ಸೌಜನ್ಯಾ ಮರು ತನಿಖೆ ; ಎಸ್ಐಟಿ ಮುಖ್ಯಸ್ಥರಾಗಿ ಚೇತನ್ ರಾಥೋಡ್ ನೇಮಕ, ಡಿವೈಎಸ್ಪಿ ಶ್ರೀನಿಧಿ ನಿಯೋಜನೆ

30-10-26 12:51 pm       HK News Staffer   ಕರಾವಳಿ

ಸೌಜನ್ಯಾ ಮರು ತನಿಖೆಗೆ ನಿಯೋಜನೆ ಆಗಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು, ಅ.30: ಸೌಜನ್ಯಾ ಮರು ತನಿಖೆಗೆ ನಿಯೋಜನೆ ಆಗಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಚೇತನ್ ಸಿಂಗ್ ರಾಥೋಡ್ ಸಿಐಡಿ ವಿಭಾಗದಲ್ಲಿ ಐಜಿಪಿ ಆಗಿದ್ದರು. ಇದೀಗ ಹೊಸ ಜವಾಬ್ದಾರಿ ನೀಡಲಾಗಿದ್ದು ಎಸ್ಐಟಿ ಮುಖ್ಯಸ್ಥರಾಗಿದ್ದ ಶಶಿಕುಮಾರ್ ಅವರನ್ನು ಆ ಜಾಗದಿಂದ ತೆರವು ಮಾಡಲಾಗಿದೆ. ಎರಡು ದಿನಗಳ ಹಿಂದೆ ಶಶಿಕುಮಾರ್ ಅವರು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮನ್ನು ಜವಾಬ್ದಾರಿಯಿಂದ ತೆರವು ಮಾಡುವಂತೆ ಕೇಳಿಕೊಂಡಿದ್ದರು. 

ಇದರ ಜೊತೆಗೆ, ಹಾಸನ ಡಿವೈಎಸ್ಪಿಯಾಗಿದ್ದ ಶ್ರೀನಿಧಿ ಅವರನ್ನೂ ಎಸ್ಐಟಿ ತಂಡಕ್ಕೆ ನಿಯೋಜನೆ ಮಾಡಲಾಗಿದೆ. ಡಿವೈಎಸ್ಪಿ ವೆಂಕಟೇಶ ಪ್ರಸನ್ನ ಅವರು ತಮ್ಮನ್ನು ತನಿಖಾ ತಂಡದಿಂದ ಹೊರಗಿಡುವಂತೆ ಕೇಳಿಕೊಂಡಿದ್ದರಿಂದ ಅವರ ಜಾಗಕ್ಕೆ ಶ್ರೀನಿಧಿ ಅವರನ್ನು ನೇಮಕ ಮಾಡಲಾಗಿದೆ.