ಬ್ರೇಕಿಂಗ್ ನ್ಯೂಸ್
29-10-26 08:19 pm HK News Staffer ಕರಾವಳಿ
ಮಂಗಳೂರು, ಅ.29: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎರಡು ಮಹತ್ವದ ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ. ಸೌಜನ್ಯಾ ತಾಯಿ ಕುಸುಮಾವತಿ ಅವರ ಕುಟುಂಬಕ್ಕೆ ಸರ್ಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿ ವ್ಯಕ್ತಿಯೊಬ್ಬರು ಎಸ್ಐಟಿಗೆ ದೂರು ನೀಡಿದ್ದು ತಮ್ಮ ಹೆಸರು ಮರೆಮಾಚಿ ಸರ್ಕಾರಿ ಜಾಗ ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಐಜಿಪಿ ಶಶಿಕುಮಾರ್ ತಮ್ಮನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಡಿಜಿ-ಐಜಿಪಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಸೌಜನ್ಯಾ ಮನೆಯ ಸಮೀಪದ ನಿವಾಸಿ ಕಿಶೋರ್ ಎಂಬವರು ಮಂಗಳೂರಿನ ಎಸ್ಐಟಿ ಕಚೇರಿಗೆ ತೆರಳಿ ಕುಸುಮಾವತಿ ವಿರುದ್ಧ ದೂರು ಸಲ್ಲಿಸಿದ್ದು ಕುಸುಮಾವತಿ ಅವರು ‘ಇಂದಿರಾವತಿ’ ಎಂಬ ಹೆಸರನ್ನು ಬಳಸಿಕೊಂಡು ಸುಳ್ಳು ದಾಖಲೆಗಳ ಮೂಲಕ ಸರ್ಕಾರಿ ಜಮೀನು ಪಡೆದುಕೊಂಡಿದ್ದಾರೆ ಎಂದು ದೂರುದಾರರ ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 171/1ಪಿ1ರ 0.40 ಎಕರೆ, 175/ಪಿ1ರ 0.25 ಎಕರೆ ಮತ್ತು 171/ಪಿ1ರ 1.97 ಎಕರೆ ಜಮೀನುಗಳನ್ನು 1998-99ರ ಪ್ರಕರಣದಡಿ ಅಕ್ರಮ-ಸಕ್ರಮ ಯೋಜನೆಯ ಮೂಲಕ 2015ರಲ್ಲಿ ‘ಇಂದಿರಾವತಿ ಕೋಂ ಚಂದಪ್ಪ ಗೌಡ’ ಹೆಸರಿನಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಆದರೆ, ಈ ಜಮೀನು ಕುಸುಮಾವತಿ ಅವರ ಸ್ವಾಧೀನದಲ್ಲಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಇಂದಿರಾವತಿ ಎಂಬ ಹೆಸರಿನ ಮಹಿಳೆ ಪ್ರಸ್ತುತ ಆ ಪ್ರದೇಶದಲ್ಲಿ ವಾಸವಾಗಿಲ್ಲ ಎಂಬ ಅಂಶವನ್ನು ಮುಂದಿಟ್ಟಿರುವ ಕಿಶೋರ್, ಆ ಮಹಿಳೆ ಎಲ್ಲಿದ್ದಾರೆ ಮತ್ತು ಅವರ ಗುರುತು ಏನು ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ವ್ಯಕ್ತಿಗಳೇ ಅಥವಾ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳೇ, ಮೃತ ಸೌಜನ್ಯಾಳ ತಾಯಿ ಕುಸುಮಾವತಿ ಅವರೇ ಹೌದಾ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಏಪ್ರಿಲ್ 10ರಂದು ಬೆಳ್ತಂಗಡಿ ತಹಶೀಲ್ದಾರ್ ಮತ್ತು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ದೂರು ನೀಡಲಾಗಿತ್ತು ಎಂದವರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಐಟಿ ತಂಡದ ಅಧಿಕಾರಿಯೂ ಆಗಿರುವ ಸುಧೀರ್ ರೆಡ್ಡಿ, ಈ ಪ್ರಕರಣ ಸ್ಥಳೀಯವಾಗಿ ನಿರ್ಣಯಿಸಬೇಕಾದ ವಿಷಯ. ಸ್ಥಳೀಯ ಪೊಲೀಸರು ತನಿಖೆ ಮಾಡುತ್ತಾರೆ. ಎಸ್ಐಟಿ ವ್ಯಾಪ್ತಿಗೆ ಬರುವುದಿಲ್ಲ. ಅದಕ್ಕೂ ಸೌಜನ್ಯಾ ಪ್ರಕರಣಕ್ಕೂ ಸಂಬಂಧ ಇಲ್ಲವೆಂದು ತಿಳಿಸಿದ್ದಾರೆ.
ತಂಡದಿಂದ ಮುಕ್ತಗೊಳಿಸಲು ಮನವಿ
ಇದೇ ವೇಳೆ, ಸೌಜನ್ಯ ಪ್ರಕರಣದ ಮರು ತನಿಖೆಗೆ ನಿಯೋಜಿಸಿದ ಎಸ್ಐಟಿ ಮುಖ್ಯಸ್ಥ ಐಜಿಪಿ ಶಶಿಕುಮಾರ್ ಅವರು ತಮ್ಮನ್ನು ತನಿಖೆಯ ನೇತೃತ್ವದಿಂದ ಮುಕ್ತಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಶಶಿಕುಮಾರ್ ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರಿಂದ ಧರ್ಮಸ್ಥಳದೊಂದಿಗೆ ಅವರಿಗೆ ಇದ್ದ ಸಂಪರ್ಕದ ವಿಚಾರವನ್ನು ಮುಂದಿಟ್ಟು ಸೌಜನ್ಯ ಪರ ಹೋರಾಟಗಾರರು ನೇಮಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖೆಯ ನಿಷ್ಪಕ್ಷಪಾತ ಕುರಿತಾಗಿ ಪ್ರಶ್ನೆಗಳನ್ನು ಎತ್ತಿದ್ದರು.
ಹೊಸ ಎಸ್ಐಟಿ ಮುಖ್ಯಸ್ಥ ಯಾರು?
ಶಶಿಕುಮಾರ್ ಅವರ ಮನವಿಯ ಬೆನ್ನಲ್ಲೇ ಎಸ್ಐಟಿಗೆ ಹೊಸ ಮುಖ್ಯಸ್ಥರ ನೇಮಕದ ಕುರಿತು ಚರ್ಚೆ ಆರಂಭವಾಗಿದೆ. ಐಜಿಪಿಗಳಾದ ಲಾಬೂರಾಮ್, ಚೇತನ್ ಸಿಂಗ್ ರಾಥೋಡ್ ಮತ್ತು ಡಾ. ಬೋರಲಿಂಗಯ್ಯ ಅವರ ಹೆಸರುಗಳು ಕೇಳಿಬರುತ್ತಿವೆ.
29-10-26 08:21 pm
HK News Staffer
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
29-10-26 08:23 pm
HK News Staffer
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
29-10-26 08:19 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ; ಪಿಎಸ್ಐ ಯೋಗೀಶ್...
29-10-26 02:12 pm
ಶಾಲೆಗೆ ತೆರಳಿದ್ದ 9ನೇ ಕ್ಲಾಸಿನ ಅಪ್ರಾಪ್ತ ವಿದ್ಯಾರ್...
28-10-26 09:28 pm
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
29-10-26 01:14 pm
HK News Staffer
Kedila Society, Keshav Gowda, Blackmail: ಮುಸ್...
29-10-26 12:14 pm
ಯುನೈಟೆಡ್ ನೇಶನ್ಸ್ ಹೈಕಮಿಷನರ್ ಹೆಸರಲ್ಲಿ ಫೋನ್ ಕರೆ...
28-10-26 10:42 pm
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am