ಬ್ರೇಕಿಂಗ್ ನ್ಯೂಸ್
02-01-22 04:48 pm Mangalore Correspondent ಕರಾವಳಿ
ಮಂಗಳೂರು, ಜ.2 : ಕೊರಗಜ್ಜನ ದೈವಸ್ಥಾನಗಳಿಗೆ ಅಪಚಾರ ಎಸಗಿದ್ದ ಪ್ರಕರಣದ ಆರೋಪಿ ಸಿಕ್ಕಿಬೀಳುತ್ತಿದ್ದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಕೊರಗಜ್ಜನ ಆದಿಸ್ಥಳ ಎಂದೇ ಖ್ಯಾತಿ ಗಳಿಸಿರುವ ಕೊಣಾಜೆ ಬಳಿಯ ಕುತ್ತಾರಿನ ಕೊರಗಜ್ಜನ ದೈವಸ್ಥಾನಕ್ಕೆ ತೆರಳಿ ಕೈಮುಗಿದಿದ್ದಾರೆ.
ಒಂದು ವರ್ಷದಿಂದ ಸರಣಿಯಂತೆ ನಡೆದ ಕೊರಗಜ್ಜನ ಗುಡಿ, ವಿವಿಧ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಘಟನೆ ಪೊಲೀಸರಿಗೆ ಸವಾಲಾಗಿತ್ತು. ಆರು ತಿಂಗಳ ಹಿಂದೆ ಇದೇ ಘಟನೆಯನ್ನು ಮುಂದಿಟ್ಟು ಹಿಂದು ಸಂಘಟನೆಗಳ ಕಾರ್ಯಕರ್ತರು ಕದ್ರಿ ದೇವಸ್ಥಾನದಿಂದ ಕುತ್ತಾರಿನ ಕೊರಗಜ್ಜನ ಗುಡಿಗೆ ಪಾದಯಾತ್ರೆ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇದರಿಂದ ಪೊಲೀಸರ ಮೇಲೆ ಆರೋಪಿ ಬಂಧನಕ್ಕಾಗಿ ತೀವ್ರ ಒತ್ತಡ ಬಿದ್ದಿತ್ತು. ಆರೋಪಿಗಳ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡವನ್ನೂ ರಚಿಸಲಾಗಿತ್ತು.
ಆದರೆ ಸೂಕ್ತ ಸುಳಿವು ಸಿಗದೆ ಆರೋಪಿಗಳ ಬಂಧನ ಆಗಿರಲಿಲ್ಲ. ಹಲವಾರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡಲಾಗಿತ್ತು. ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಬಂಧನ ಆದವರನ್ನೂ ಈ ಬಗ್ಗೆ ವಿಚಾರಣೆ ನಡೆಸಿದ್ದರು. ಇತ್ತೀಚೆಗೆ ನಾಗನ ಬನಕ್ಕೆ ಹಾನಿಗೊಳಿಸಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದವರನ್ನೂ ಕೊರಗಜ್ಜನ ಗುಡಿ ಅಪಚಾರ ಪ್ರಕರಣದಲ್ಲಿ ಕೈವಾಡ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಿದ್ದರು. ಆದರೆ ಯಾವುದೇ ಸುಳಿವು ಲಭಿಸಿರಲಿಲ್ಲ.
ಆದರೆ ಕಾರಣಿಕದ ಕೊರಗಜ್ಜ ಎಂದು ನಂಬುವ ಮಾರ್ನಮಿಕಟ್ಟೆಯ ಕೊರಗಜ್ಜನ ಗುಡಿಗೆ ಅಪಚಾರ ಎಸಗುವ ಕೆಲಸ ಮೊನ್ನೆ ನಡೆದಿತ್ತು. ಆ ಸಂದರ್ಭದಲ್ಲಿಯೂ ಸ್ಥಳೀಯರು ಪ್ರತಿಭಟನೆ ನಡೆಸಿ, ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಅಲ್ಲಿದ್ದ ಸಿಸಿಟಿವಿ ಬೆನ್ನತ್ತಿದ್ದ ಪೊಲೀಸರು ಹುಬ್ಬಳ್ಳಿ ಮೂಲದ ದೇವದಾಸ ದೇಸಾಯಿ ಎಂಬಾತನನ್ನು ಬಂಧಿಸಿದಾಗ, 18 ಕಡೆಗಳಲ್ಲಿ ಅಪಚಾರ ಕೃತ್ಯವನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲಿ ವರೆಗೂ ಇಡೀ ವರ್ಷದ ಬಹುತೇಕ ಪ್ರಕರಣಗಳನ್ನು ಚುಕ್ತಾ ಮಾಡಿದ್ದ ಖುಷಿ ಇದ್ದರೂ, ಪೊಲೀಸ್ ಕಮಿಷರ್ ಮಾತ್ರ ಕೊರಗಜ್ಜನಿಗೆ ಅಪಚಾರ ಮಾಡಿದ ಕೃತ್ಯ ಪತ್ತೆಯಾಗಲೇ ಇಲ್ವಲ್ಲಾ ಎಂಬ ಕೊರಗಿನಲ್ಲಿದ್ದರು.
ಈ ಬಗ್ಗೆ ಆರೋಪಿ ಪತ್ತೆಯಾದರೆ, ಕೊರಗಜ್ಜನ ಗುಡಿಗೆ ಬರುತ್ತೇನೆಂದು ಮನಸ್ಸಿನಲ್ಲಿ ಹರಕೆ ಹೊತ್ತುಕೊಂಡಿದ್ದರೋ ಗೊತ್ತಿಲ್ಲ. ಡಿ.29ರಂದು ಆರೋಪಿ ಪತ್ತೆಯಾಗುತ್ತಲೇ ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ತೆರಳಬೇಕೆಂದು ಆಪ್ತರಲ್ಲಿ ಹೇಳಿಕೊಂಡಿದ್ದರು. ಅದರಂತೆ, ಡಿ.30ರಂದು ರಾತ್ರಿಯೇ ಎಸಿಪಿ ರಂಜಿತ್ ಬಂಡಾರು ಜೊತೆಗೆ ಕುತ್ತಾರಿಗೆ ತೆರಳಿದ್ದು, ಕೊರಗಜ್ಜನಿಗೆ ನಮಿಸಿ ಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಿಷನರ್, ತಾನು ಕಮಿಷನರ್ ಆಗಿ ಬಂದಾಗಲೇ ಈ ರೀತಿಯ ಪ್ರಕರಣ ನಡೆದಿತ್ತು. ಪದೇ ಪದೇ ಆಗುತ್ತಿದ್ದರೂ, ಆರೋಪಿ ಪತ್ತೆಯಾಗದೇ ಸವಾಲಾಗಿತ್ತು. ವರ್ಷದ ಕೊನೆಯಲ್ಲಿ ಆರೋಪಿ ಪತ್ತೆಯಾಗಿದ್ದು ಖುಷಿ ಕೊಟ್ಟಿದೆ. ಹಾಗಾಗಿ ಕೊರಗಜ್ಜನ ಸ್ಥಾನಕ್ಕೆ ತೆರಳಿ ನಮಿಸಿ ಬಂದಿದ್ದೇನೆ ಎಂದು ಹೇಳಿದ್ದಾರೆ.
Mangalore Condoms in temple Police commissioner Shashi Kumar visits koragajja temple for solving the case that was untraced since a year. Acp Ranjith also visited the temple along with Compol.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm