ಬ್ರೇಕಿಂಗ್ ನ್ಯೂಸ್
01-04-21 04:33 pm Mangaluru correspondent ಕ್ರೈಂ
ಮಂಗಳೂರು, ಎಪ್ರಿಲ್ 1: ತುಳುನಾಡಿನ ಕೊರಗಜ್ಜ, ಬಬ್ಬುಸ್ವಾಮಿ ಬರೀಯ ಗುಡಿಗಳಲ್ಲ. ಈ ನಾಡಿನ ದೈವೀ ಶಕ್ತಿಗಳು. ನಂಬಿದವರಿಗೆ ಇಂಬು ಕೊಡುವ ಸಾಕ್ಷಾತ್ ದೈವೀ ಸ್ವರೂಪಿಗಳು ಎನ್ನುವ ನಂಬಿಕೆ ಇಂದು ನಿನ್ನೆಯದ್ದಲ್ಲ. ಹಳೆ ಕಾಲದಿಂದಲೂ ತುಳುವರು ಜಾತಿ ಭೇದ ಇಲ್ಲದೆ ನಂಬಿಕೊಂಡು ಬಂದ ದೈವಗಳ ಮೇಲಿನ ನಂಬಿಕೆಯದು. ಅಂಥ ದೈವೀ ಸ್ವರೂಪದ ಶಕ್ತಿಗೆ ಅಪಮಾನ ಕೇಳಿಬಂದಾಗ, ತುಳುವರೆಲ್ಲ ಒಕ್ಕೊರಲಿನಲ್ಲಿ ಒಂದೇ ಮಾತು ಹೇಳಿದ್ದು ಅಜ್ಜನೇ ನೋಡಿಕೊಳ್ಳುತ್ತಾನೆ ಎನ್ನೋದು. ಹೌದು.. ಕೊರಗಜ್ಜ ತನ್ನ ದೈವೀ ಶಕ್ತಿಯನ್ನು ತೋರಿಸಿಕೊಟ್ಟಿದ್ದಾನೆ. ದೈವದ ಗುಡಿಗೆ ಅಪಪಾನ ಮಾಡಿದ್ದ ವ್ಯಕ್ತಿ ರಕ್ತವಾಂತಿ ಮಾಡಿಕೊಂಡು ಸತ್ತಿದ್ದಾನೆ.
ಕಳೆದ ಎರಡು – ಮೂರು ತಿಂಗಳಲ್ಲಿ ಮಂಗಳೂರು ಆಸುಪಾಸಿನ ಹಲವೆಡೆ ಕೊರಗಜ್ಜ, ಬಬ್ಬುಸ್ವಾಮಿ ಗುಡಿಗಳಿಗೆ ಅಪವಿತ್ರ ವಸ್ತುಗಳನ್ನು ಹಾಕಿ ಅಪಮಾನಿಸಿದ್ದು ನಡೆದಿತ್ತು. ಉಳ್ಳಾಲ, ಕೊಟ್ಟಾರ, ಬಾಬುಗುಡ್ಡೆ, ದಡ್ಡಲ್ ಕಾಡ್, ಎಮ್ಮೆಕೆರೆ ಹೀಗೆ ಸರಣಿ ರೂಪದಲ್ಲಿ ಕಾಣಿಕೆ ಡಬ್ಬಿಗಳಿಗೆ ಕಾಂಡೋಮ್, ದೈವಿಕ ಶಕ್ತಿಯನ್ನು ಅಪಮಾನಿಸಿ ಬರೆದಿದ್ದ ಪತ್ರಗಳನ್ನು ಹಾಕಲಾಗಿತ್ತು. ಡಬ್ಬಿಗಳನ್ನು ಒಡೆದು ಹಣವನ್ನೂ ದೋಚಿದ್ದ ಘಟನೆಗಳು ನಡೆದಿದ್ದವು. ಆದರೆ, ಈಚೆಗೆ ಒಂದು ತಿಂಗಳಲ್ಲಿ ಯಾವುದೇ ಅಪವಿತ್ರದ ಕುರುಹು ಕಂಡುಬಂದಿರಲಿಲ್ಲ. ಕೊನೆಯ ಬಾರಿಗೆ ಈ ರೀತಿಯ ಪ್ರಕರಣ ನಡೆದಿದ್ದು ಎಮ್ಮೆಕೆರೆಯ ಕೊರಗಜ್ಜ ಮತ್ತು ಕೋಟೆದ ಬಬ್ಬುಸ್ವಾಮಿ ದೈವದ ಗುಡಿಗೆ ಅಪವಿತ್ರಗೊಳಿಸಿದ್ದು.

ತಪ್ಪು ಒಪ್ಪಿಕೊಂಡ ಕಿಡಿಗೇಡಿಗಳು
ಆದರೆ, ಈ ರೀತಿಯ ಘಟನೆ ನಡೆದ ಒಂದೇ ತಿಂಗಳಲ್ಲಿ ಮಾರ್ಚ್ 31ರಂದು ಬುಧವಾರ ಎಮ್ಮೆಕೆರೆಯಲ್ಲಿ ಕೊರಗಜ್ಜನ ಕೋಲ ನಡೆಯುತ್ತಿದ್ದಾಗಲೇ ಇಬ್ಬರು ಬಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ತಮ್ಮದು ತಪ್ಪಾಗಿದೆ, ಒಬ್ಬನ ಸಾವಾಗಿದೆ, ನಮಗೂ ಅದೇ ರೀತಿಯ ಅನುಭವ ಆಗುತ್ತಿದೆ, ಕಾಯಬೇಕು ಎಂದು ಕೊರಗಜ್ಜನಲ್ಲಿ ಬೇಡಿಕೊಂಡಿದ್ದಾರೆ. ಇಷ್ಟಾಗುತ್ತಿದ್ದಂತೆ, ಅಲ್ಲಿ ಸೇರಿದ್ದ ಜನರು ಸ್ತಬ್ಧರಾಗಿದ್ದಾರೆ. ಪ್ರತಿಯಾಗಿ ನುಡಿದ ಕೊರಗಜ್ಜ, ನೀವು ಒಂದು ಕಡೆ ಮಾಡಿದ್ದಲ್ಲ. ಇದು ನನ್ನ ಹಿಡಿತದಲ್ಲಿಲ್ಲ. ಬಬ್ಬುಸ್ವಾಮಿಗೂ ಅಪಮಾನ ಮಾಡಿದ್ದೀರಿ. ನೀವೆಲ್ಲ ಬಂದು ಬಬ್ಬುಸ್ವಾಮಿ, ಗುಳಿಗ ಮತ್ತು ಕೊರಗಜ್ಜ ಈ ಮೂರೂ ದೈವಗಳ ದರ್ಶನ ಮಾಡಿಸಬೇಕು. ಆನಂತರವಷ್ಟೇ ನಿರ್ಣಯ ಹೇಳುತ್ತೇನೆ. ಈಗ ಗಂಧ ಪ್ರಸಾದ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.



ಇಬ್ಬರನ್ನು ಬಂಧಿಸಿ ವಿಚಾರಣೆ
ಬುಧವಾರ ಕೋಲದ ಸಂದರ್ಭದಲ್ಲಿ ಇಬ್ಬರು ಬಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ ವಿಚಾರ ಗೊತ್ತಾದ ಕೂಡಲೇ ಮಂಗಳೂರು ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ತೆರಳಿದ್ದಾರೆ. ಕೊರಗಜ್ಜ ಪಾತ್ರಿಯ ಎದುರಲ್ಲೇ ಇಬ್ಬರು ಹುಡುಗರು ತಮ್ಮದು ತಪ್ಪಾಯ್ತು ಎಂದಿದ್ದನ್ನು ಗಮನಿಸಿದ್ದಾರೆ. ಅಲ್ಲಿಂದಲೇ ಇಬ್ಬರನ್ನೂ ಎತ್ತಾಕ್ಕೊಂಡು ಹೋಗಿದ್ದು, ಅವರನ್ನು ಬಾಯಿಬಿಡಿಸುವ ಪ್ರಯತ್ನ ಮಾಡಿದ್ದಾರೆ. ತೌಫಿಕ್ ಮತ್ತು ಅಬ್ದುಲ್ ರಹೀಂ ಎಂಬ ಇಬ್ಬರನ್ನು ಬಂಧಿಸಿದ್ದು ಪಾಂಡೇಶ್ವರ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ, ಆರೋಪಿಗಳು ಸತ್ಯ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕಳೆದ ಎರಡು – ಮೂರು ತಿಂಗಳಲ್ಲಿ ಮಂಗಳೂರಿನ ಹಲವೆಡೆ ಕೊರಗಜ್ಜ ಮತ್ತು ಬಬ್ಬುಸ್ವಾಮಿ ದೈವದ ಗುಡಿಗಳನ್ನು ಅಪವಿತ್ರಗೊಳಿಸಿದ್ದನ್ನು ಹೇಳಿಕೊಂಡಿದ್ದಾರೆ. ಈ ಪೈಕಿ ಒಂದು ತಿಂಗಳ ಹಿಂದೆ ಅಬ್ದುಲ್ ನವಾಜ್ ಎಂಬಾತ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ.

ಮಂತ್ರವಾದಿಯೆಂದು ಪೋಸು ನೀಡುತ್ತಿದ್ದ !
ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಜೋಕಟ್ಟೆ ನಿವಾಸಿಯಾಗಿರುವ ಅಬ್ದುಲ್ ನವಾಜ್, ಕಳೆದ ಲಾಕ್ಡೌನ್ ಮುನ್ನ ಊರಿಗೆ ಬಂದಿದ್ದ. ಆಬಳಿಕ ತುಳುನಾಡಿನ ದೈವದ ಶಕ್ತಿಗಳ ಬಗ್ಗೆ ತನಗೆ ತೋಚಿದ ರೀತಿ ಹೇಳಿಕೊಂಡಿದ್ದ ನವಾಜ್, ಇಲ್ಲಿನ ಗುಡಿಗಳಲ್ಲಿರುವ ದೈವಗಳಿಗೆ ಅಂಥ ಶಕ್ತಿ ಇಲ್ಲ ಎನ್ನುತ್ತಿದ್ದ. ಕೆಲವರು ತಮ್ಮ ಸಮಸ್ಯೆ ಹೇಳಿಕೊಂಡು ಬಂದರೆ, ಇಂಥ ಕಡೆಗಳಿಗೆ ಹೋಗಿ ಎಂದು ಉಪದೇಶ ಮಾಡುತ್ತಿದ್ದ. ಹೀಗಾಗಿ ಜೋಕಟ್ಟೆ ಆಸುಪಾಸಿನ ಸ್ಥಳೀಯ ಯುವಕರ ಮಧ್ಯೆ ಮಂತ್ರವಾದಿಯೆಂದು ಪೋಸು ನೀಡುತ್ತಿದ್ದ. ಆನಂತರ ಸ್ಥಳೀಯರ ಕೆಲವು ಯುವಕರ ಜೊತೆ ಸೇರಿಕೊಂಡು ಮಂಗಳೂರಿನ ದೈವದ ಗುಡಿಗಳಿಗೆ ಅಪಮಾನಿಸುವ ಕೆಲಸ ಮಾಡಿದ್ದಾನೆ.

ಹಿಂದಿನಿಂದ ಬರ್ತಿದ್ದ ಗುಳಿಗ !
ನಿನ್ನೆ ಬಂದಿದ್ದ ಇಬ್ಬರಲ್ಲಿ ಒಬ್ಬಾತ, ನಾನು ಮಂತ್ರವಾದಿ ನವಾಜ್ ನನ್ನು ಕರೆದುಕೊಂಡು ಹೋಗುತ್ತಿದ್ದೆ ಅಷ್ಟೇ. ನಾನೇನು ತಪ್ಪು ಮಾಡಿಲ್ಲ. ಅವನೇನು ಮಾಡುತ್ತಿದ್ದ ಎಂದು ಗೊತ್ತಿಲ್ಲ. ಎಮ್ಮೆಕೆರೆಯ ಗುಡಿಯ ಬಳಿಗೆ ಬಂದಿದ್ದಾಗ, ಆತನಿಗೆ ದೊಡ್ಡ ಆಕಾರದಲ್ಲಿ ದೈವದ ಸ್ವರೂಪ ಕಾಣಿಸಿಕೊಂಡಿದ್ಯಂತೆ. ಹಾಗಾಗಿ ಹೊರಗಿನ ಕಾಣಿಕೆ ಡಬ್ಬಿಗೆ ಹಾಕಿ ಹಿಂತಿರುಗಿದ್ದೆವು, ಆನಂತರ ಬೈಕಿನಲ್ಲಿ ಹೋಗುತ್ತಿದ್ದಾಗಲೆಲ್ಲ ಹಿಂದಿನಿಂದ ಗುಳಿಗ ಬರುತ್ತಿರುವ ರೀತಿ ಕಾಣಿಸುತ್ತಿರುವುದಾಗಿ ನವಾಜ್ ಹೇಳುತ್ತಿದ್ದ.. ಆನಂತರ ನಿಧಾನಕ್ಕೆ ವಾಂತಿ, ಬೇಧಿ ಕಾಣಿಸಿಕೊಂಡಿತ್ತು. ಟೆಸ್ಟ್ ಮಾಡಿದರೆ ಏನೊಂದೂ ಕಂಡುಬಂದಿರಲಿಲ್ಲ ಎಂದು ಹೇಳಿದ್ದಾನೆ.

ಎಮ್ಮೆಕೆರೆಯಲ್ಲಿ ಕೊರಗಜ್ಜ, ಗುಳಿಗ ಮತ್ತು ಕೋಟೆದ ಬಬ್ಬುಸ್ವಾಮಿ ಗುಡಿಯಿದೆ. ಅಲ್ಲಿ ಅಪವಿತ್ರ ಆಗಿರುವುದನ್ನು ಕಂಡಿದ್ದ ಅಲ್ಲಿನ ಆಡಳಿತ ಕಮಿಟಿಯವರು ಮತ್ತು ಸ್ಥಳೀಯರು ಸೇರಿ ಒಂದು ತಿಂಗಳೊಳಗೆ ಅವರಿಗೆ ತಕ್ಕ ಶಾಸ್ತಿ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದರು. ಇದೇ ವೇಳೆಗೆ, ದಡ್ಡಲ್ ಕಾಡಿನ ಬಬ್ಬುಸ್ವಾಮಿ ಕ್ಷೇತ್ರದಲ್ಲಿಯೂ ಇದೇ ರೀತಿ ಘಟನೆ ನಡೆದು, ಅಲ್ಲಿನ ಭಕ್ತರು ಕೂಡ ಮುಂದಿನ ಕೋಲ ನಡೆಯುವುದರೊಳಗೆ ಅವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಪ್ರಾರ್ಥಿಸಿದ್ದರು.
ಎಮ್ಮೆಕೆರೆಯ ಅರ್ಚಕ ದುರ್ಗಾದಾಸ್ ಹೇಳುವ ಪ್ರಕಾರ, ನಿನ್ನೆ ಬಂದಿದ್ದ ಇಬ್ಬರಲ್ಲಿ ಒಬ್ಬಾತ ತಪ್ಪು ಮಾಡಿದ್ದಾನಂತೆ. ಇನ್ನೊಬ್ಬಾತ ಅವನನ್ನು ಕರತಂದವನು. ಅವರಲ್ಲಿ 13 ಮಂದಿ ಇದ್ದಾರಂತೆ. ಒಬ್ಬ ಮಂತ್ರವಾದಿಯಂತೆ, ಅವನಿಗೆ ಇಲ್ಲಿ ಬಂದಿದ್ದಾಗ ಗುಳಿಗನ ಆಕೃತಿ ಕಂಡಿದ್ಯಂತೆ, ಒಳಗೆ ಬರಲು ಸಾಧ್ಯವಾಗಲ್ಲ ಎಂದು ಹೊರಗಿನಿಂದಲೇ ಹೋಗಿದ್ದನಂತೆ..

ಇಂದು ಮಾಧ್ಯಮದವರು ಎಮ್ಮೆಕೆರೆ ದೈವಸ್ಥಾನಕ್ಕೆ ತೆರಳಿದಾಗ, ಅಲ್ಲಿನ ಭಕ್ತರು ಸೇರಿದ್ದರು. ಜೊತೆಗೆ, ಕೊರಗಜ್ಜನ ಭಕ್ತನಾಗಿರುವ ಎಮ್ಮೆಕೆರೆ ಸಲಾಂ ಅವರ ಮಗ ನಿಷಾದ್ ಕೂಡ ಇದ್ದರು. ಅವರು ಹೇಳುವ ಪ್ರಕಾರ, ನಿನ್ನೆ ಬಂದವರು ಎಲ್ಲಿಯವರೆಂದು ಗೊತ್ತಿಲ್ಲ. ಅವರಲ್ಲಿ ಮೂರು ಸಾವು ಆಗಿದ್ಯಂತೆ. ಒಬ್ಬರು ಮಹಿಳೆ, ಒಂದು ಮಗುವೂ ಸತ್ತಿದೆ ಎಂದಿದ್ದಾರೆ. ಕೋಲ ನಡೆಯುವಾಗ ಪ್ರತಿಬಾರಿ ನಾವು ಬರುತ್ತೇವೆ. ನಿನ್ನೆ ಬಂದಾಗ ಭಾರೀ ಜನ ಸೇರಿದ್ದರು. ವಿಷಯ ಗೊತ್ತಿರಲಿಲ್ಲ. ಬಳಿಕ ಇಬ್ಬರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ಗೊತ್ತಾಯಿತು ಎಂದಿದ್ದಾರೆ. ಒಟ್ಟಿನಲ್ಲಿ ಕೊರಗಜ್ಜ, ಬಬ್ಬುಸ್ವಾಮಿ ಮತ್ತು ಗುಳಿಗ ದೈವದ ಕಾರಣಿಕ ಈಗ ಮಂಗಳೂರಿನ ಜನರಿಗೆ ಗೊತ್ತಾಗಿದೆ.

ವರ್ಷದ ಹಿಂದೆ ಕಾಪುವಿನಲ್ಲೂ ಆಗಿತ್ತು !
ವರ್ಷದ ಹಿಂದೆ ಇದೇ ರೀತಿಯ ಪ್ರಕರಣ ಉಡುಪಿ ಜಿಲ್ಲೆಯ ಕಾಪುವಿನಲ್ಲೂ ನಡೆದಿತ್ತು. ಕೊರಗಜ್ಜನ ಗುಡಿಗೆ ಕಾಂಡೋ ಹಾಕಿ ಅಪಮಾನಿಸಿದ ಕೃತ್ಯ ನಡೆದಿತ್ತು. ಬಳಿಕ ಇಬ್ಬರು ಆರೋಪಿಗಳು ನಿಗೂಢವಾಗಿ ಸಾವು ಕಂಡಿದ್ದರೆ, ಒಬ್ಬನಿಗೆ ಸೊಂಟದ ಕೆಳಗಿನಿಂದ ಬಲವನ್ನೇ ಕಳಕೊಂಡು ಹಾಸಿಗೆ ಹಿಡಿದಿದ್ದ. ಬಳಿಕ ಯುವಕರು ದೈವಕ್ಕೆ ಅಪಮಾನ ಮಾಡಿದ್ದನ್ನು ತಿಳಿದು ಕುಟುಂಬಸ್ಥರು ಬಂದು ಕೊರಗಜ್ಜನ ಗುಡಿಗೆ ಬಂದು ತಪ್ಪು ಕಾಣಿಕೆ ಹಾಕಿದ್ದ ಘಟನೆ ನಡೆದಿತ್ತು. ಮಾಡಿದ ತಪ್ಪಿಗಾಗಿ ಕೋಲವನ್ನೂ ಕೊಡಿಸಿದ್ದರು.
Video:
Two Miscrenats who had put Condoms in Koragajja temple, urinating and making it dirty have been arrested in Mangalore after they themselves surrendered at the koragajja temple in Pandeshwar. It is said another person who was involved in the act has died after vomiting blood.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
31-01-26 04:56 pm
HK News Desk
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
31-01-26 03:38 pm
Mangalore Correspondent
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm