ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ- ಕಾಸರಗೋಡು ಮಧ್ಯೆ ಪ್ರತ್ಯೇಕ ರೈಲು ಸಂಪರ್ಕಕ್ಕೆ ಸಂಪುಟ ಅಸ್ತು  

29-01-26 11:07 pm       HK News Desk   ದೇಶ - ವಿದೇಶ

ಕೇರಳ ಸರ್ಕಾರವು ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ವಿವಾದಿತ ಸಿಲ್ವರ್ ಲೈನ್ (K-Rail) ಯೋಜನೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಬೆನ್ನಲ್ಲೇ, 583 ಕಿ.ಮೀ ಉದ್ದದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್‌ಗೆ ಕೇರಳ ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿದೆ.

ತಿರುವನಂತಪುರಂ, ಜ.29 : ​ಕೇರಳ ಸರ್ಕಾರವು ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ. ವಿವಾದಿತ ಸಿಲ್ವರ್ ಲೈನ್ (K-Rail) ಯೋಜನೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಬೆನ್ನಲ್ಲೇ, 583 ಕಿ.ಮೀ ಉದ್ದದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್‌ಗೆ ಕೇರಳ ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿದೆ.

ದೆಹಲಿ-ಮೀರತ್ ಕಾರಿಡಾರ್ ಮಾದರಿಯಲ್ಲಿ ಈ ರೈಲು ಮಾರ್ಗ ಬರಲಿದ್ದು, ಗಂಟೆಗೆ 160 ರಿಂದ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.​ ಈ ಹಿಂದಿನ ಯೋಜನೆಗೆ ಭೂಸ್ವಾಧೀನ ಮತ್ತು ಪರಿಸರ ಸಮಸ್ಯೆಗಳು ದೊಡ್ಡ ಅಡ್ಡಿಯಾಗಿದ್ದವು. ಇದನ್ನು ತಪ್ಪಿಸಲು, ಹೊಸ ಯೋಜನೆಯಲ್ಲಿ ರೈಲು ಮಾರ್ಗವನ್ನು ಹೆಚ್ಚಾಗಿ ಎಲಿವೇಟೆಡ್ ಕಾರಿಡಾರ್ (ಮೇಲ್ಸೇತುವೆ) ಮೇಲೆ ನಿರ್ಮಿಸಲು ನಿರ್ಧರಿಸಲಾಗಿದೆ. ಸುರಂಗಗಳು ಮತ್ತು ತಡೆಗೋಡೆಗಳ ಬಳಕೆಯನ್ನು ಕಡಿಮೆಗೊಳಿಸಲಾಗಿದೆ.

​ಮೊದಲ ಹಂತದಲ್ಲಿ ತಿರುವನಂತಪುರಂನಿಂದ ತೃಶೂರ್‌ ವರೆಗೆ (284 ಕಿ.ಮೀ) ಇರಲಿದೆ. ಇದನ್ನು 2027 ರಿಂದ 2033 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಎರಡನೇ ಹಂತದಲ್ಲಿ ಈ ಮಾರ್ಗವನ್ನು ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡಿನ ವರೆಗೆ ವಿಸ್ತರಿಸಲಾಗುವುದು. ಒಟ್ಟಾರೆ 12 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಇದೆ.

ದೆಹಲಿ - ಮೀರತ್ ಕಾರಿಡಾರ್ ಮಾದರಿಯಲ್ಲೇ ಈ ​ಯೋಜನೆಯ ವೆಚ್ಚವನ್ನು ರಾಜ್ಯ ಸರ್ಕಾರ (20%), ಕೇಂದ್ರ ಸರ್ಕಾರ (20%) ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ (60%) ಭರಿಸಲು ನಿರ್ಧರಿಸಲಾಗಿದೆ. ​ಈ ಯೋಜನೆ ಕೇವಲ ಕೇರಳಕ್ಕೆ ಸೀಮಿತವಾಗದೆ, ಭವಿಷ್ಯದಲ್ಲಿ ನೆರೆಯ ರಾಜ್ಯಗಳಿಗೂ ವಿಸ್ತರಣೆಯಾಗುವ ಗುರಿ ಹೊಂದಿದೆ. ಮಂಗಳೂರು (ಕರ್ನಾಟಕ), ಕೊಯಮತ್ತೂರು (ತಮಿಳುನಾಡು) ಮತ್ತು ಕನ್ಯಾಕುಮಾರಿಗೆ ಜೋಡಿಸುವ ದೀರ್ಘಕಾಲದ ಯೋಜನೆಯೂ ಇದರಲ್ಲಿದೆ.

The Kerala government has approved a new 583-km high-speed RRTS corridor between Thiruvananthapuram and Kasaragod, with trains running up to 180 kmph. Planned as an elevated rail line to avoid land and environmental issues, the project will be implemented in phases and funded jointly by the state, centre, and international agencies.