ಲವ್ ಮ್ಯಾರೇಜ್​​ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚುಚ್ಚಿ ತಂದೆ - ತಾಯಿಯನ್ನೇ ಫಿನಿಷ್ ಮಾಡಿದ ರಾಕ್ಷಸಿ ಮಗಳು, ಡೆಡ್ಲಿ ಇನ್ಸ್‌ಟಾಗ್ರಾಮ್‌ !  

30-01-26 10:57 pm       HK News Desk   ಕ್ರೈಂ

ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ತನ್ನ ವೃತ್ತಿಪರ ತರಬೇತಿಯನ್ನು ಬಳಸಿಕೊಂಡು ನಿದ್ರಾಜನಕ ಇಂಜೆಕ್ಷನ್‌ ನೀಡುವ ಮೂಲಕ ತನ್ನ ಹೆತ್ತವರನ್ನು ಕೊಂದ ಆರೋಪದ ಮೇಲೆ 25 ವರ್ಷದ ನರ್ಸ್ ಅನ್ನು ಬಂಧಿಸಲಾಗಿದೆ.

ಹೈದರಾಬಾದ್‌, ಜ.30 : ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ತನ್ನ ವೃತ್ತಿಪರ ತರಬೇತಿಯನ್ನು ಬಳಸಿಕೊಂಡು ನಿದ್ರಾಜನಕ ಇಂಜೆಕ್ಷನ್‌ ನೀಡುವ ಮೂಲಕ ತನ್ನ ಹೆತ್ತವರನ್ನು ಕೊಂದ ಆರೋಪದ ಮೇಲೆ 25 ವರ್ಷದ ನರ್ಸ್ ಅನ್ನು ಬಂಧಿಸಲಾಗಿದೆ.

ಆರೋಪಿ ನಕ್ಕಲ ಸುರೇಖಾ ತನ್ನ ತಾಯಿ ಲಕ್ಷ್ಮಿ (54) ಮತ್ತು ತಂದೆ ದಶರತ್ (58) ಅವರಿಗೆ ಆರ್ಟಾಸಿಲ್ ಎಂಬ ನಿದ್ರಾಜನಕ ಔಷಧವನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್‌ ಮಾಡಿ ಅವರನ್ನು ಸಾಯಿಸಿದ ಆರೋಪ ಹೊತ್ತಿದ್ದಾಳೆ. ಸುರೇಖಾ ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಂಜೆಕ್ಷನ್‌ ಮತ್ತು ಅದನ್ನು ನೀಡುವ ಜ್ಞಾನವನ್ನು ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾರಂ ಪೊಲೀಸರ ಪ್ರಕಾರ, ಸುರೇಖಾ ಸೋಶಿಯಲ್‌ ಮೀಡಿಯಾ ಇನ್ಸ್‌ಟಾಗ್ರಾಮ್‌ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆ ವ್ಯಕ್ತಿ ಬೇರೆ ಜಾತಿಗೆ ಸೇರಿದವನಾದ್ದರಿಂದ, ಆಕೆಯ ಪೋಷಕರು ಈ ಸಂಬಂಧವನ್ನು ವಿರೋಧಿಸಿದರು, ಇದು ಮನೆಯಲ್ಲಿ ಪದೇ ಪದೇ ಜಗಳಗಳಿಗೆ ಕಾರಣವಾಗಿತ್ತು.

ನರ್ಸಿಂಗ್‌ ಕೌಶಲ ತನಗೆ ಇದ್ದ ಕಾರಣ ಕೊಲೆ ಮಾಡಿದರೂ ನನ್ನ ಮೇಲೆ ಅನುಮಾನ ಬರದಂತೆ ಮಾಡಬಹುದು ಎಂದು ಸುರೇಖಾ ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 24 ರ ರಾತ್ರಿ, ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವಳು ತನ್ನ ಹೆತ್ತವರಿಗೆ ನಿದ್ರಾಜನಕ ಇಂಜೆಕ್ಷನ್‌ನ ಹೈ ಡೋಸ್‌ ನೀಡಿದ್ದಾಳೆ ಎಂದು ಹೇಳಲಾಗಿದೆ.

ಇಂಜೆಕ್ಷನ್‌ ಬೆನಲ್ಲೇ ಪ್ರಜ್ಞೆ ಕಳೆದುಕೊಂಡ ತಂದೆ-ತಾಯಿ;

ಇಂಜೆಕ್ಷನ್‌ ಚುಚ್ಚಿದ ನಂತರ, ಇಬ್ಬರೂ ಪೋಷಕರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಸುರೇಖಾ ತನ್ನ ಸಹೋದರನಿಗೆ ಇದರ ಮಾಹಿತಿ ನೀಡಿದ್ದಾಳೆ.ಇಬ್ಬರೂ ಸೇರಿ ತಂದೆ-ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ತಂದೆ-ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತರ ಪುತ್ರ ದೂರು ನೀಡಿದ್ದ ಪರಿಣಾಮ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದರು. ಆದರೆ ಮನೆಯಲ್ಲಿ ಇಂಜೆಕ್ಷನ್ ಹಾಗೂ ಅವುಗಳಿಗೆ ರಕ್ತದ ಕಲೆಗಳು ಇರೋದನ್ನು ಗಮನಿಸಿದ ಪೊಲೀಸರು, ಮೃತರ ಮಗಳನ್ನೇ ಪ್ರಶ್ನಿಸಿದ ವೇಳೆ ಘಟನೆ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಶ್ನೆ ಮಾಡುತ್ತಿದ್ದಂತೆ ಆರೋಪಿ, ಮೃತ ಮಗಳಾದ ಸುರೇಖಾ ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ ಎಂದು ಮಾಧ್ಯಮಗಳಿಗೆ ಎಸ್​ಐ ವಿಮಲ ತಿಳಿಸಿದ್ದಾರೆ.

ಇಂಜೆಕ್ಷನ್ ಓವರ್ ಡೋಸ್ ನೀಡಿದರೆ ಸಾಯುತ್ತಾರೆ ಅಂತ ತಿಳಿದಿದ್ದರೂ ಕೃತ್ಯಕ್ಕೆ ಪ್ರೀ ಪ್ಲ್ಯಾನ್ ಮಾಡಿಯೇ ತಂದೆ-ತಾಯಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸುರೇಖಾಗೆ ಇನ್​ ಸ್ಟಾದಲ್ಲಿ ಸಂಗಾರೆಡ್ಡಿ ಮೂಲದ ಯುವಕನೊಂದಿಗೆ ಪರಿಚಯವಾಗಿ ಇಬ್ಬರು ಪ್ರೀತಿಯ ಬಲೆಗೆ ಸಿಲುಕಿದ್ದರಂತೆ. ಆದರೆ ಇಬ್ಬರ ಜಾತಿ ಬೇರೆ ಆಗಿದ್ದ ಕಾರಣ ಸುರೇಖಾ ಪೋಷಕರು ಮದುವೆ ನಿರಾಕರಿಸಿದ್ದರಂತೆ. ಇದೇ ಕಾರಣಕ್ಕೆ ಅಸಮಾಧಾನಗೊಂಡಿದ್ದ ಸುರೇಖಾ ತಂದೆ-ತಾಯಿಯನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಳಂತೆ. ಆದರೆ ತನ್ನ ಸಹೋದರಿ ಇಂತಹ ಕೆಲಸ ಮಾಡ್ತಾಳೆ ಅಂತ ನಾನು ಊಹೆಯೂ ಮಾಡಿರಲಿಲ್ಲ ಎಂದು ಆರೋಪಿಯ ಸಹೋದರ ಅಶೋಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.

ಇತ್ತೀಚಿನ ಆಧುನಿಕ ಸಮಯದಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಕುಟುಂಬ ಸದಸ್ಯರನ್ನೇ ಕೊಲೆ ಮಾಡುವ ಘಟನೆಗಳು ಹೆಚ್ಚಾಗುತ್ತಿದೆ. ಒಬ್ಬರ ಮೇಲೆ ಪ್ರೇಮ ತೋರುತ್ತಿದ್ದರೂ ಅದೇ ಸಮಯದಲ್ಲಿ ಸ್ವಂತವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಆ ಸಮಯದಲ್ಲಿ ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಒಳಗಾಗಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ ಎಂದು ಮನೋವಿಜ್ಞಾನ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

A 25-year-old nurse has been arrested in Vikarabad district for allegedly killing her parents by administering a high dose of a sedative injection, police said.  The accused, identified as Nakkala Surekha, is alleged to have injected her mother Lakshmi (54) and father Dasarath (58) with an excessive dose of a sedative drug reportedly used in medical practice. Surekha, who worked at a private hospital in Sangareddy, is believed to have used her professional knowledge to carry out the act.