ಬ್ರೇಕಿಂಗ್ ನ್ಯೂಸ್
31-01-26 01:33 pm Bengaluru Staffer ಕ್ರೈಂ
ಬೆಂಗಳೂರು, ಜ.31: ಬೆಂಗಳೂರಿನಲ್ಲಿ ಮತ್ತೊಂದು ಬಲವಂತದ ಮತಾಂತರ ಆರೋಪ ಕೇಳಿಬಂದಿದ್ದು, ಪ್ರೀತಿಸಿ ವಿವಾಹವಾದ ಬಳಿಕ ಯುವತಿ ಸಂಕಷ್ಟಕ್ಕೆ ಸಿಲುಕಿದ ಆರೋಪದ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ, ರೀಟಾ ಎಂಬ ಯುವತಿ ಇದೀಗ ತನ್ನ ಅಸಲಿ ಹೆಸರು–ಗುರುತಿನೊಂದಿಗೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅಂದು ರೀಟಾ, ಇಂದು ಸಾದಿಯಾ ತಬುಸಮ್ ಆಗಿರುವುದಾಗಿ ಮೋಸ ಹೋದ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೀವನಹಳ್ಳಿಯ ರೀಟಾ ಎಂಬ ಯುವತಿಗೆ, ಬೆಂಗಳೂರಿನ ಡಿಜೆ ಹಳ್ಳಿಯ ನಿವಾಸಿ ಪರ್ವೇಜ್ ಎಂಬಾತ ಕಾಲೇಜು ದಿನಗಳಲ್ಲಿ ಪರಿಚಯವಾಗಿತ್ತು. ಇಬ್ಬರೂ ಒಂದೇ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ವೇಳೆ ಪ್ರೀತಿ ಪ್ರೇಮವೆಂದು ತಿರುಗಾಡಿದ್ದು ಪರ್ವೇಜ್ ಬಳಿಕ ಪ್ರೀತಿ, ಪ್ರೇಮದ ಹೆಸರಿನಲ್ಲಿ ರೀಟಾಳನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
‘ಮತಾಂತರ ಇಲ್ಲ’ ಎಂದವನೇ ಮದುವೆ ಬಳಿಕ ಒತ್ತಡ?
ಪರ್ವೇಜ್ ಜೊತೆಗಿನ ಮದುವೆಗೆ ರೀಟಾಳ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ,
“ನಾವು ಮತಾಂತರ ಮಾಡೋದಿಲ್ಲ, ಆಕೆ ತನ್ನ ಧರ್ಮದಲ್ಲೇ ಇರುತ್ತಾಳೆ” ಎಂದು ಪರ್ವೇಜ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದ. ಭರವಸೆಯ ಮೇರೆಗೆ 2019ರ ಡಿಸೆಂಬರ್ 15ರಂದು, ಇಬ್ಬರೂ ಪ್ರತ್ಯೇಕ ಧರ್ಮಗಳ ಸಂಪ್ರದಾಯದಂತೆ ವಿವಾಹವಾಗಿದ್ದರು ಎಂದು ರೀಟಾ ಪೋಷಕರು ಹೇಳಿದ್ದಾರೆ.
ಮದುವೆ ಬಳಿಕ ಬಲವಂತದ ಮತಾಂತರ !
ಮದುವೆ ಬಳಿಕ ಪರ್ವೇಜ್ ತನ್ನ ನಿಲುವು ಬದಲಿಸಿ, ರೀಟಾಳಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಮತಾಂತರವಾಗದಿದ್ದರೆ ತಲಾಖ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕನ್ವರ್ಟ್ ಆದ ಬಳಿಕ ದೂರಾದ ಗಂಡ?
ಒತ್ತಡ ಮತ್ತು ಬೆದರಿಕೆಗೆ ಒಳಗಾಗಿ, ರೀಟಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸಾದಿಯಾ ತಬುಸಮ್ ಎಂದು ಹೆಸರನ್ನು ಬದಲಿಸಿದ್ದಾಳೆ. ಇವರ ದಾಂಪತ್ಯಕ್ಕೆ ಎರಡು ಮಕ್ಕಳಾಗಿದ್ದರೂ, ಮತಾಂತರದ ಬಳಿಕ ಪರ್ವೇಜ್ ತನ್ನಿಂದ ದೂರ ಉಳಿದಿದ್ದಾನೆ ಎಂದು ರೀಟಾ ಆರೋಪಿಸಿದ್ದಾರೆ. ಇದೇ ವೇಳೆ, ಪರ್ವೇಜ್ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾದ ಆರೋಪವೂ ಕೇಳಿಬಂದಿದೆ.
ಈ ಕುರಿತು ರೀಟಾ @ ಸಾದಿಯಾ ತಬುಸಮ್ ಅವರು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಡಿಜಿ & ಐಜಿ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ಗೂ ದೂರು ನೀಡಿದ್ದಾರೆ. ತಾನು ಮೋಸಕ್ಕೆ ಒಳಗಾಗಿದ್ದು, ನ್ಯಾಯ ಬೇಕೆಂದು ಯುವತಿ ಕಣ್ಣೀರಿಟ್ಟಿದ್ದಾರೆ.
A woman in Bengaluru has approached the police alleging that she was deceived into marriage and later forced to convert her religion. The case, which has now reached the police, involves accusations of coercion, abandonment, and cheating after marriage. The woman, originally named Rita, stated that she became acquainted with a man named Parvez, a resident of DJ Halli, during their pre-university college days. Both were studying in the same private college, and their friendship eventually developed into a romantic relationship.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm