ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲೂ ಅಪಮಾನ ಕೃತ್ಯ ! ಕಾಂಡೋಮ್ ಪತ್ತೆ

04-04-21 01:26 pm       Mangaluru correspondent   ಕರಾವಳಿ

ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದ್ದು, ಆಡಳಿತ ಸಮಿತಿ ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. 

ಉಳ್ಳಾಲ, ಎ.4: ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದ್ದು, ಆಡಳಿತ ಸಮಿತಿ ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. 

ಕೊಂಡಾಣ ಕ್ಷೇತ್ರದ ಕಟ್ಟೆ ಜಾತ್ರೆಯು ಕೆಲ ದಿನಗಳ ಹಿಂದಷ್ಟೆ ನಡೆದಿದ್ದು ಆ ಪ್ರಯುಕ್ತ ಆಡಳಿತ ಸಮಿತಿಯು ಇಂದು ಬೆಳಗ್ಗೆ ಕಾಣಿಕೆ ಹುಂಡಿಗಳನ್ನು ತೆರೆದು ಹಣ ಎಣಿಸುತ್ತಿದ್ದ ಸಂದರ್ಭದಲ್ಲಿ ಕೊಂಡಾಣ ಕ್ಷೇತ್ರದ ಮುಖ್ಯ ದ್ವಾರದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ.

ಎರಡು ತಿಂಗಳ ಹಿಂದೆ ಉಳ್ಳಾಲ ನಗರಸಭಾ ಕಚೇರಿಯ ಹತ್ತಿರದ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಇಬ್ಬರು ಆರೋಪಿಗಳು ಮಂಗಳೂರಿನಲ್ಲಿ ಕೊರಗಜ್ಜನ ಕೋಲಕ್ಕೆ ಬಂದು ತಪ್ಪೊಪ್ಪಿಗೆ ಮಾಡಿದ್ದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. 

ಇದರ ಬೆನ್ನಲ್ಲೇ ಕಾರಣಿಕ ಕ್ಷೇತ್ರ‌ ಕೊಂಡಾಣ ದೈವಸ್ಥಾನದಲ್ಲಿ ಆರೋಪಿಗಳು ದುಷ್ಕೃತ್ಯ ಎಸಗಿರುವುದು ಕಂಡುಬಂದಿದೆ. ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Condoms found inside Kondana Temple offerning box in Ullal. Recently two persons were caught for doing the same in Koragajja temple.