ಬ್ರೇಕಿಂಗ್ ನ್ಯೂಸ್
03-02-26 11:55 am HK News Desk ದೇಶ - ವಿದೇಶ
ದಿಯೋರಿಯಾ (ಉತ್ತರ ಪ್ರದೇಶ), ಫೆ.3 : ಬಾಲಕನ ಮೊಮೋಸ್ ತಿನ್ನುವ ಆಸೆಯನ್ನೇ ದುರುಪಯೋಗ ಮಾಡಿಕೊಂಡ ಬೀದಿ ವ್ಯಾಪಾರಿಗಳು ಆತನಿಗೆ ಉಚಿತವಾಗಿ ಮೆಮೋಸ್ ತೆಗೆದುಕೊಟ್ಟು 85 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೊಮೊಸ್ ಮೇಲಿನ ಅಪಾರ ಆಸೆಯಿಂದ 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಮನೆಯಲ್ಲಿದ್ದ ಸುಮಾರು 85 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಬೀದಿ ವ್ಯಾಪಾರಿಗಳಿಗೆ ನೀಡಿದ್ದಾನೆ. ಸ್ಥಳೀಯವಾಗಿ ಮೊಮೋಸ್ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಬಾಲಕನಿಗೆ ಕೆಲವು ದಿನಗಳಿಂದ ಉಚಿತವಾಗಿ ಮೊಮೊಸ್ ನೀಡಲು ಆರಂಭಿಸಿದ್ದರು. ನಂತರ, ಅದೇ ಆಮಿಷವನ್ನು ಬಳಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತಂದುಕೊಟ್ಟರೆ ಪ್ರತಿ ದಿನ ಉಚಿತವಾಗಿ ಮೊಮೊಸ್ ನೀಡುವುದಾಗಿ ಬಾಲಕನಿಗೆ ಮನವೊಲಿಸಿದ್ದಾರೆ.
ಈ ಬಗ್ಗೆ ಬಾಲಕನ ತಂದೆ ವಿಮಲೇಶ್ ಮಿಶ್ರಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ದೇವಾಲಯದಲ್ಲಿ ಪುರೋಹಿತರಾಗಿರುವ ಮಿಶ್ರಾ, ತಮ್ಮ ಮಗನ ಆಹಾರದ ಆಸೆಯನ್ನೇ ದುರುಪಯೋಗಪಡಿಸಿ ಬೀದಿ ವ್ಯಾಪಾರಿಗಳು ಮನೆ ಬಂಗಾರವನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಿಶ್ರಾ ಅವರ ಸಹೋದರಿ ಮನೆಗೆ ಭೇಟಿ ನೀಡಿ ಚಿನ್ನಾಭರಣಗಳ ಬಗ್ಗೆ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕುಟುಂಬದವರು ಕಪಾಟಿನಲ್ಲಿ ಇಟ್ಟಿದ್ದ ಆಭರಣ ಕಾಣೆಯಾಗಿದ್ದರಿಂದ ಆತಂಕಗೊಂಡಿದ್ದಾರೆ. ನಂತರ ಬಾಲಕನನ್ನು ವಿಚಾರಿಸಿದಾಗ, ಆತ ಆಭರಣಗಳನ್ನು ಮೊಮೊಸ್ ಮಾರಾಟಗಾರರಿಗೆ ನೀಡಿರುವುದಾಗಿ ತಿಳಿಸಿದ್ದಾನೆ.
ಆಭರಣಗಳನ್ನು ಕೊಟ್ಟರೆ ತಾನು ಉಚಿತವಾಗಿ ಮೊಮೊಸ್ ತಿನ್ನಬಹುದೆಂದು ವ್ಯಾಪಾರಿಗಳು ಹೇಳಿದ್ದರಂತೆ. ಕಳವಾದ ಚಿನ್ನಾಭರಣಗಳ ಪ್ರಸ್ತುತ ಮೌಲ್ಯ ಸುಮಾರು 85 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಮೂವರು ಬೀದಿ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
In a shocking incident in Deoria, Uttar Pradesh, a Class 7 boy allegedly handed over gold jewellery worth ₹85 lakh from his home to street vendors who lured him with free momos. The vendors reportedly promised him daily free momos in exchange for the ornaments. The incident came to light after family members noticed the missing gold.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am