ಬ್ರೇಕಿಂಗ್ ನ್ಯೂಸ್
04-08-20 11:17 am Headline Karnataka News Network ದೇಶ - ವಿದೇಶ
ರೋಮ್: ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಪೋರ್ಚುಗಲ್ ದೇಶದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪ್ರಪಂಚದ ದುಬಾರಿ ಕಾರನ್ನು ಖರೀದಿಸಿದ್ದಾರೆ.
ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ರೊನಾಲ್ಡೊ ಅವರು ಬುಗಾಟಿ ಸಂಸ್ಥೆ ನಿರ್ಮಿಸಿರುವ 8.5 ದಶಲಕ್ಷ ಯುರೋ(ಅಂದಾಜು 75 ಕೋಟಿ ರೂ.) ಮೌಲ್ಯದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಹೆಸರಿನ ಕಾರನ್ನು ರೊನಾಲ್ಡೊ ಖರೀದಿಸಿದ್ದರೂ ಈಗಲೇ ಇವರ ಕೈ ಸೇರುತ್ತಿಲ್ಲ. ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವ ಕಾರಣ 2021ರಲ್ಲಿ ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.
ಬುಗಾಟಿ ಕಂಪನಿ 110ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ 10 ಕಾರುಗಳನ್ನು ಮಾತ್ರ ತಯಾರಿಸುತ್ತಿದೆ. 2019ರ ಜಿನಿವಾ ಮೋಟರ್ ಶೋದಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು ಕಂಪನಿಯ 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 380 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಶೂನ್ಯದಿಂದ 60 ಕಿ.ಮೀ ವೇಗಕ್ಕೆ ಕೇವಲ 3 ಸೆಕೆಂಡ್‌ಗಳಲ್ಲಿ ಕ್ರಮಿಸುವ ಸಾಮರ್ಥ್ಯ ಈ ಕಾರಿಗಿದೆ.

ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm