HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಭಾಗಿ

21-09-26 10:08 am       HK News Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಹಾಗೂ ಮಂಗಳೂರಿನ ಕಶಾರ್ಪ್ ಫಿಟ್‌ನೆಸ್‌ನ ಜನರಲ್ ಮ್ಯಾನೇಜರ್ ಮತ್ತು ಅಂತರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ಮುಂಬೈನಲ್ಲಿ ನಡೆದ HYROX 2026 ಮೆನ್ಸ್ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿ 1 ಗಂಟೆ 39 ನಿಮಿಷ 09 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದಾರೆ.

ಮುಂಬೈ, ಸೆಪ್ಟೆಂಬರ್ 20 : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಹಾಗೂ ಮಂಗಳೂರಿನ ಕಶಾರ್ಪ್ ಫಿಟ್‌ನೆಸ್‌ನ ಜನರಲ್ ಮ್ಯಾನೇಜರ್ ಮತ್ತು ಅಂತರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ಮುಂಬೈನಲ್ಲಿ ನಡೆದ HYROX 2026 ಮೆನ್ಸ್ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿ 1 ಗಂಟೆ 39 ನಿಮಿಷ 09 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದಾರೆ.

HYROX ಅಂತಾರಾಷ್ಟ್ರೀಯ ಫಿಟ್‌ನೆಸ್ ಸ್ಪರ್ಧೆಯಾಗಿದ್ದು, ಓಟದ ಜೊತೆಗೆ SkiErg, Sled Push & Pull, Burpee Broad Jumps, Rowing, Farmer’s Carry, Sandbag Lunges ಮತ್ತು Wall Balls ಸೇರಿದಂತೆ ಎಂಟು ಫಂಕ್ಷನಲ್ ಫಿಟ್‌ನೆಸ್ ಚಟುವಟಿಕೆಗಳನ್ನು ಒಳಗೊಂಡಿದೆ. ಸ್ಪರ್ಧೆಯು ಶಕ್ತಿ, ಸಹನಶಕ್ತಿ, ಸ್ಟ್ಯಾಮಿನಾ ಮತ್ತು ತಂಡದ ಸಹಕಾರವನ್ನು ಪರೀಕ್ಷಿಸುತ್ತದೆ.

ಆಡಳಿತಾತ್ಮಕ ಜವಾಬ್ದಾರಿಗಳ ನಡುವೆಯೂ ಜಿಲ್ಲಾಧಿಕಾರಿ ದರ್ಶನ್ ಅವರು ಇಂತಹ ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಯುವಜನತೆಗೆ ಪ್ರೇರಣೆಯಾಗಿದೆ. ಫಿಟ್‌ನೆಸ್ ಯಾವುದೇ ವೃತ್ತಿಯವರಿಗೂ ಸಾಧ್ಯವಾಗುವ ಜೀವನಶೈಲಿಯ ಭಾಗ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಅಂತರರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರಿಗೆ HYROX ಹೊಸ ಸವಾಲಾಗಿತ್ತು. ಪವರ್‌ಲಿಫ್ಟಿಂಗ್ ಜೊತೆಗೆ ಓಟ, ಸಹನಶಕ್ತಿ ಮತ್ತು ಫಂಕ್ಷನಲ್ ಫಿಟ್‌ನೆಸ್‌ಗೆ ತರಬೇತಿ ಪಡೆದು ಅವರು ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಬ್ಬರೂ ಸ್ಪರ್ಧೆಯ ಚಟುವಟಿಕೆಗಳನ್ನು ಪರಸ್ಪರ ಹಂಚಿಕೊಂಡು, ನಿಗದಿತ ಓಟದ ವಿಭಾಗಗಳನ್ನು ಪೂರ್ಣಗೊಳಿಸಿದರು.

ಈ ಸಾಧನೆಯು ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಫಿಟ್‌ನೆಸ್ ಸಂಸ್ಕೃತಿಗೆ ಮತ್ತೊಂದು ಉದಾಹರಣೆಯಾಗಿದೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಉತ್ತಮ ಜೀವನಶೈಲಿಗೆ ಯುವಜನರನ್ನು ಪ್ರೇರೇಪಿಸುವ ಈ ಸಾಧನೆ, ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಸ್ಮರಣೀಯ ಮೈಲಿಗಲ್ಲಾಗಿದೆ.