ಬ್ರೇಕಿಂಗ್ ನ್ಯೂಸ್
17-03-26 07:16 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 17: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧದ ಆರೋಪ ಪ್ರಕರಣದ ಬಗ್ಗೆ ಪ್ರಾಥಮಿಕ ವರದಿ ಪಡೆದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರನ್ನು ಇಲಾಖಾ ತನಿಖೆ ಬಾಕಿ ಇರಿಸಿ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.
ಇನ್ಸ್ ಪೆಕ್ಟರ್ ಬಗ್ಗೆ ಆರೋಪ ಮಾಡಿರುವ ಸುಮತಿ ನಾಯ್ಕ್ ಮತ್ತು ಅವರ ಅಕ್ಕನ ವಿಚಾರದಲ್ಲಿ ಕೌಟುಂಬಿಕ ಕಲಹದ ಬಗ್ಗೆ ಪ್ರತ್ಯೇಕ ನಾಲ್ಕು ಕೇಸು ದಾಖಲಾಗಿದೆ. ಈ ಪೈಕಿ ಒಂದು ಕೇಸು ತನಿಖಾ ಹಂತದಲ್ಲಿದ್ದು ಇತರ ಮೂರು ಕೇಸುಗಳು ಹೈಕೋರ್ಟ್ ನಲ್ಲಿ ಸ್ಟೇಯಾಗಿದೆ. ಅವಿತಾ ಮಿನೇಜಸ್ ಎಂಬ ಮತ್ತೊಬ್ಬ ಮಹಿಳೆ ಮಾಧ್ಯಮಕ್ಕೆ ಆರೋಪ ಮಾಡಿದ್ದು ಆಕೆಯ ಗಂಡನ ಬಗ್ಗೆ ನಾಲ್ಕು ಕೇಸು ಮೂಡುಬಿದ್ರೆಯಲ್ಲಿ ದಾಖಲಾಗಿದೆ. ಒಂದರಲ್ಲಿ ಬಡ ಕುಟುಂಬದ ಕಿಡ್ನಿ ಚಿಕಿತ್ಸೆಗೆಂದು ಹಣ ಸಂಗ್ರಹಿಸಿದ ವಿಚಾರದಲ್ಲಿ ದಂಪತಿ ವಿರುದ್ಧ ಕೇಸು ದಾಖಲಾಗಿದ್ದು ಇನ್ಸ್ ಪೆಕ್ಟರ್ ಸಾಕ್ಷ್ಯ ಸಂಗ್ರಹಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ವೇಳೆ, ಆಕೆಗೆ ಇನ್ಸ್ ಪೆಕ್ಟರ್ ಕಿರುಕುಳ ನೀಡಿದ್ದಾರೆಂಬ ವಿಚಾರದಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಜೊತೆಗಿದ್ದ ಇಬ್ಬರು ಮೀಡಿಯಾದವರು ಮತ್ತು ಒಬ್ಬರು ವಕೀಲರನ್ನು ಪ್ರಶ್ನಿಸಿದ್ದು ಹಣ ಕೇಳಿರುವುದು ಮತ್ತು ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ್ದಾರೆ.
ಇವರಿಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರೆ, ಆಡಿಯೋದಲ್ಲಿ ಮಾತನಾಡಿದ್ದು ಮತ್ತು ವಿಡಿಯೋದಲ್ಲಿ ಕಾಣಿಸಿಕೊಂಡವರು ಬೇರೆಯೇ ಆಗಿದ್ದಾರೆ. ಆದರೆ ಆಡಿಯೋ ಮತ್ತು ವಿಡಿಯೋದಲ್ಲಿ ಇನ್ಸ್ ಪೆಕ್ಟರ್ ಮಾತು, ವರ್ತನೆ ಪ್ರಶ್ನಾರ್ಹವಾಗಿದ್ದು ಬೇಜವಾಬ್ದಾರಿಯಿಂದ ಮಾತನಾಡಿದ್ದು ಕಂಡುಬಂದಿದೆ. ಇದೇ ವೇಳೆ, ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮಹಿಳೆಯರು ಘಟನೆ ಬಗ್ಗೆ ತನಿಖೆಗೆ ಪೊಲೀಸ್ ದೂರು ಕೊಡಲು ನಿರಾಕರಿಸಿದ್ದಾರೆ. ಆದರೆ ಇನ್ಸ್ ಪೆಕ್ಟರ್ ಆಗಿದ್ದುಕೊಂಡು ಮಹಿಳೆಯರ ಜೊತೆಗೆ ದುರ್ನಡತೆ ತೋರಿದ್ದಕ್ಕಾಗಿ ಸಂದೇಶ್ ಅವರನ್ನು ಕರ್ತವ್ಯದಿಂದ ಅಮಾನತು ಪಡಿಸಿದ್ದು ಸಮಗ್ರ ತನಿಖೆ ನಡೆಸಲು ಎಸಿಪಿಗೆ ಹೊಣೆ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Moodbidri Police Inspector Sandesh has been suspended from duty pending a departmental inquiry, following allegations of misconduct involving women. The action was taken by Mangaluru Police Commissioner Sudheer Reddy after reviewing a preliminary report on the matter.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am