ಬ್ರೇಕಿಂಗ್ ನ್ಯೂಸ್
28-01-26 11:16 pm HK News Desk ದೇಶ - ವಿದೇಶ
ಮುಂಬೈ, ಜ.28 : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿದ್ದ ವಿಮಾನ ಪತನಕ್ಕೆ ಮಂಜಿನಿಂದ ಆವೃತಗೊಂಡ ವಾತಾವರಣ ಮತ್ತು ಇದರಿಂದ ರನ್ ವೇ ಕಾಣದೇ ಇದ್ದುದೇ ಕಾರಣ ಎಂಬ ಮಾಹಿತಿ ಮೇಲ್ನೋಟಕ್ಕೆ ಕೇಳಿಬರುತ್ತಿದೆ. ಐದು ಜನರಿದ್ದ ವಿಮಾನವು ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿದ್ದು, ಪುಣೆ ಜಿಲ್ಲೆಯ ಬಾರಾಮತಿ ನಿಲ್ದಾಣದಲ್ಲಿ 8.45ಕ್ಕೆ ಇಳಿಯಬೇಕಿತ್ತು. ಆದರೆ 5.50ರ ವೇಳೆಗೆ ರನ್ ವೇ ಬಳಿಯಲ್ಲೇ ಹೊರಗಡೆ ಪತನವಾಗಿತ್ತು.
8.18ರ ವೇಳೆಗೆ ವಿಮಾನದ ಪೈಲಟ್ ಬಾರಾಮತಿ ನಿಲ್ದಾಣವನ್ನು ಸಂಪರ್ಕಿಸಿದ್ದಾರೆ, ಬೆಳಕು ಮಂದವಾಗಿದ್ದು ರನ್ ವೇ ಸರಿಯಾಗಿ ಕಾಣಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಎಟಿಸಿಯಿಂದ ರನ್ ವೇ 11 ಖಾಲಿಯಿದ್ದು ಇಳಿಯಬಹುದು, ಫ್ಲೈಟ್ ಇಳಿಸುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು ಎನ್ನುವ ಸಂದೇಶ ಹೋಗಿತ್ತು. ಆದರೆ ನಿಲ್ದಾಣಕ್ಕೆ ಒಂದು ಸುತ್ತು ಹೊಡೆದ ವಿಮಾನವು ಕೆಲವೇ ಕ್ಷಣಗಳಲ್ಲಿ ರನ್ ವೇಯಿಂದ ಹೊರಗಡೆ ಪತನವಾಗಿತ್ತು. ಲೀಯರ್ ಜೆಟ್ 45 ವಿಮಾನದಲ್ಲಿ ಯಾವುದೇ ತಾಂತ್ರಿಕ ತೊಂದರೆಗಳಿರಲಿಲ್ಲ. ಇಬ್ಬರು ಪೈಲಟ್ ಗಳೂ ಅನುಭವಿಗಳಾಗಿದ್ದು ಪ್ರಮುಖ ಪೈಲಟ್ ಸುಮಿತ್ ಕಪೂರ್ 16 ಸಾವಿರ ಕಿಮೀ ಹಾರಾಟದ ಅನುಭವ ಹೊಂದಿದ್ದರು, ಸಹ ಪೈಲಟ್ ಶಾಂಭವಿ ಪಾಠಕ್ 1500 ಕಿಮೀ ಹಾರಾಟದ ಅನುಭವ ಹೊಂದಿದ್ದರು ಎಂದು ವಿಮಾನದ ಕಂಪನಿ ತಿಳಿಸಿದೆ.
ವಿಮಾನ ಪತನವಾಗುತ್ತಲೇ ಎರಡು ಬಾರಿ ಸ್ಫೋಟಗೊಂಡಿದ್ದು, ಇದರ ಸದ್ದು ಕೇಳಿ ಸ್ಥಳೀಯರು ಓಡಿ ಬಂದಿದ್ದಾರೆ. ಸ್ಫೋಟ ಆಗುತ್ತಲೇ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ನಾವು ರಕ್ಷಣೆಗೆ ತೆರಳಿದ್ದೆವು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಜಿತ್ ಪವಾರ್ ಸೇರಿದಂತೆ ಸುಟ್ಟು ಹೋಗಿದ್ದ ದೇಹಗಳನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಷ್ಟರಲ್ಲಿಯೇ ಅವರೆಲ್ಲ ಮೃತಪಟ್ಟಿದ್ದರು. ಬಾರಾಮತಿ ವಿಮಾನ ನಿಲ್ದಾಣ ಟೇಬಲ್ ಟಾಪ್ ರೀತಿಯಿದ್ದು ಅಲ್ಲದೆ, ವಿಮಾನ ಲ್ಯಾಂಡಿಂಗ್ ವೇಳೆ ಆಧುನಿಕ ಮಾದರಿಯ ತಂತ್ರಜ್ಞಾನ ಹೊಂದಿಲ್ಲ.
ಮೂರು ದಿನಗಳ ಶೋಕಾಚರಣೆ
ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮೂರು ದಿನಗಳಲ್ಲಿ ಎಲ್ಲ ರೀತಿಯ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ರಾಷ್ಟ್ರ ಧ್ವಜ ಹಾರಿಸುವ ಸ್ಥಳಗಳಲ್ಲಿ ಅರ್ಧಕ್ಕೆ ಧ್ವಜ ಇಳಿಸಲು ಸೂಚಿಸಲಾಗಿದೆ. ಅಜಿತ್ ಪವಾರ್ ಅಂತ್ಯಕ್ರಿಯೆ ಗುರುವಾರ ಬಾರಾಮತಿಯಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ, ಕಾಂಗ್ರೆಸಿನ ಗಣ್ಯರು ಭಾಗವಹಿಸಲಿದ್ದಾರೆ.
ಅಜಿತ್ ಪವಾರ್ ನಿಧನಕ್ಕೆ ದೇಶಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಈ ದುರಂತದ ಹಿಂದೆ ಷಡ್ಯಂತ್ರವಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರೀಯ ತನಿಖಾ ಏಜನ್ಸಿಗಳು ನಂಬಿಕೆ ಕಳಕೊಂಡಿವೆ, ಹೀಗಾಗಿ ಸುಪ್ರೀಂ ಮೇಲ್ವಿಚಾರಣೆಯಲ್ಲಿ ಮಾತ್ರ ತನಿಖೆ ನಡೆದರೆ ಸತ್ಯಾಂಶ ಹೊರಬರಬಹುದು ಎಂದಿದ್ದಾರೆ. ಆದರೆ ಮಮತಾ ಮಾತನ್ನು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಿರಾಕರಿಸಿದ್ದು, ವಿಮಾನ ಅಪಘಾತ ಆಕಸ್ಮಿಕ, ಇದರಲ್ಲೇನೂ ಸಂಶಯ ಇಲ್ಲ. ರಾಜಕೀಯ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ, ವಿಮಾನ ಅಪಘಾತದ ಬಗ್ಗೆ ಆಘಾತ ವ್ಯಕ್ತವಾಗಿದ್ದು ತನಿಖೆಗೆ ಕೇಂದ್ರ ವಿಮಾನ ಯಾನ ಸಚಿವಾಲಯ ಸೂಚಿಸಿದೆ. ಅಲ್ಲದೆ, ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದು ಅಧಿಕಾರಿಗಳು ವಿಮಾನದ ಬ್ಲಾಕ್ ಬಾಕ್ಸ್ ಸೇರಿದಂತೆ ಸ್ಥಳದ ಪರಿಶೀಲನೆಗೆ ಮುಂದಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರವೂ ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಿದೆ.
Preliminary information suggests dense fog and poor runway visibility may have caused the plane crash that killed Maharashtra Deputy CM Ajit Pawar and others near Baramati. While Mamata Banerjee alleged conspiracy and demanded a Supreme Court–monitored probe, NCP chief Sharad Pawar dismissed such claims, calling the incident an accident.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am