ಬ್ರೇಕಿಂಗ್ ನ್ಯೂಸ್
15-12-22 01:13 pm Source: Vijayakarnataka ಕ್ರೀಡೆ
ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಅಲಾನ್ ಡೊನಾಲ್ಡ್ ಅವರು 25 ವರ್ಷಗಳ ಹಳೆಯ ಘಟನೆ ಬಗ್ಗೆ ಇದೀಗ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಇಲ್ಲಿನ ಝಹೂರ್ ಅಹ್ಮದ್ ಚೌಧುರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳಲ್ಲಿ ವಿವಿಧ ಹುದ್ದೆಗಳನ್ನು ರಾಹುಲ್ ದ್ರಾವಿಡ್ ಹಾಗೂ ಅಲಾನ್ ಡೊನಾಲ್ಡ್ ನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಲಾನ್ ಡೊನಾಲ್ಡ್ ಅವರು ಬಾಂಗ್ಲಾದೇಶ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಸಂದರ್ಶನದಲ್ಲಿ ಮಾತನಾಡಿದ ಅಲಾನ್ ಡೊನಾಲ್ಡ್, 1997ರಲ್ಲಿ ಡರ್ಬನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಪಂದ್ಯದ ವೇಳೆ ಮಿತಿ ಮೀರಿ ರಾಹುಲ್ ದ್ರಾವಿಡ್ ಅವರನ್ನು ಸ್ಲೆಡ್ಜ್ ಮಾಡಿದ್ದ ಘಟನೆಯನ್ನು ಸ್ಮರಿಸಿಕೊಂಡರು. ಈ ಘಟನೆಯಿಂದಾಗಿ ನಾನು ಇದೀಗ ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
"ಡರ್ಬನ್‌ನಲ್ಲಿ ನಡೆದಿದ್ದ ಘಟನೆಯು ತುಂಬಾ ಕೊಳಕಿನಿಂದ ಕೂಡಿತ್ತು ಹಾಗೂ ಇದನ್ನು ಸಂಪೂರ್ಣವಾಗಿ ವಿವರಿಸಲು ನಾನು ಹೋಗುವುದಿಲ್ಲ. ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರೂ ಮೈದಾನದ ಎಲ್ಲಾ ಕಡೆ ಚೆಂಡನ್ನು ಹೊಡೆಯುವ ಮೂಲಕ ನಮ್ಮನ್ನು ತುಂಬಾ ಕಾಡಿದ್ದರು. ಈ ವೇಳೆ ಸ್ವಲ್ಪ ಮಿತಿ ಮೀರಿ ವರ್ತಿಸಿದ್ದೆ ಎಂದು ನಾನು ಭಾವಿಸುತ್ತೇನೆ. ಈ ಘಟನೆಯ ಹೊರತಾಗಿಯೂ ದ್ರಾವಿಡ್ ಎಂದರೆ, ನನಗೆ ಬಹಳಾ ಗೌರವವಿದೆ," ಎಂದು ಅಲಾನ್ ಡೊನಾಲ್ಡ್ ತಿಳಿಸಿದರು.
𝐒𝐩𝐨𝐫𝐭𝐬𝐦𝐚𝐧𝐬𝐡𝐢𝐩 𝐚𝐭 𝐢𝐭𝐬 𝐛𝐞𝐬𝐭! 🤝
— Sony Sports Network (@SonySportsNetwk) December 14, 2022
📹 | Bangladesh's bowling coach Allan Donald sends out a special message to India's head coach Rahul Dravid 💙
P.S. The end will certainly bring a smile to your face 😄#AllanDonald #RahulDravid #SonySportsNetwork pic.twitter.com/UgYy5QGf5e
"ಒಂದು ಕಡೆ ರಾಹುಲ್ ದ್ರಾವಿಡ್ ಜೊತೆ ಕುಳಿತುಕೊಂಡು ಈ ಹಿಂದೆ ನಡೆದಿದ್ದ ಘಟನೆ ಬಗ್ಗೆ ಅವರ ಬಳಿ ಕ್ಷಮೆಯಾಚಿಸಬೇಕು. ಏಕೆಂದರೆ ಅಂದು(1997ರಲ್ಲಿ) ದ್ರಾವಿಡ್ ಅವರನ್ನು ಹೇಗಾದರೂ ಮಾಡಿ ಔಟ್ ಮಾಡಬೇಕೆಂಬುದು ನನ್ನ ತಲೆಯಲ್ಲಿ ಇತ್ತು. ಈ ಕಾರಣದಿಂದ ನಾನು ಅವರನ್ನು ಸ್ಲೆಡ್ಜ್ ಮಾಡಿದ್ದೆ. ಅಂದು ನಡೆದುಕೊಂಡ ಹಾದಿಗೆ ಇದೀಗ ಕ್ಷಮೆಯಾಚಿಸುತ್ತೇನೆ. ಅವರು(ದ್ರಾವಿಡ್) ಅದ್ಭುತ ವ್ಯಕ್ತಿ ಹಾಗೂ ಅದ್ಭುತ ಆಟಗಾರ ಕೂಡ. ಒಂದು ದಿನ ರಾತ್ರಿ ಅವರೊಂದಿಗೆ ಹೊರಗಡೆ ಹೋಗಿ ಭೋಜನ ಸವಿಯಲು ಇಷ್ಟಪಡುತ್ತೇನೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹೇಳಿದರು.
1990ರ ದಶಕದಲ್ಲಿ ಅಲಾನ್ ಡೊನಾಲ್ಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಭಯಾನಕ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ತಮ್ಮ ವೇಗದ ಬೌಲಿಂಗ್ ಹಾಗೂ ತಮ್ಮ ಸ್ಲೆಡ್ಜಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಿದ್ದರು. ಅದರಂತೆ 1997ರಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಡರ್ಬನ್‌ನಲ್ಲಿ ನಡೆದಿದ್ದ ಒಡಿಐ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಅಲಾನ್ ಡೊನಾಲ್ಡ್ ಸ್ಲೆಡ್ಜ್ ಮಾಡಿದ್ದರು. ಇದೀಗ ಆ ಘಟನೆ ಬಗ್ಗೆ ಅವರೇ ಸ್ವತಃ ದ್ರಾವಿಡ್ ಬಳಿ ಕ್ಷಮೆಯಾಚಿಸಿದ್ದಾರೆ.
ಅಂದಹಾಗೆ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡನೇ ದಿನದಾಟದಲ್ಲಿ 133.3 ಓವರ್‌ಗಳಿಗೆ 404 ರನ್ ಗಳಿಗೆ ಆಲ್‌ಔಟ್ ಆಗಿದೆ. ಮೊದಲನೇ ದಿನದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಶ್ರೇಯಸ್ ಅಯ್ಯರ್, ಗುರುವಾರ 86 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಎರಡನೇ ದಿನವೂ ದೀರ್ಘಾವಧಿ ಬ್ಯಾಟ್ ಮಾಡಿದ ಆರ್ ಅಶ್ವಿನ್ 113 ಎಸೆತಗಳಲ್ಲಿ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
India Vs Bangladesh 1st Test Allan Donald Issues Public Apology To Rahul Dravid For Old Ugly Behaviour.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm