ಬೀದರಿನಲ್ಲಿ ಮತ್ತೊಂದು ಎಟಿಎಂ ಕತ್ತರಿಸಿ 23 ಲಕ್ಷ ದರೋಡೆ, ಮುಖಕ್ಕೆ ಮಾಸ್ಕ್ ಹಾಕಿ ಕೃತ್ಯ, ದರೋಡೆ ಸಿಸಿಟಿವಿಯಲ್ಲಿ ಸೆರೆ

25-10-26 04:33 pm       HK News Staffer   ಕ್ರೈಂ

ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಎಸ್‌ಬಿಐ ATM ಕತ್ತರಿಸಿ 23 ಲಕ್ಷ ಹಣ ಲೂಟಿಗೈದ ಘಟನೆ ನಡೆದಿದ್ದು ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹಣ ಲೂಟಿ ಮಾಡುವ ದೃಶ್ಯ ಸೆರೆಯಾಗಿದೆ.‌

ಬೀದರ್, ಅ.25: ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಎಸ್‌ಬಿಐ ATM ಕತ್ತರಿಸಿ 23 ಲಕ್ಷ ಹಣ ಲೂಟಿಗೈದ ಘಟನೆ ನಡೆದಿದ್ದು ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹಣ ಲೂಟಿ ಮಾಡುವ ದೃಶ್ಯ ಸೆರೆಯಾಗಿದೆ.‌

ಭಾಲ್ಕಿ ನಗರದ ಚನ್ನಬಸವಾಶ್ರಮ ಮಳಿಗೆಯಲ್ಲಿರುವ ಎಟಿಎಂನಲ್ಲಿ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗ್ಯಾಸ್ ಕಟರ್ ಬಳಸಿ ಎಟಿಎಂ ಮೆಶಿನನ್ನು ಕತ್ತರಿಸಿ ಹಣ ದೋಚಿದ್ದಾರೆ.‌ ಮಾಸ್ಕ್ ಹಾಕಿಕೊಂಡು ಕಾರ್ ನಲ್ಲಿ ಬಂದಿದ್ದ ಖದೀಮರು ಸಿಸಿಟಿವಿಗೆ ಸ್ಪ್ರೇ ಹೊಡೆದು ಕೃತ್ಯ ಎಸಗಿದ್ದಾರೆ.‌

ಹಣ ಎಗರಿಸುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗದಂತೆ ಕ್ಯಾಮರಾಗೆ ಸ್ಪ್ರೇ ಹೊಡೆದಿದ್ದು ಆಬಳಿಕ ಲೂಟಿ ಮಾಡಿದ್ದಾರೆ. ಆದರೆ ಕ್ಯಾಮರಾದಲ್ಲಿ ಕಳ್ಳರ ದೃಶ್ಯ ಸೆರೆಯಾಗಿದೆ. ಕಳೆದ ವರ್ಷ ಬೀದರಿನಲ್ಲಿ ಎಟಿಎಂನಿಂದ 83 ಲಕ್ಷ ದರೋಡೆಗೈದು ನಾಪತ್ತೆಯಾಗಿದ್ದ ಆರೋಪಿಗಳನ್ನು 19 ತಿಂಗಳ ಬಳಿಕ ಇತ್ತೀಚೆಗೆ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಎಟಿಎಂ ದರೋಡೆ ಕೃತ್ಯ ನಡೆದಿದ್ದು ಘಟನೆಯ ಸ್ಥಳ ಪರಿಶೀಲನೆ ನಡೆಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.