ಸುರತ್ಕಲ್ ಬೀಚ್ ಬಳಿ ಕುಡಿದ ಮತ್ತಿನಲ್ಲಿ ಜಗಳ ; ಕೇಸು ದಾಖಲಾಗಿದ್ದರಿಂದ ನೊಂದು ಸಾವಿಗೆ ಶರಣಾದ ವ್ಯಕ್ತಿ, ಸಾವಿಗೆ ತಾನೇ ಹೊಣೆಯೆಂದು ಡೆತ್ ನೋಟ್

27-10-26 03:01 pm       HK News Staffer   ಕ್ರೈಂ

ಸುರತ್ಕಲ್ ಬೀಚ್ ನಲ್ಲಿ ಕುಡಿದ ಮತ್ತಿನಲ್ಲಿ ದಂಪತಿ ಜೊತೆಗೆ ಜಗಳವಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿದ್ದರಿಂದ ಬೇಸತ್ತು ಹೊಸಬೆಟ್ಟು ನಿವಾಸಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಂಗಳೂರು, ಅ.27: ಸುರತ್ಕಲ್ ಬೀಚ್ ನಲ್ಲಿ ಕುಡಿದ ಮತ್ತಿನಲ್ಲಿ ದಂಪತಿ ಜೊತೆಗೆ ಜಗಳವಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿದ್ದರಿಂದ ಬೇಸತ್ತು ಹೊಸಬೆಟ್ಟು ನಿವಾಸಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಹೊಸಬೆಟ್ಟು ನಿವಾಸಿ ಸೋಮನಾಥ (48) ಆತ್ಮಹತ್ಯೆ ಮಾಡಿಕೊಂಡವರು. ಈ ಹಿಂದೆ ಗೋವಾದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಕಳೆದ ಒಂದು ತಿಂಗಳಿನಿಂದ ಮನೆಯಲ್ಲೇ ಇದ್ದರು. ಇದರ ನಡುವೆ ಕುಡಿತದ ಚಟ ಹೊಂದಿದ್ದು ಅ.25ರಂದು ಸುರತ್ಕಲ್ ಮೀನುಗಾರಿಕಾ ಜೆಟ್ಟಿ ಬಳಿ ಪ್ರವಾಸ ಬಂದಿದ್ದ ದಂಪತಿ ಜೊತೆಗೆ ಜಗಳವಾಡಿದ್ದು ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. 

ಇದರಿಂದ ನೊಂದ ಸೋಮನಾಥ ತನ್ನ ಮನೆಯಲ್ಲಿ ಸೋಮವಾರ ಬೆಳಗ್ಗೆ ತನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಇದರ ಬಗ್ಗೆ ಇವರ ಭಾವ ಲೀಲಾಧರ್ ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸು ದಾಖಲಾದ ಬಗ್ಗೆ ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಸಣ್ಣ ಕೇಸಾಗಿದ್ದರೂ ಇದರಿಂದ ಬೆದರಿದ ಸೋಮನಾಥ್ ಸಾವಿಗೆ ಶರಣಾಗಿದ್ದಾರೆ.