ಬ್ರೇಕಿಂಗ್ ನ್ಯೂಸ್
25-10-26 09:40 pm HK News Staffer ದೇಶ - ವಿದೇಶ
ಪಾಟ್ನಾ, ಅ.25: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಾಟ್ನಾದಲ್ಲಿ ಮೋದಿ ತಂದೆಯ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಗುರಿಯಾಗಿದೆ. ಕಾರ್ಯಕ್ರಮದಲ್ಲಿ ಖರ್ಗೆ ಅವರ ಭಾಷಣ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದ್ದು ಗಲಾಟೆ ನಡೆಯಿತು.
ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮ ದಿನಾಚರಣೆಯಂದು ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕರಲ್ಲೊಬ್ಬನ ಪ್ರತಿಕ್ರಿಯೆ ಇವರನ್ನು ಕ್ರುದ್ಧನನ್ನಾಗಿ ಮಾಡಿತ್ತು.
ಎಸ್ಐಆರ್ ವಿಚಾರದಲ್ಲಿ ಚುನಾವಣಾ ಅಕ್ರಮ ಆಗುತ್ತಿದೆ ಎಂದು ಪ್ರಸ್ತಾಪಿಸಿದ ಖರ್ಗೆ, ಈ ಪ್ರಕರಣದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ದೇಶದ್ರೋಹಿ ಎಂದರಲ್ಲದೆ, ಅವರೂ ಜೈಲಿಗೆ ಹೋಗಲಿದ್ದಾರೆ. ಜೊತೆಗೆ ಮೋದಿಯೂ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು. ಅದೇ ಸಮಯದಲ್ಲಿ ಸಭೆಯಲ್ಲಿದ್ದ ವ್ಯಕ್ತಿಯೊಬ್ಬ "ಮೋದಿ ಕಹೀಂ ನಹೀಂ ಜಾಯೇಗಾ" (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ಮಲ್ಲಿಕಾರ್ಜುನ ಖರ್ಗೆ ಅವರು "ಮೋದಿ ಕಾ ಬಾಪ್ ಭೀ ಜಾಯೇಗಾ" (ಮೋದಿ ಅವರ ಅಪ್ಪನೂ ಹೋಗಬೇಕಾಗುತ್ತದೆ) ಎಂದು ಹೇಳಿದರು. ತಮ್ಮ ಮಾತನ್ನು ಮೂರು ಬಾರಿ ಪುನರುಚ್ಚರಿಸಿದರು. ಸಭೆಯಲ್ಲಿ ಮೋದಿ ನಹಿ ಜಾಯೇಂಗೇ ಎಂದು ಹೇಳಿದ್ದ ಸಂತೋಷ್ ಕುಮಾರ್ ಎಂಬ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗರು ಥಳಿಸಿ, ಅಲ್ಲಿಂದ ಹೊರಗೆ ಹಾಕಿದರು.
ಖರ್ಗೆ ಮಾತು ಮತ್ತು ಸಭೆಯಲ್ಲಿದ್ದ ವ್ಯಕ್ತಿಗೆ ಹಲ್ಲೆ ನಡೆಸಿರುವ ಘಟನೆ ವಿಡಿಯೋ ವೈರಲ್ ಆಗಿದ್ದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಖರ್ಗೆ ಮಾತನ್ನು ಖಂಡಿಸಿ ಹೇಳಿಕೆ ನೀಡತೊಡಗಿದ್ದಾರೆ.
24-10-26 05:35 pm
HK News Desk
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
25-10-26 10:26 pm
HK News Desk
ಸ್ಟಿಂಗ್ ರಾಜಕೀಯ, ಸಿಎಂ ಬದಲಾವಣೆ ಕಾಂಗ್ರೆಸಿಗೆ ಹಿನ್...
25-10-26 08:25 pm
ಯುಪಿಐ ಮೇಲಿನ ತೆರಿಗೆ ಪ್ರಸ್ತಾಪಕ್ಕೆ ಅಣ್ಣಾಮಲೈ ವಿರೋ...
24-10-26 10:59 pm
ಕದ್ರಿಯ 'ಕುಡ್ಪೀಸ್ ಫುಡ್ಸ್' ಬೇಕರಿ ಮಳಿಗೆಗೆ ಆಹಾರ...
24-10-26 10:54 pm
ಸ್ಟಿಂಗ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆ...
24-10-26 08:06 pm
25-10-26 04:33 pm
HK News Staffer
ಐಷಾರಾಮಿ ಜೀವನಕ್ಕಾಗಿ ಹದಿಹರೆಯದ ಯುವಕರ ದುಷ್ಕೃತ್ಯ ;...
25-10-26 02:49 pm
ಕುಂದಾಪುರ ; ಹಾಸಿಗೆ ಹಿಡಿದಿದ್ದ ಅಂಗವಿಕಲ ಮಗಳನ್ನು ಕ...
25-10-26 01:44 pm
ಸಂಪಾಜೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು- ಲಾರಿ...
25-10-26 01:31 pm
ಸಿದ್ದರಾಮಯ್ಯ ಸ್ಟಿಂಗ್ ; ಜಾಲತಾಣದಲ್ಲಿ ವಿಡಿಯೋ ಅಪ್ಲ...
24-10-26 10:21 pm