ಬ್ರೇಕಿಂಗ್ ನ್ಯೂಸ್
30-01-26 12:20 pm Bangalore Correspondent ಕರ್ನಾಟಕ
ಬೆಂಗಳೂರು, ಜ.30 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ವಿಮಾ ಕಂಪನಿಗಳು ಮತ್ತು ಸರ್ಕಾರದ ಸಮೀಕ್ಷಾ ವಿಭಾಗವು ರೈತರ ಹಿತರಕ್ಷಣೆಯಲ್ಲಿ ವಿಫಲವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಪರವಾಗಿ ಪರಿಷತ್ತಿನಲ್ಲಿ ಕಿಶೋರ್ ಕುಮಾರ್ ಕೇಳಿದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ. ಸರ್ಕಾರ ನೀಡಿರುವ ದಾಖಲೆಯಂತೆ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 44,653 ರೈತರಿಗೆ ಸೇರಬೇಕಾದ 4,662.09 ಲಕ್ಷ ವಿಮಾ ಪರಿಹಾರ ಇನ್ನೂ ಪಾವತಿಯಾಗಿಲ್ಲ. ಉಡುಪಿ ಜಿಲ್ಲೆಯಲ್ಲೂ ನೂರಾರು ರೈತರಿಗೆ ವಿಮಾ ಪರಿಹಾರ ಬಾಕಿಯಿದ್ದು ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ಕಿಶೋರ್ ಕುಮಾರ್ ಆಕ್ಷೇಪಿಸಿದ್ದಾರೆ.
ದಾಖಲೆಗಳಲ್ಲಿ ದೂರುಗಳೇ ಇಲ್ಲ !
ಕರಾವಳಿ ಭಾಗದ ರೈತರು ಬೆಳೆ ಸಮೀಕ್ಷೆ ಮತ್ತು ವಿಮೆಯ ಬಗ್ಗೆ ನಿರಂತರ ದೂರು ನೀಡುತ್ತಿದ್ದರೂ, ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ತೋರಿಸಲಾಗಿದೆ. ಇದು ಅಧಿಕಾರಿಗಳು ನೀಡುತ್ತಿರುವ ತಪ್ಪು ಮಾಹಿತಿಯೇ ಅಥವಾ ರೈತರ ದೂರುಗಳನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.
ಈ ಬಾರಿ ಬೆಳೆ ಸಮೀಕ್ಷೆ ಅವೈಜ್ಞಾನಿಕವಾಗಿ ನಡೆದಿದ್ದು, ತೋಟಗಾರಿಕಾ ಬೆಳೆಗಾರರಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಆಂತರಿಕ ತನಿಖೆ ನಡೆಸಿ, ರೈತರಿಗೆ ಸುಳ್ಳು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಿಶೋರ್ ಕುಮಾರ್ ಸಚಿವರನ್ನು ಒತ್ತಾಯಿಸಿದ್ದಾರೆ.
ಬಾಕಿ ಇರುವ ಒಟ್ಟು 26,512.52 ಲಕ್ಷ ಹಣವನ್ನು ರಾಜ್ಯದ 1,94,691 ರೈತರಿಗೆ ತಕ್ಷಣವೇ ಬಿಡುಗಡೆ ಮಾಡಲು ವಿಮಾ ಕಂಪನಿಗಳಿಗೆ ಸರ್ಕಾರ ಗಡುವು ನೀಡಬೇಕು. "ನಮ್ಮ ಭಾಗದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ, ಅಧಿಕೃತವಾಗಿ ಈ ಪತ್ರಿಕಾ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳನ್ನು ಪ್ರಶ್ನಿಸಬೇಕು. ರೈತರ ಹಕ್ಕುಗಳಿಗಾಗಿ ನಾನು ಸದನದ ಒಳಗೂ ಮತ್ತು ಹೊರಗೂ ನಿರಂತರವಾಗಿ ಹೋರಾಟ ನಡೆಸಲಿದ್ದೇನೆ" ಎಂದು ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The Karnataka government has admitted that thousands of farmers in Dakshina Kannada and Udupi districts are yet to receive crop insurance compensation. Replying to a question by MLC Kishore Kumar Puttur, the government revealed that ₹46.62 crore remains unpaid to over 44,000 farmers in Dakshina Kannada alone, sparking criticism over official negligence and flawed crop surveys.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am