬೆಳೆಯದ ಬಂಜರಾಗಿರುವ ಭೂಮಿಯನ್ನು ಮತ್ತೆ ಫಲವತ್ತಾಗಿಸುವುದು ಇದರ ಹಿಂದಿನ ಉದ್ದೇಶ. ಇದಲ್ಲದೆ, ಈ ನೈಸರ್ಗಿಕ ಕಾಡುಗಳ ಮೂಲಕ ವಾತಾವರಣದಿಂದ 250 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಪರಿಸರಕ್ಕೆ ದೊಡ್ಡ ಕೊಡುಗೆ ನೀಡುವ ಉದ್ದೇಶ ಇದೆ.

10 ಮಿಲಿಯನ್ ಉದ್ಯೋಗ ಸೃಷ್ಟಿ:
ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಆಫ್ರಿಕಾದಾದ್ಯಂತ ಕನಿಷ್ಠ 10 ಮಿಲಿಯನ್ (1 ಕೋಟಿ) ಹಸಿರು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಇದು ಹೊಂದಿದೆ. ಇದಲ್ಲದೆ, ಬರಗಾಲ ಮತ್ತು ಬಡತನದಿಂದ ಕಂಗಾಲಾಗಿರುವ ಸಾಹೇಲ್ ಪ್ರದೇಶದ ಲಕ್ಷಾಂತರ ಜನರಿಗೆ ಆಹಾರ ಭದ್ರತೆ ನೀಡುವ ಗುರಿ ಹೊಂದಿದೆ.
ಯೋಜನೆಗೆ 20ಕ್ಕೂ ಹೆಚ್ಚು ಆಫ್ರಿಕನ್ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಬೆಂಬಲ ನೀಡುತ್ತಿವೆ. ಸದ್ಯದ ವರದಿಗಳ ಪ್ರಕಾರ, ಈಗಾಗಲೇ ಸುಮಾರು 30 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಯಶಸ್ವಿಯಾಗಿ ಪುನಶ್ಚೇತನಗೊಳಿಸಲಾಗಿದೆ. ಸೆನೆಗಲ್, ಇಥಿಯೋಪಿಯಾ, ನೈಜೀರಿಯಾ ಮತ್ತು ನೈಜರ್ ದೇಶಗಳು ಈ ನಿಟ್ಟಿನಲ್ಲಿ ದೊಡ್ಡ ಯಶಸ್ಸು ಕಂಡಿವೆ. ಆದರೆ, 2030ರ ವೇಳೆಗೆ ಸಂಪೂರ್ಣ ಗುರಿಯನ್ನು ತಲುಪಲು ಇನ್ನೂ ಹೆಚ್ಚಿನ ಹಣಕಾಸಿನ ನೆರವು, ಪ್ರಾದೇಶಿಕ ಸಹಕಾರ ಮತ್ತು ಆಫ್ರಿಕಾದ ಕೆಲವು ಗಲಭೆ ಪೀಡಿತ ಪ್ರದೇಶಗಳಲ್ಲಿ ಸುರಕ್ಷತೆಯ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ಮರಗಳನ್ನು ನೆಡುವ ಯೋಜನೆಯಲ್ಲ, ಬದಲಿಗೆ ಸ್ಥಳೀಯ ರೈತರೇ ಒಟ್ಟಾಗಿ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಜಾಗತಿಕ ಮಟ್ಟದ ಅತಿ ದೊಡ್ಡ ಹೋರಾಟವಾಗಿದೆ. ಹವಾಮಾನ ಬದಲಾವಣೆಯಿಂದ ಭೂಮಿಯನ್ನು ಹೇಗೆ ರಕ್ಷಿಸಬಹುದು ಎಂಬುದಕ್ಕೆ ಈ 'ಗ್ರೇಟ್ ಗ್ರೀನ್ ವಾಲ್' ಇಡೀ ಜಗತ್ತಿಗೆ ಮಾದರಿ ಎನ್ನಬಹುದಾಗಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am