ಬ್ರೇಕಿಂಗ್ ನ್ಯೂಸ್
03-02-26 09:06 pm HK News Desk ದೇಶ - ವಿದೇಶ
ನವದೆಹಲಿ, ಫೆ.3 : ಸುಪ್ರೀಂ ಕೋರ್ಟ್ ವಾಟ್ಸಾಪ್ ಜಾಲತಾಣದ 2021ರ ಗೌಪ್ಯತಾ ನೀತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅದರ ಮಾಲೀಕ ಮೆಟಾ ಕಂಪನಿಗೆ ಕಠಿಣ ಎಚ್ಚರಿಕೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, “ನೀವು ಭಾರತೀಯ ಬಳಕೆದಾರರ ಖಾಸಗಿತನದ ಜೊತೆಗೆ ಆಟವಾಡಬಾರದು. ನಮ್ಮ ದೇಶದ ನಾಗರಿಕರ ಡೇಟಾವನ್ನು ಹಂಚಿಕೊಳ್ಳಲು ಅವಕಾಶವಿಲ್ಲ. ಗೌಪ್ಯತೆ ಉಳಿಸೋಕೆ ಸಾಧ್ಯವಿಲ್ಲವೆಂದರೆ ಭಾರತದಿಂದ ನಿರ್ಗಮಿಸಿ” ಎಂದು ಖಡಕ್ ಎಚ್ಚರಿಕೆ ನೀಡಿದೆ.
ಒಟಿಟಿ ಮೆಸೇಜಿಂಗ್ ಮಾರುಕಟ್ಟೆಯ ಪ್ರಾಬಲ್ಯವನ್ನು ವಾಟ್ಸಾಪ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಕಾರಣಕ್ಕೆ ಭಾರತೀಯ ಸ್ಪರ್ಧಾ ಆಯೋಗವು ವಾಟ್ಸಾಪ್ ಮತ್ತು ಮೆಟಾಗೆ 213 ಕೋಟಿ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಮೆಟಾ ಸಂಸ್ಥೆಗಳು ಸುಪ್ರೀಂ ಮೆಟ್ಟಿಲೇರಿದ್ದವು. ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು ಗೌಪ್ಯತೆ ಕಾಯ್ದುಕೊಳ್ಳದ ವಾಟ್ಸಾಪ್ ನೀತಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
"ನೀವು ದೇಶದ ಸಂವಿಧಾನ ಪಾಲಿಸಲು ಸಾಧ್ಯವಿಲ್ಲವೆಂದಾದರೆ, ಭಾರತದಿಂದ ನಿರ್ಗಮಿಸಿ. ಯಾವುದೇ ಭಾರತೀಯ ನಾಗರಿಕರ ಗೌಪ್ಯತೆಯನ್ನು ಹಾನಿಗೊಳಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಎಚ್ಚರಿಸಿದ್ದಾರೆ. ವಾಟ್ಸಾಪ್ ನೀತಿ ಸಾಮಾನ್ಯ ಜನರಿಗೆ ಅರ್ಥವಾಗದ ರೀತಿಯಲ್ಲಿ ರೂಪಿಸಿರುವುದಕ್ಕೂ ಟೀಕಿಸಿದ್ದು ನಮ್ಮಂಥವರಿಗೇ ನಿಮ್ಮ ನೀತಿಗಳು ಅರ್ಥವಾಗುತ್ತಿಲ್ಲ. ಬಿಹಾರದ ಎಲ್ಲಿಯೋ ಗ್ರಾಮೀಣ ಪ್ರದೇಶದ ಬಡ ಮಹಿಳೆ, ಬೀದಿ ವ್ಯಾಪಾರಿ ಅಥವಾ ತಮಿಳುನಾಡಿನ ಯಾವುದೋ ಹಳ್ಳಿ ಜನರಿಗೆ ನಿಮ್ಮ ಗೌಪ್ಯತಾ ನೀತಿ ಅರ್ಥವಾಗುತ್ತದೆಯೇ?” ಎಂದು ಪೀಠ ಪ್ರಶ್ನಿಸಿದೆ.
“ಒಬ್ಬ ವೈದ್ಯರು ಮೂರು ಔಷಧಿಗಳನ್ನು ಕಳುಹಿಸಿದ ಐದೇ ನಿಮಿಷದಲ್ಲಿ ಅದೇ ಔಷಧಿಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಸುರಿಸುತ್ತೀರಿ ಎಂದು ಮುಖ್ಯ ನ್ಯಾಯಮೂರ್ತಿಗಳು ತರಾಟೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವಿಚಾರಣೆ ಪೂರ್ಣಗೊಳ್ಳುವ ವರೆಗೆ ವಾಟ್ಸಾಪ್ ಯಾವುದೇ ಭಾರತೀಯ ಬಳಕೆದಾರರ ಡೇಟಾವನ್ನು ಯಾವ ಕಂಪನಿಯೊಂದಿಗೂ ಹಂಚಿಕೊಳ್ಳಬಾರದು ಎಂದು ಸೂಚಿಸಿದೆ. ಜನರ ಡಾಟಾವನ್ನು ಮಾರಿಕೊಳ್ಳುವ ವಿಚಾರದಲ್ಲಿ ಚೆಲ್ಲಾಟ ಬೇಡ. ನೀವು ಈ ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ. ಇಲ್ಲದಿದ್ದರೆ ಸೆಕೆಂಡ್ ಒಳಗಡೆ ನಿಮ್ಮನ್ನು ದೇಶದಿಂದ ಹೊರಗಟ್ಟಬಲ್ಲೆವು ಅನ್ನುವುದನ್ನು ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಸಿದರು.
The Supreme Court has strongly criticized WhatsApp’s 2021 privacy policy and warned Meta against compromising Indian users’ data. The court said user privacy cannot be violated and directed that no data be shared during the ongoing hearing. It also questioned the clarity of WhatsApp’s policy and cautioned the company to respect Indian laws or leave the country.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am