ಬ್ರೇಕಿಂಗ್ ನ್ಯೂಸ್
28-11-26 08:54 am HK News Staffer ಕರಾವಳಿ
ಮಂಗಳೂರು, ನ.27: ಶಿಲ್ಪಕಲೆ, ಕೌಶಲ್ಯ, ಸಾಂಪ್ರದಾಯಿಕ ಕಲಾ ವೈವಿಧ್ಯಗಳಿಗೆ ಹೆಸರಾಗಿರುವ ವಿಶ್ವಕರ್ಮ ಸಮುದಾಯವು ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಕಂಪನಿಗಳ ದಾಳಿಯಿಂದಾಗಿ ತನ್ನ ಭವ್ಯ ಪರಂಪರೆ ಕೈಬಿಟ್ಟು ಹೋಗುವ ಆತಂಕದಲ್ಲಿದೆ. ಸಾಂಪ್ರದಾಯಿಕ ಪಂಚಶಿಲ್ಪ ವೈವಿಧ್ಯ ಹಾಗೂ ಪಾರಂಪರಿಕ ಕಲೆಗಳ ಪುನರುತ್ಥಾನದ ಪರಿಕಲ್ಪನೆಯೊಂದಿಗೆ ‘ವಿಶ್ವಕೌಶಲಮ್ 2026’ ಹೆಸರಲ್ಲಿ ವಿಭಿನ್ನ ಕಲಾ ಉತ್ಸವವನ್ನು ಡಿಸೆಂಬರ್ 25, 26 ಮತ್ತು 27ರಂದು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂರು ದಿನಗಳಲ್ಲಿ 128 ಮಳಿಗೆಗಳನ್ನು ಸ್ಥಾಪಿಸಿ, ಕಲಾಕೃತಿ. ತಾಂತ್ರಿಕ ಉಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆಗಳು, ವಿಚಾರಗೋಷ್ಟಿಗಳು, ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿಗಳವರು ದಿವ್ಯ ಉಪಸ್ಥಿತಿ ಇರಲಿದ್ದಾರೆ. ಡಿ.25ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಗಿದೆ. ಸ್ಥಳೀಯ ಸಂಸದರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಖ್ಯಾತ ಶಿಲ್ಪಿ ಮೈಸೂರಿನ ಡಾ.ಅರುಣ್ ಯೋಗಿರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಡಾ.ಎಸ್.ಪಿ ಗುರುದಾಸ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಆಯೋಧ್ಯೆ ಶ್ರೀರಾಮ ದೇವಾಲಯದ ಶಿಲ್ಪಿ ನಿಖಿಲ್ ಸೋಂಪುರ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮತ್ತಿತರ ಅಂತಾರಾಷ್ಟ್ರೀಯ ಮಟ್ಟದ ಶಿಲ್ಪಿಗಳು, ಕೈಗಾರಿಕೋದ್ಯಮಿಗಳು, ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು. ತಂತ್ರಜ್ಞರು ಸೇರಿದಂತೆ 15ರಿಂದ 20 ಸಾವಿರ ಮಂದಿ ಕಲಾಸಕ್ತರು ಪಾಲ್ಗೊಳ್ಳಲಿದ್ದಾರೆ.

ಮೇಳದಲ್ಲಿ ಸಾಂಪ್ರದಾಯಿಕ ಮತ್ತು ಆಧನಿಕ ಆಭರಣ ವಿನ್ಯಾಸ, ದೇವಾಲಯ ಆಭರಣಗಳ ವಿನ್ಯಾಸ, ಮರದ ಹಾಗೂ ಶಿಲೆಯ ಸೂಕ್ಷ್ಮ ಕೆತ್ತನೆಗಳು, ಅಲಂಕಾರಿಕ ಫಲಕಗಳು, ಹಿತ್ತಾಳೆ, ತಾಮ್ರ ಹಾಗೂ ಮಿಶ್ರಲೋಹದ ಕಲಾಕೃತಿಗಳು, ವೈವಿಧ್ಯಮಯ ಪೈಂಟಿಂಗ್ ಹಾಗೂ ಕರಕುಶಲ ಕಲಾಕೃತಿಗಳ ಪ್ರದರ್ಶನ ಇರಲಿದೆ. ಪಂಚಶಿಲ್ಪ ವಿಭಾಗದಲ್ಲಿ ರಥಶಿಲ್ಪ, ಕಬ್ಬಿಣದ ಶಿಲ್ಪ ಇತ್ಯಾದಿ ಅಪರೂಪದ ಕಲಾಕೃತಿಗಳು, ತುಳುನಾಡಿನ ವಿಶಿಷ್ಟ ಕಲಾಕೃತಿಗಳು, ದೈವಾರಾಧನೆಗೆ ಸಂಬಂಧಿಸಿದ ಪ್ರದರ್ಶನಗಳು, ದೇವಾಲಯ ಕೇಂದ್ರಿತ ಕಲಾಕೃತಿಗಳ ಪ್ರದರ್ಶನ ಇರುತ್ತದೆ.
ಸ್ವರ್ಣವಿನ್ಯಾಸ ವಿಭಾಗದಲ್ಲಿ ಚಿನ್ನ ಬೆಳ್ಳಿ ಆಭರಣಗಳ ವಿನ್ಯಾಸ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಪ್ರದರ್ಶನ, ತುಳುನಾಡಿನ ಸಾಂಪ್ರದಾಯಿಕ ಆಭರಣ ತಯಾರಿಯ ಪ್ರಾತ್ಯಕ್ಷಿಕೆ, ಮೈಸೂರಿನ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಂದ ಆಭರಣ ವಿನ್ಯಾಸ ಹಾಗೂ ತಯಾರಿಯ ಪ್ರಾತ್ಯಕ್ಷಿಕೆ ಇರುತ್ತದೆ. ಆಧುನಿಕ ತಂತ್ರಜ್ಞಾನ ಅಳವಡಿಕೆ ಬಗ್ಗೆ ಪ್ರಾತ್ಯಕ್ಷಿಕೆ, ತಂತ್ರಜ್ಞರೊಂದಿಗೆ ಸಂವಾದ, ಎಐ ಬೆಂಬಲಿತ ವಿನ್ಯಾಸದ ಯಂತ್ರೋಪಕರಣಗಳ ಪ್ರದರ್ಶನ ಇರಲಿದೆ.
ಪಂಚಶಿಲ್ಪಗಳ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಶಿಲ್ಪಿಗಳಿಗೆ ಜೀವಮಾನದ ಸಾಧನೆಗಾಗಿ ಹತ್ತು ಮಂದಿಗೆ ಶ್ರೇಷ್ಠತಾ ಪ್ರಶಸ್ತಿಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪಂಚಶಿಲ್ಪ ಕ್ಷೇತ್ರಕ್ಕೆ ಸಂಬಂಧಿಸಿ ಇನ್ನೋವೇಶನ್ ಚಾಲೆಂಜ್ ಹಾಗೂ ಬಿಸ್ನೆಸ್ ಐಡಿಯಾ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಆಯ್ದ ಮೂರು ತಂಡಗಳಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು. ಸೈಂಟ್ ಅಲೋಶಿಯಸ್ ಕಾಲೇಜಿನ ಇನ್ನೋವೇಶನ್ ಕೇಂದ್ರದ ಮೂಲಕ ಅವರ ಪರಿಕಲ್ಪನೆಯನ್ನು ಉದ್ಯಮವಾಗಿ ಬೆಳೆಸಲು ಆರು ತಿಂಗಳ ತರಬೇತಿ ನೀಡಲಾಗುವುದು. ಪಂಚಶಿಲ್ಪ ಕ್ಷೇತ್ರಗಳ ಪುನರುತ್ಥಾನಕ್ಕೆ ಸಂಬಂಧಿಸಿ ಐದು ವಿಚಾರಗೋಷ್ಠಿಗಳಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಪಾಲ್ಗೊಳ್ಳಲಿದ್ದಾರೆ.
ಸ್ಥಳದಲ್ಲೇ ಶಿಲ್ಪಕಲೆ, ಆಭರಣ ವಿನ್ಯಾಸ, ಮುಖವರ್ಣಿಕೆ ರಚನಾ ಸ್ಪರ್ಧೆಗಳು ಇರಲಿದ್ದು ವಿಜೇತರಿಗೆ ಬಹುಮಾನ ಇರಲಿದೆ. ಪ್ರತಿ ದಿನವೂ ಸಂಜೆ ವೇಳೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಯುವ ಜನಾಂಗವು ತಮ್ಮ ಬೇರನ್ನು ಬಿಟ್ಟು ಹೋಗುವ ಹೊತ್ತಿನಲ್ಲಿ ಅವರನ್ನು ಒಂದುಗೂಡಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಗುರುದಾಸ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷರಾದ ಡಾ.ಜಿ.ರಾಮಕೃಷ್ಣ ಆಚಾರ್, ಎಸ್.ಆರ್. ಹರೀಶ್ ಆಚಾರ್ಯ, ಉಪೇಂದ್ರ ಆಚಾರ್ಯ ಪೆರ್ಡೂರು, ರತ್ನಾವಜಿ ಜೆ. ಬೈಕಾಡಿ, ಯಜ್ಞೇಶ್ವರ ಆಚಾರ್ಯ, ಸುಂದರ ಆಚಾರ್ಯ ಉಪಸ್ಥಿತರಿದ್ದರು.
26-11-26 08:34 pm
HK News Staffer
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
28-11-26 08:54 am
HK News Staffer
ಧರ್ಮಸ್ಥಳ ಅಸಹಜ ಸಾವು ಪ್ರಕರಣ ; ಎಸ್ಐಟಿ ವರದಿಯನ್ನು...
27-11-26 06:23 pm
ಬೋಳೂರು - ಬೆಂಗ್ರೆ ಸೇತುವೆ ಕಾಮಗಾರಿ ; ಕ್ರೇನ್ ಸಹಿತ...
27-11-26 12:28 pm
ಮಂಗಳೂರು - ಬೆಂಗಳೂರು ವಾಹನ ಸಂಚಾರಕ್ಕೆ ಮತ್ತೊಂದು ಹೊ...
26-11-26 09:00 pm
ಎಸ್ಐಟಿ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ದಾಖಲೆ ಸಲ್...
26-11-26 03:53 pm
27-11-26 03:14 pm
HK News Staffer
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm
ದುಬೈನಿಂದ ಚಿನ್ನ ಸ್ಮಗ್ಲಿಂಗ್ ; ಶೌಚಾಲಯದಲ್ಲಿ ಬಚ್ಚಿ...
26-11-26 01:01 pm