ಬ್ರೇಕಿಂಗ್ ನ್ಯೂಸ್
03-02-26 11:31 am Mangalore Correspondent ಕ್ರೈಂ
ಪುತ್ತೂರು, ಫೆ.3: ಪೋಲೆಂಡ್ ದೇಶದಲ್ಲಿ ಉದ್ಯೋಗ ವೀಸಾ ತೆಗೆಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಕಡಬ ಮೂಲದ ದಂಪತಿ 4.50 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬದ ನಿವಾಸಿ ಮನೋಜ್ ಆರ್ಥಿಕ ಸಮಸ್ಯೆಗಳಿಂದಾಗಿ ವಿದೇಶದಲ್ಲಿ ಉದ್ಯೋಗಕ್ಕಾಗಿ ಹುಡುಕಾಟದಲ್ಲಿದ್ದರು. ಜನವರಿ 2023ರ ವೇಳೆ ಪೋಲೆಂಡ್ ದೇಶದಲ್ಲಿ ಕೆಲಸದ ಇದೆ ಎಂದು ಹೇಳಿ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಅವರ ಪತ್ನಿ ಸ್ಮಿತಾ ಮನೋಜ್ ಎಂಬವರ ನಂಬಿಸಿದ್ದಾರೆ. ಆರೋಪಿಗಳು ತಮಗೆ ಪೋಲೆಂಡ್ ದೇಶದಲ್ಲಿ ಉತ್ತಮ ಸಂಪರ್ಕ ಇದ್ದು, ಕೆಲಸ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಅಲ್ಲದೆ ವೀಸಾಗೆ ಸುಮಾರು 5 ಲಕ್ಷ ಹಣ ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಮಾತನ್ನು ನಂಬಿದ ಮನೋಜ್ ಹಂತ ಹಂತವಾಗಿ ಆರೋಪಿಗಳ ಬ್ಯಾಂಕ್ ಖಾತೆಗೆ 3.50 ಲಕ್ಷ ಹಣವನ್ನು ಹಾಕಿದ್ದು, ಅಲ್ಲದೆ ಸ್ಮಿತಾ ಮನೋಜ್ 1 ಲಕ್ಷ ಹಣವನ್ನು ನಗದಾಗಿ ಸ್ವೀಕರಿಸಿದ್ದರು. ಈ ನಡುವೆ 09-01-2024 ರಂದು ಮನೋಜ್ ವೀಸಾ ಸಂದರ್ಶನಕ್ಕೆ ಮುಂಬೈಗೆ ತೆರಳಿದಾಗ, ತಮ್ಮ ವೀಸಾಕ್ಕೆ ಯಾವುದೇ ಅರ್ಜಿಯೇ ಸಲ್ಲಿಸಿಲ್ಲ ಎಂಬುದು ತಿಳಿದುಬಂದಿತ್ತು.
ಹಣ ಪಡೆದಿದ್ದ ದಂಪತಿಯನ್ನು ಸಂಪರ್ಕಿಸಿದಾಗ, ಅವರು ಗೊಂದಲದ ಉತ್ತರ ನೀಡಿದ್ದಾರೆ. ಅಲ್ಲದೆ, ಹಣವನ್ನು 2025ರ ಡಿಸೆಂಬರ್ ಕೊನೆಯ ವಾರದಲ್ಲಿ ವಾಪಸು ಕೊಡುತ್ತೇವೆ ಎಂದಿದ್ದರು. ಆದರೆ, ಸಮಯ ಮೀರಿದರೂ ಹಣ ವಾಪಸು ನೀಡಿಲ್ಲ.
2026ರ ಜನವರಿ ಎರಡನೇ ವಾರದಲ್ಲಿ ಮತ್ತೆ ಸಂಪರ್ಕಿಸಲು ಯತ್ನಿಸಿದಾಗ, ಪರಂಬಲ್ ಜೋಸೆಫ್ ಮನೋಜ್ ಸಂಪರ್ಕಕ್ಕೆ ಸಿಗದೇ ಇದ್ದು, ಸ್ಮಿತಾ ಮನೋಜ್ ಹಣ ನೀಡುವುದನ್ನು ನಿರಾಕರಿಸಿ, “ಹಣ ಕೇಳಿದರೆ ಮಾನಹಾನಿ ಮೊಕದ್ದಮೆ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಇದೀಗ ವಿದೇಶದಲ್ಲಿ ಉದ್ಯೋಗ ಕಲ್ಪಿಸುವುದಾಗಿ ಹಣ ಪಡೆದ ವಂಚನೆ ಮಾಡಿದ ಆರೋಪಿಗಳ ವಿರುದ್ದ ಕ್ರಮಕ್ಕೆ ಮನೋಜ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
A couple from Kadaba has been booked for allegedly cheating a man of ₹4.5 lakh by promising a job visa to Poland. The victim later discovered that no visa application had been filed. After failing to return the money and allegedly issuing threats, a complaint was registered at the Kadaba Police Station.
08-07-26 02:06 pm
HK News Staffer
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
ದೇಶದ 'ತೂಗುಸೇತುವೆಗಳ ಸರದಾರ' ಪದ್ಮಶ್ರೀ ಡಾ. ಗಿರೀಶ್...
07-07-26 10:52 am
ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ; ಯದುವೀರ್ ಒಡ...
06-07-26 04:40 pm
07-07-26 03:22 pm
HK News Staffer
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
ಚೀನಾ ಮಹಾಗೋಡೆ ಮಾದರಿಯಲ್ಲೇ ಆಫ್ರಿಕಾ ಮರುಭೂಮಿಯಲ್ಲಿ...
04-07-26 08:09 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
07-07-26 08:07 pm
HK News Staffer
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm
Panambur Gold Robbery, Photo Released: ಚಿನ್ನದ...
06-07-26 12:28 pm
ಬಂಟ್ವಾಳ ; ಬಸ್ಸಿಗೆ ನಿಂತಿದ್ದ ಪಿಯುಸಿ ವಿದ್ಯಾರ್ಥಿನ...
06-07-26 11:59 am