ಬ್ರೇಕಿಂಗ್ ನ್ಯೂಸ್
27-01-26 08:58 pm Mangalore Correspondent ಕರಾವಳಿ
ಉಳ್ಳಾಲ, ಜ.27 : ಕುತ್ತಾರಿನ ದಿವ್ಯಜ್ಯೋತಿ ಕ್ರಿಕೆಟರ್ಸ್ ವತಿಯಿಂದ ಇದೇ ಫೆ.1 ರಂದು ಸಂಜೆ 5 ಗಂಟೆಗೆ ಪಂಡಿತ್ ಹೌಸ್ ನಿಂದ ತಲಪಾಡಿಯ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ "ನಮೆಲ್ಲರ ನಡಿಗೆ ಶ್ರೀ ಕ್ಷೇತ್ರ ತಲಪಾಡಿ ದೇವಿಪುರದ ಕಡೆಗೆ" ಬೃಹತ್ ಪಾದಯಾತ್ರೆ ನಡೆಯಲಿದ್ದು, ಲೋಕ ಕಲ್ಯಾಣಾರ್ಥ ನಡೆಯಲಿರುವ ಪಾದಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಿಜೆಪಿ ಮಂಗಳೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿವ್ಯಜ್ಯೋತಿ ಕ್ರಿಕೆಟರ್ಸ್ ಹಾಗೂ ಅದರ ಅಂಗಸಂಸ್ಥೆಯಾದ ದಿವ್ಯ ಜ್ಯೋತಿ ಸೇವಾ ಬಳಗವು ಉಳ್ಳಾಲ ಭಾಗದಲ್ಲಿ ಕಳೆದ ನಲ್ವತ್ತೈದು ವರುಷಗಳಿಂದ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ಬಹಳ ಜನಮೆಚ್ಚುಗೆ ಪಡೆದಿರುವ ಸಂಸ್ಥೆಯಾಗಿದೆ. ದಿವ್ಯಜ್ಯೋತಿ ಸಂಸ್ಥೆ ವತಿಯಿಂದ ಮೂರು ವರ್ಷದ ಹಿಂದೆ ಹಮ್ಮಿಕೊಂಡಿದ್ದ "ನಮ್ಮ ನಡೆ ಪೊಳಲಿ ರಾಜರಾಜೇಶ್ವರಿ ಅಮ್ಮನ ಕಡೆಗೆ" ಬೃಹತ್ ಪಾದಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರೆತಿತ್ತು. ಆ ಯಶಸ್ಸಿನ ಪ್ರೇರಣೆಯಿಂದಲೇ ತಲಪಾಡಿ ದೇವಿಪುರ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಪಂಡಿತ್ ಹೌಸ್ ನ ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ಕಟ್ಟೆಯ ಬಳಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಬಿಜೆಪಿ ಮಂಗಳೂರು ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಅಧ್ಯಕ್ಷತೆ ವಹಿಸಲಿದ್ದಾರೆ. ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ, ವಿಶ್ವ ಹಿಂದು ಪರಿಷತ್ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ.ಎಂ.ಬಿ.ಪುರಾಣಿಕ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ದಿವ್ಯಜ್ಯೋತಿ ಕ್ರಿಕೆಟರ್ಸ್ ನಿಂದ ಮಾಸ್ಟರ್ ಅಯಾನ್ಶ್ ಸ್ಮರಣಾರ್ಥವಾಗಿ ಉಚಿತ ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆಗೊಳ್ಳಲಿದೆ. ಸಂಜೆ 5 ಗಂಟೆಗೆ ತಲಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆ ಮುಗಿದ ಬಳಿಕ ಭಕ್ತಾದಿಗಳು ತಲಪಾಡಿಯಿಂದ ಹಿಂತಿರುಗಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಹಾಸ್ ಮಾಹಿತಿ ನೀಡಿದರು.
ಒಂದೂವರೆ ವರ್ಷದ ಹಿಂದೆ ಬಜಪೆಯ ಕೆಂಜಾರುವಿನ ಅಯಾನ್ಶ್ ಎಂಬ ಅಪ್ರಾಪ್ತ ಬಾಲಕನಿಗೆ ಮಾರಕ ಕ್ಯಾನ್ಸರ್ ರೋಗ ಭಾದಿಸಿತ್ತು. ಅಯಾನ್ಶ್ ಚಿಕಿತ್ಸೆಗಾಗಿ ದಿವ್ಯಜ್ಯೋತಿ ಕ್ರಿಕೆಟರ್ಸ್ ಸದಸ್ಯರು ಪಿಲಾರಿನ ಪಂಜಂದಾಯ ದೈವದ ಜಾತ್ರೆಯಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿದ್ದರು. ದುಬಾರಿ ಚಿಕಿತ್ಸೆ ನೀಡಿದರೂ ಅಯಾನ್ಶ್ ಬದುಕಿಸಲು ಸಾಧ್ಯವಾಗಿರಲಿಲ್ಲ. ಚಿಕಿತ್ಸೆಗೆಂದು ದಾನಿಗಳು ನೀಡಿದ ದೇಣಿಗೆಯಲ್ಲಿ ಉಳಿದ ಎಂಟು ಲಕ್ಷ ರೂಪಾಯಿಗಳನ್ನ ಪೋಷಕರು ದಿವ್ಯಜ್ಯೋತಿ ಸಂಸ್ಥೆಗೆ ನೀಡಿದ್ದು, ಆ ಹಣದಿಂದ ಅಯಾನ್ಶ್ ಸ್ಮರಣಾರ್ಥ ಸಮಾಜಕ್ಕೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದೇವೆ. ಮೃತ ಅಯಾನ್ಶ್ ತಂದೆ ನಿತ್ಯಾನಂದ ಶೆಟ್ಟಿ ಅವರೇ ಆಂಬ್ಯುಲೆನ್ಸನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ದಿವ್ಯಜ್ಯೋತಿ ಕ್ರಿಕೆಟರ್ಸ್ ಅಧ್ಯಕ್ಷ ಯತೀಶ್ ಶೆಟ್ಟಿ ಹೇಳಿದರು.
ಸಂಸ್ಥೆಯ ಗೌರವಾಧ್ಯಕ್ಷ ಅಶೋಕ್ ಅಮೀನ್, ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ರಂಗನಾಥ್, ಸದಸ್ಯರಾದ ಲಕ್ಷ್ಮಣ್ ಪೂಜಾರಿ, ದಿನೇಶ್ ಪೂಜಾರಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Divyajyothi Cricketers will organise a grand foot march titled “Our Walk Towards Talapady Devipura” on February 1, starting at 5 pm from Pandit House to the Devipura Sri Durga Parameshwari Temple at Talapady. The march is being held for public welfare and devotees are urged to participate in large numbers.
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm