ಬ್ರೇಕಿಂಗ್ ನ್ಯೂಸ್
22-10-26 09:37 pm HK News Desk ಕರಾವಳಿ
ಮಂಗಳೂರು, ಅ.22ನಗರದ ಅತ್ತಾವರ ಬಳಿಯ ಮಾರ್ನನಮಿಕಟ್ಟೆ ಸರ್ಕಲ್ ಬಳಿಯಲ್ಲಿ 16.75 ಸೆಂಟ್ಸ್ ಜಾಗವನ್ನು ಬಡ ಕುಟುಂಬದಿಂದ ಅಪಾರ್ಟ್ಮೆಂಟ್ ಕಟ್ಟುವ ಉದ್ದೇಶದಿಂದ ಪಡೆದಿದ್ದ ರಿಯಲ್ ಎಸ್ಟೇಟ್ ಬಿಲ್ಡರ್ ಒಬ್ಬರು ಅಲ್ಲಿ ಕಟ್ಟಡವನ್ನು ನಿರ್ಮಿಸಿದ್ದರೂ, ಕುಟುಂಬಕ್ಕೆ ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಬಿಲ್ಡರ್ ಡೊನಾಲ್ಡ್ ಪಿಂಟೋ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
66 ವರ್ಷದ ದೂರುದಾರ ಮಹಿಳೆ ಮತ್ತು ಅವರ ಕುಟುಂಬಸ್ಥರಿಗೆ ಸೇರಿದ ಭೂಮಿಯನ್ನು 2013ರಲ್ಲಿ ಡೊನಾಲ್ಡ್ ಪಿಂಟೋ ಕರಾರು ಪತ್ರದ ಮೂಲಕ ಪಡೆದಿದ್ದು, ಅದರಲ್ಲಿ ಅಪಾರ್ಟ್ಮೆಂಟ್ ಕಟ್ಟಿ ಎರಡು ಮನೆಗಳನ್ನು ದೂರುದಾರ ವಸಂತ ಎಂಬ ಮಹಿಳೆಗೆ ಮತ್ತು ಇನ್ನೊಂದು ಮನೆಯನ್ನು ಸಂಬಂಧಿ ವಸುಮತಿ ಎಂಬವರಿಗೆ ನೀಡುವುದಾಗಿ ಹೇಳಿ ಕರಾರು ಪತ್ರ ಮಾಡಲಾಗಿತ್ತು. ಈ ಬಗ್ಗೆ 2013ರ ಮೇ 7ರಂದು ರೂಪಾಯಿ 99.90 ಲಕ್ಷಕ್ಕೆ ಕುಟುಂಬಸ್ಥರ ಹೆಸರಲ್ಲಿ ಕರಾರು ಪತ್ರ ಮಾಡಿದ್ದರೂ, ಉಪ ನೋಂದಣಿ ಕಚೇರಿಯಲ್ಲಿ ಮಹಿಳೆಗೆ ತಿಳಿಯದ ಇಂಗ್ಲಿಷ್ ಭಾಷೆಯಲ್ಲಿ ರೂ. 47 ಲಕ್ಷಕ್ಕೆ ಜಾಗ ಮಾರಾಟ ಮಾಡಿದ್ದಾಗಿ ರಿಜಿಸ್ಟರ್ ಮಾಡಿದ್ದರು.

ಹಳೆ ಮನೆಯಿಂದ ಎಬ್ಬಿಸಿದ ನಂತರ ಬಡ ಕುಟುಂಬವನ್ನು ಬಾಡಿಗೆ ಮನೆಯಲ್ಲಿ ಇರಿಸಿ ಅದರ ಬಾಬ್ತು ನೀಡುವುದಾಗಿ ಹೇಳಿ ಬಿಲ್ಡರ್ ಪ್ರತ್ಯೇಕ ಕುಳ್ಳಿರಿಸಿದ್ದರು. ಸದ್ರಿ ಜಾಗದಲ್ಲಿ 13 ವರ್ಷಗಳಲ್ಲಿ ನಾಲ್ಕು ಅಂತಸ್ತಿನ ಬೃಹತ್ ಅಪಾರ್ಟ್ಮೆಂಟ್ ಕಟ್ಟಡ ತಲೆಯೆತ್ತಿದ್ದು, ಅದರಲ್ಲಿ 12 ಫ್ಲಾಟ್ ಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಕೆಳ ಅಂತಸ್ತಿನಲ್ಲಿ ರಸ್ತೆಯ ಭಾಗ ಇರುವುದರಿಂದ ಕಮರ್ಶಿಯಲ್ ಉದ್ದೇಶಕ್ಕೆ ಕೊಡಲಾಗಿದೆ. ಈ ವೇಳೆ, ಸಂತ್ರಸ್ತ ಕುಟುಂಬಕ್ಕೆ ಮನೆಯನ್ನು ಕೊಡಿಸುತ್ತೇನೆಂದು ನಂಬಿಸುತ್ತ ಬಂದಿದ್ದು, ಇಲ್ಲಿ ವರೆಗೂ ಯಾವುದೇ ಮನೆಯನ್ನು ನೀಡದೆ ಬಿಲ್ಡರ್ ಡೊನಾಲ್ಡ್ ಪಿಂಟೋ ವಂಚಿಸಿದ್ದಾರೆ. ಅಲ್ಲದೆ, ಈವರೆಗೆ ಕೇವಲ 17 ಲಕ್ಷ ರೂ.ಗಳನ್ನು ಕಂತುಗಳ ರೂಪದಲ್ಲಿ ನೀಡಿದ್ದಾರೆ. ಬಾಡಿಗೆ ಮನೆ ಮಾಡಿಕೊಟ್ಟು ಸದರಿ ಬಾಡಿಗೆಯನ್ನೂ ನೀಡದೆ ವಂಚಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚನೆಯ ಬಗ್ಗೆ ಒಂದು ವರ್ಷದ ಹಿಂದೆಯೇ ಸಂತ್ರಸ್ತ ಕುಟುಂಬಸ್ಥರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದು ಅಹವಾಲು ಹೇಳಿಕೊಂಡಿದ್ದರು. ಇದರಂತೆ ಪೊಲೀಸರು ಬಿಲ್ಡರ್ ವ್ಯಕ್ತಿಯನ್ನು ಪಾಂಡೇಶ್ವರ ಠಾಣೆಗೆ ಕರೆಸಿದ್ದು ಈ ವೇಳೆ ಮೂರು ತಿಂಗಳಲ್ಲಿ ಮನೆಯನ್ನು ಕೊಡಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ ಅದರಂತೆ ನಡೆದುಕೊಂಡಿಲ್ಲ. ಆದರೂ ಮನೆಯನ್ನು ಕೊಡದೆ ವಂಚಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದು ಇತ್ತೀಚೆಗೆ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾರ್ನಮಿಕಟ್ಟೆ ವೃತ್ತದ ಬಳಿಯಿರುವ ಈ ಅಪಾರ್ಟ್ಮೆಂಟ್ ಬಳಿ ಪರಿಶೀಲನೆ ನಡೆಸಿದಾಗ, ಸ್ಥಳೀಯರು ಹೇಳುವಂತೆ ಅಲ್ಲಿರುವ 11 ಮನೆಗಳಿಗೆ ಬ್ಯಾಂಕ್ ಸಾಲವಿದ್ದು ಅದನ್ನು ಜಪ್ತಿ ಮಾಡಿದ್ದಾರಂತೆ. ಅಲ್ಲದೆ, ಅಲ್ಲಿಯೇ ಹತ್ತಿರವಿದ್ದ ಡೊನಾಲ್ಡ್ ಪಿಂಟೋ ಅವರ ಸ್ವಂತ ಮನೆಯನ್ನೂ ಬ್ಯಾಂಕ್ ಸಾಲದಿಂದಾಗಿ ಜಪ್ತಿ ಮಾಡಿದ್ದಾರೆ. ಬಿಲ್ಡರ್ ಆಗಿದ್ದ ಡೊನಾಲ್ಡ್ ಪಿಂಟೋ ಸದ್ಯ ನಾಪತ್ತೆಯಾಗಿದ್ದಾರೆ.
Builder Donald Pinto has been booked by Pandeshwar police for allegedly cheating a poor family after acquiring their 16.75-cent plot near Marnamikatte Circle, close to Attavar in Mangaluru, on the promise of providing them flats in an apartment project. Despite constructing a four-storey apartment building on the land, the builder allegedly failed to hand over even a single flat to the family, leaving them without a home.
21-10-26 10:31 pm
HK News Desk
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
22-10-26 09:37 pm
HK News Desk
ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅ...
21-10-26 09:20 pm
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
Mangalore Accident, Ullal: ಓವರ್ ಟೇಕ್ ಧಾವಂತದಲ್...
19-10-26 08:41 pm
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
22-10-26 03:21 pm
HK News Staffer
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am
ಬೋಳಿಯಾರಿನಲ್ಲಿ ಸ್ಕೂಟರ್ ಸವಾರರ ಸಾವು ಪ್ರಕರಣ ; ಅಪಘ...
20-10-26 05:06 pm