ಬ್ರೇಕಿಂಗ್ ನ್ಯೂಸ್
17-03-26 01:55 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 17: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ವಿಚಾರದಲ್ಲಿ ಆರೋಪ ಮಾಡಿದ್ದ ಸುಮತಿ ನಾಯ್ಕ್ ವಿರುದ್ಧವೇ ಆರೋಪ ಕೇಳಿಬಂದಿದೆ. ಸುಮತಿ ನಾಯ್ಕ್ ನಮ್ಮ ಕುಟುಂಬದ ಮಾನ ಮರ್ಯಾದೆ ತೆಗಿದಿದ್ದಾಳೆ. ಆಕೆ ಮಾನಗೆಟ್ಟವಳಾಗಿದ್ದು, ಮಡಿವಾಳ ಠಾಣೆಯಲ್ಲಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಕೇಸ್ ಇದೆ. ಹಲವಾರು ಅಧಿಕಾರಿಗಳ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದಾಳೆ ಎಂದು ಆಕೆಯ ಅಕ್ಕ ಪ್ರಫುಲ್ಲ ನಾಯ್ಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಕೌಟುಂಬಿಕ ಕಲಹದ ಬಗ್ಗೆ ಮೂಡುಬಿದ್ರೆ ಠಾಣೆಗೆ ದೂರು ನೀಡಿದ್ದಾಗ, ನನ್ನ ಗಂಡನ ಪರವಾಗಿ ಅವಳು ಠಾಣೆಗೆ ಬಂದಿದ್ದಳು. ಠಾಣೆಯಲ್ಲಿ ಬೊಬ್ಬೆ ಹಾಕಿ ಮಾತನಾಡಿದ್ದಕ್ಕೆ ಇನ್ಸ್ ಪೆಕ್ಟರ್ ಬೈದಿದ್ದು, ಈ ವೇಳೆ ಅವಳ ಮಗ ವಿಡಿಯೋ ಮಾಡಿದ್ದಕ್ಕೆ ಜೋರು ಮಾಡಿದ್ದರು. ಆನಂತರ, ಆಕೆಯ ಮಗ ನನಗೆ ಹೊಡೆಯಲು ಬರುವಾಗ ಇನ್ಸ್ ಪೆಕ್ಟರ್ ಸಂದೇಶ್ ಆತನಿಗೆ ಎರಡೇಟು ಬಿಗಿದು ಠಾಣೆಯೊಳಗೆ ಕೂರಿಸಿದ್ದರು.

ಇದೇ ನೆಪದಲ್ಲಿ ಒಂದು ವರ್ಷದಿಂದ ಸುಮತಿ ನಾಯ್ಕ್ ಸಂದೇಶ್ ವಿರುದ್ಧ ಈ ರೀತಿ ಹಗೆತನ ಮಾಡುತ್ತಿದ್ದಾಳೆ. ಸಂದೇಶ್ ಅವರನ್ನು ಇನ್ಸ್ ಪೆಕ್ಟರ್ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಈ ರೀತಿ ಮಾಡುತ್ತಿದ್ದಾಳೆ. ಇದೇ ರೀತಿ ಹಲವಾರು ಮಂದಿಯ ವಿರುದ್ಧ ದೂರು ಕೊಟ್ಟು ಕಿರುಕುಳ ನೀಡಿದ್ದಾಳೆ. ಅವಳಿಂದಾಗಿ ಸಮಾಜದಲ್ಲಿ ನಾವು ತಲೆಯೆತ್ತಿ ನಿಲ್ಲದಂತಾಗಿದೆ ಎಂದು ಪ್ರಫುಲ್ಲ ನಾಯ್ಕ್ ಹೇಳಿದರು.
ಆಕೆಗೆ ಮದುವೆಯಾಗಿ ಗಂಡ ತೀರಿ ಹೋಗಿದ್ದಾನೆ, 17 ವರ್ಷದ ಮಗ ಇದ್ದಾನೆ. ಇದಲ್ಲದೆ, ನನ್ನ ಮಗನನ್ನೂ ಆಕೆಯ ಜೊತೆಗೆ ಇರಿಸಿಕೊಂಡಿದ್ದಾಳೆ. ಏನೂ ಕೆಲಸ ಇಲ್ಲದಿದ್ದರೂ ಬೆಂಗಳೂರಿನಲ್ಲಿದ್ದು ಸಾಕಷ್ಟು ಹಣ ಮಾಡಿದ್ದಾಳೆ. ಹಣದ ದರ್ಪದಲ್ಲಿ ನನ್ನ ಕುಟುಂಬವನ್ನೂ ಹಾಳು ಮಾಡಿದ್ದಾಳೆ. ನನ್ನ ಗಂಡನೂ ಮೂರು ತಿಂಗಳು ಆಕೆಯ ಜೊತೆಗಿದ್ದು ಅವಳ ಅನಾಚಾರ ತಿಳಿದು ಮತ್ತೆ ಬಂದಿದ್ದಾರೆ. ಸಂದೇಶ್ ಒಳ್ಳೆಯವರಾಗಿದ್ದು ನನ್ನ ಕುಟುಂಬದ ವಿಷಯದಲ್ಲಿ ಅವಳು ಬಂದಿದ್ದು ಯಾಕೆಂದು ಬೈದಿದ್ದು ತಪ್ಪಾ ಎಂದು ಪ್ರಶ್ನಿಸಿದರು.
'ಮೂಡುಬಿದ್ರೆ ಸದ್ಯ ಗಲಾಟೆ ಇಲ್ಲದೆ ನೀಟಾಗಿರುವುದಕ್ಕೆ ಸಂದೇಶ್ ಕಾರಣ. ಅವರಿಂದಾಗಿ ಮೂಡುಬಿದ್ರೆಗೆ ಒಳ್ಳೆಯದಾಗಿದೆ, ಹಿಂದೆ ಗಾಂಜಾ, ಡ್ರಗ್ಸ್, ಗಲಾಟೆ ಇತ್ತು. ಸಂದೇಶ್ ಯಾವುದೇ ಅಸಭ್ಯ ರೀತಿ ವರ್ತಿಸಿದ್ದಕ್ಕೆ ಸಾಕ್ಷಿ ಇಲ್ಲ. ಯಾರೋ ಆರೋಪ ಹೇಳ್ತಾರೆ ಅಂತ ಒಬ್ಬ ಅಧಿಕಾರಿ ಬಗ್ಗೆ ನಿರ್ಣಯ ತಗೊಳ್ಳುವುದು ತಪ್ಪಾಗುತ್ತದೆ. ಆರೋಪಗಳಿದ್ದರೆ ತನಿಖೆಯಾಗಲಿ' ಎಂದು ಸುವರ್ಣ ಕರ್ನಾಟಕ ಸಮಿತಿಯ(ದಸಂಸ) ವರ್ತೂರು ಮಂಜುನಾಥ್ ಹೇಳಿದರು. ತಾನು ಮೂಲತಃ ಬೆಂಗಳೂರಿನವನಾಗಿದ್ದು ಮೂಡುಬಿದ್ರೆಯಿಂದ ಮದುವೆಯಾಗಿ ಮೂರು ವರ್ಷಗಳಿಂದ ಇಲ್ಲಿದ್ದೇನೆ, ಸಂದೇಶ್ ಬಗ್ಗೆ ತಿಳಿದುಕೊಂಡಿದ್ದೇನೆ. ಸಂಬಂಧಿಕರ ಜೊತೆಗೆ ಡ್ಯಾನ್ಸ್ ಮಾಡಿದರೆ ತಪ್ಪಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಸದಸ್ಯ ಹರೀಶ್ ಜೊತೆಗಿದ್ದರು.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm