ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ; ಪಿಎಸ್ಐ ಯೋಗೀಶ್, ಭಾಸ್ಕರ ರೈ, ರುದ್ರಮುನಿ ಎಸ್ಐಟಿ ವಿಚಾರಣೆಗೆ ಹಾಜರು, ಲೋಪಗಳ ಬಗ್ಗೆ ವಿವರಣೆ ಸಾಧ್ಯತೆ

29-10-26 02:12 pm       HK News Staffer   ಕರಾವಳಿ

ಧರ್ಮಸ್ಥಳ ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಹಿನ್ನೆಲೆಯಲ್ಲಿ ಹಳೆಯ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗಿದ್ದು ಬೆಳ್ತಂಗಡಿ ಠಾಣೆಯ ಅಂದಿನ ಪೊಲೀಸ್ ಇನ್ಸ್ ಪೆಕ್ಟರ್ ಭಾಸ್ಕರ್ ರೈ, ಸಿಐಡಿ ವಿಭಾಗದ ಅಂದಿನ ಡಿವೈಎಸ್ಪಿ ರುದ್ರಮುನಿ, ಮೊದಲು ತನಿಖೆ ನಡೆಸಿದ್ದ ಪಿಎಸ್ ಐ ಯೋಗೀಶ್ ಮಂಗಳೂರಿನ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.

ಮಂಗಳೂರು, ಅ.29: ಧರ್ಮಸ್ಥಳ ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಹಿನ್ನೆಲೆಯಲ್ಲಿ ಹಳೆಯ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗಿದ್ದು ಬೆಳ್ತಂಗಡಿ ಠಾಣೆಯ ಅಂದಿನ ಪೊಲೀಸ್ ಇನ್ಸ್ ಪೆಕ್ಟರ್ ಭಾಸ್ಕರ್ ರೈ, ಸಿಐಡಿ ವಿಭಾಗದ ಅಂದಿನ ಡಿವೈಎಸ್ಪಿ ರುದ್ರಮುನಿ, ಮೊದಲು ತನಿಖೆ ನಡೆಸಿದ್ದ ಪಿಎಸ್ ಐ ಯೋಗೀಶ್ ಮಂಗಳೂರಿನ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. 
 
ತಾವು ಈ ಹಿಂದೆ ತನಿಖೆ ನಡೆಸಿದ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳು ಸೇರಿದಂತೆ ಹಲವು ಫೈಲ್ ಗಳನ್ನು ಹಿಡಿದು ಮಾಜಿ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂವರು ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡಿಲ್ಲವೆಂದು ಆರೋಪ ಕೇಳಿಬಂದಿತ್ತು. ‌ಪಿಎಸ್ಐ ಯೋಗೀಶ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಆತನೇ ಕೇಸನ್ನು ಹಳ್ಳ ಹಿಡಿಸಿದ್ದಾಗಿ ಆರೋಪಗಳನ್ನು ಮಾಡಲಾಗಿತ್ತು. ‌

ನಿರೀಕ್ಷೆಯಂತೆ, ಎಸ್ಐಟಿ ಅವರನ್ನು ವಿಚಾರಣೆಗೆ ಕರೆಸಿರುವುದು ಕುತೂಹಲ ಮೂಡಿಸಿದೆ. ಸೌಜನ್ಯ ಪ್ರಕರಣ ಸಂಬಂಧಿಸಿದ ಫೈಲ್ ಗಳನ್ನು ಜೊತೆಗೆ ತಂದಿರುವ ಸಾಧ್ಯತೆಯಿದೆ. ಪಿಎಸ್ಐ ಯೋಗೀಶ್ ಕೂಡಾ ಡೈರಿ ಪುಸ್ತಕ ಹಿಡಿದುಕೊಂಡು ಒಬ್ಬರೇ ಬಂದಿದ್ದು ವಿಚಾರಣೆಗೆ ಹಾಜರಾಗಿದ್ದಾರೆ. ಈ ಪೈಕಿ ರುದ್ರಮುನಿ ಮತ್ತು ಭಾಸ್ಕರ ರೈ ಪೊಲೀಸ್ ಸೇವೆಯಿಂದ ನಿವೃತ್ತರಾಗಿದ್ದಾರೆ.