ಬ್ರೇಕಿಂಗ್ ನ್ಯೂಸ್
27-10-26 03:35 pm HK News Staffer ಕರಾವಳಿ
ಮಂಗಳೂರು, ಅ.27: ಮೈಸೂರು ರಾಜಮನೆತನದ ಬಗ್ಗೆ ರಾಜ್ಯದಲ್ಲಿ ವಿಶೇಷವಾದ ಗೌರವವಿದೆ. ಮಹಾರಾಣಿ ತಮ್ಮ ಒಡವೆ ಕೊಟ್ಟು ಕನ್ನಂಬಾಡಿ ಆಣೆಕಟ್ಟು ಪೂರ್ಣಗೊಳಿಸಿದ ಇತಿಹಾಸ ಇದೆ. ಮೈಸೂರು ಸ್ಯಾಂಡಲ್, ಮೈಸೂರು ಮಿನರಲ್ಸ್ ಹೀಗೆ ಹಲವಾರು ಸಂಸ್ಥೆಗಳನ್ನ ಹುಟ್ಟುಹಾಕಿ ಮೈಸೂರು ಬ್ರಾಂಡ್ ಆಗಿ ಮಾಡಿದವರು ರಾಜ ಮನೆತನದವರು. ಅಂಥವರ ಬಗ್ಗೆ ಕಾಂಗ್ರೆಸಿಗರು ಕೀಳಾಗಿ ಮಾತಾಡುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.
ಕಾಂಗ್ರೆಸ್ ನವರು ಅವರ ಕುಟುಂಬಕ್ಕಿರುವ ಗೌರವವನ್ನು ಅರ್ಥ ಮಾಡಿಕೊಂಡು ಮಾತನಾಡಲಿ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಾಗ ಒಂದು ಒಪ್ಪಂದವಾಗಿತ್ತು. ಮೈಸೂರು ರಾಜಮನೆತನಕ್ಕೆ ಗೌರವ ಕೊಡುವುದು ಒಪ್ಪಂದದ ಭಾಗವಾಗಿತ್ತು. ಈಗ ದೇಶದಲ್ಲಿ ಪ್ರಜಾಪ್ರಭುತ್ವ ಇದೆ, ಆದರೆ ನಾವು ಯಾರು ರಾಜರಲ್ಲ. ಮೈಸೂರು ರಾಜರಿಗೆ ಇರುವ ಗೌರವವನ್ನು ನಾವ್ಯಾರು ಉಳಿಸಿಕೊಂಡಿಲ್ಲ.
ಮೈಸೂರು ವಂಶಸ್ಥರು ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ವಾದಿಯಾಗಿದ್ರು. ಈಗ ಇವರು ಪ್ರಜಾಪ್ರಭುತ್ವದಲ್ಲಿ ರಾಜರ ತರಹ ಮೆರೆಯುತ್ತಿದ್ದಾರೆ. ರಾಜ ವಂಶಸ್ಥರ ಬಗ್ಗೆ ಸಹಾನುಭೂತಿಯಿಂದ ಅಹವಾಲು ಕೇಳಬೇಕು. ಈ ರಾಜ್ಯಕ್ಕೆ ಅವರ ಕೊಡುಗೆ ದೊಡ್ಡದಿದೆ ಎಂಬುದನ್ನು ಮರೆಯಬಾರದು.
ರಾಜ್ಯ ಸರಕಾರ ಆಯೋಜನೆ ಮಾಡುವ ದಸರಾಕ್ಕೆ ಅವರು ಯಾವತ್ತೂ ವಿರೋಧ ಮಾಡಿಲ್ಲ. ಆದರೆ ಇವರು ಅಲ್ಲಿನ ಸಾಂಪ್ರದಾಯಿಕ ದಸರಾ ಆಚರಣೆಗೆ ತಡೆ ತಂದಿದ್ದಾರೆ. ದೇಶದ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಖಾಸಗಿ ವಿಮಾನವನ್ನ ದೇಶದ ಗೃಹ ಸಚಿವರಿಗೆ ನೀಡಿದ ಉದಾಹರಣೆ ಇದೆ. ಹೀಗಾಗಿ ನಮ್ಮ ಮೈಸೂರು ಮಹಾರಾಜರು ಅತ್ಯಂತ ವಿಶೇಷ ಗೌರವಕ್ಕೆ ಭಾಜನರಾದವರು. ಅದೇ ರೀತಿಯ ಗೌರವವನ್ನು ನಾವು ಉಳಿಸಬೇಕಿದೆ ಎಂದು ಹೇಳಿದರು.
ಶಿಷ್ಟಾಚಾರದ ಹೆಸರಿನಲ್ಲಿ ದಸರಾದ ಹಲವು ಆಚರಣೆಗಳಿಗೆ ರಾಜ್ಯ ಸರ್ಕಾರ ಅಡೆತಡೆ ಮಾಡಿದ ವಿಚಾರದಲ್ಲಿ ರಾಜಮಾತೆ ಪ್ರಮೋದದೇವಿ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಅರಮನೆಯೂ ಸರ್ಕಾರದ್ದು, ಮಂಡಳಿಯೂ ಸರ್ಕಾರದ್ದು ಎನ್ನುವ ಮೂಲಕ ಪ್ರಬಲ ತಿರುಗೇಟು ನೀಡಿದ್ದರು.
27-10-26 01:23 pm
HK News Desk
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 03:35 pm
HK News Staffer
Mangalore Man Missing, Israel: ಉದ್ಯೋಗಕ್ಕಾಗಿ ಇ...
27-10-26 01:53 pm
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ...
25-10-26 10:26 pm
ಸ್ಟಿಂಗ್ ರಾಜಕೀಯ, ಸಿಎಂ ಬದಲಾವಣೆ ಕಾಂಗ್ರೆಸಿಗೆ ಹಿನ್...
25-10-26 08:25 pm
27-10-26 03:01 pm
HK News Staffer
ಬಸ್ ಡಿಕ್ಕಿಯಾಗಿ ಯುವಕ ದೂರಕ್ಕೆಸೆಯಲ್ಪಟ್ಟರೂ ಚಾಲಕನ...
26-10-26 09:22 pm
ಸಿಎಂ ಡಿಕೆಶಿ ಬಗ್ಗೆ ಲಘು ಹೇಳಿಕೆ ; ನಟ ಧನ್ವೀರ್ ವಿರ...
26-10-26 02:59 pm
Gurudas Shenoy: ಕೋಟದಲ್ಲಿ ಭೀಕರ ಅಪಘಾತ ; ಸೈಕಲ್ ನ...
26-10-26 12:49 pm
ಬೀದರಿನಲ್ಲಿ ಮತ್ತೊಂದು ಎಟಿಎಂ ಕತ್ತರಿಸಿ 23 ಲಕ್ಷ ದರ...
25-10-26 04:33 pm