ಬ್ರೇಕಿಂಗ್ ನ್ಯೂಸ್
30-10-26 09:57 pm HK News Desk ಕ್ರೈಂ
ಮಂಗಳೂರು, ಅ.30: 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಅರೆಸ್ಟ್ ಆಗಿದ್ದ ನಗರದ ವೆಲೆನ್ಸಿಯಾ ಸೈಂಟ್ ವಿನ್ಸೆಂಟ್ ಫೆರಾರಿ ಚರ್ಚ್ ಪಾದ್ರಿ ಸಿಪ್ರಿಯನ್ ಪಿಂಟೋ ಅವರಿಗೆ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ (ಪೋಕ್ಸೋ) ನ್ಯಾಯಾಲಯ ಜಾಮೀನು ನೀಡಿದೆ.
ಎರಡು ತಿಂಗಳ ಹಿಂದೆಯೇ ಘಟನೆ ನಡೆದಿದ್ದರೂ, ಮೈಸೂರಿನ ಒಡನಾಡಿ ಸಂಸ್ಥೆಯವರು ಪೊಲೀಸ್ ಕಮಿಷನರಿಗೆ ಪತ್ರ ಬರೆದಿದ್ದು ಮತ್ತು ಸಾರ್ವಜನಿಕ ಒತ್ತಡದ ಬಳಿಕ ಪಾಂಡೇಶ್ವರ ಠಾಣೆಯಲ್ಲಿ ಸಂತ್ರಸ್ತರ ದೂರನ್ನು ಆಧರಿಸಿ ಪಾದ್ರಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪೋಕ್ಸೋ ಕಾಯ್ದೆಯಡಿ ಬಂಧನವಾದರೆ ಸಾಮಾನ್ಯವಾಗಿ ಮೂರು ತಿಂಗಳ ಕಾಲ ಜಾಮೀನು ಸಿಗುವುದಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರ ದೂರು ಇಲ್ಲದಿದ್ದರೂ ಪೊಲೀಸರಿಗೆ ಸುಮೊಟೊ ಪ್ರಕರಣ ದಾಖಲಿಸುವ ಅಧಿಕಾರ ಇರುತ್ತದೆ.
ಆದರೆ, ಎರಡು ತಿಂಗಳ ಹಿಂದೆ ಘಟನೆ ನಡೆದಿದೆ ಎನ್ನುವುದು ಮತ್ತು ವಿಳಂಬವಾಗಿ ದೂರು ಸಲ್ಲಿಕೆ ಮಾಡಿರುವುದನ್ನು ಪಾದ್ರಿ ಪರ ವಕೀಲರು ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪಾದ್ರಿ ಚರ್ಚ್ ನಲ್ಲಿ ಸಂಜೆ ಏಳು ಗಂಟೆಗೆ ಆವರಣದ ಗೇಟ್ ಬಂದ್ ಮಾಡಿಸುತ್ತಿದ್ದರು ಮತ್ತು ಆಮೂಲಕ ಅನಪೇಕ್ಷಿತ ಘಟನೆಗಳಿಗೆ ಆಸ್ಪದ ಕೊಡುತ್ತಿರಲಿಲ್ಲ. ಇದೇ ಕಾರಣಕ್ಕೆ ಕೆಲವು ಹಿತಾಸಕ್ತಿಗಳು ಸೇರಿ ಈ ರೀತಿ ಸುಳ್ಳು ದೂರು ಕೊಡಿಸಿದ್ದಾರೆಂದು ವಕೀಲರು ಕೋರ್ಟಿನಲ್ಲಿ ಆರೋಪಿಸಿದ್ದಾರೆ.
ಇದರ ನಡುವೆಯೂ, ಸಂತ್ರಸ್ತ ಮಕ್ಕಳು ಮತ್ತು ಅವರ ಕುಟುಂಬಸ್ಥರು ಆರೋಪಿ ಸಿಪ್ರಿಯನ್ ಪಿಂಟೋಗೆ ಜಾಮೀನು ನೀಡಬಾರದು, ಜಾಮೀನು ನೀಡಿದರೆ ಸಂತ್ರಸ್ತರಿಗೆ ಬೆದರಿಕೆ ಹಾಕುವ, ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆ ಇದೆಯೆಂದು ಕೋರ್ಟಿನಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ವಾದಿಸಿದ್ದು ಜಾಮೀನು ನೀಡದಂತೆ ಕೇಳಿಕೊಂಡಿದ್ದರು. ಈ ವಿಚಾರ ಜಾಮೀನು ಆದೇಶದಲ್ಲಿ ಉಲ್ಲೇಖವಾಗಿದೆ.
‘ಈಗಾಗಲೇ ಹತ್ತು ದಿನವನ್ನು ನ್ಯಾಯಾಂಗ ಬಂಧನದಲ್ಲಿ ಪೂರೈಸಿದ್ದು ಪೊಲೀಸರು ಕಸ್ಟಡಿಗೆ ಪಡೆಯಲು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುವ ಇಚ್ಛೆ ಹೊಂದಿಲ್ಲ. ಇದರಿಂದಾಗಿ ಜಾಮೀನು ನೀಡುವುದಕ್ಕೆ ತೊಂದರೆ ಇಲ್ಲ’ ಎನ್ನುವುದನ್ನು ಆರೋಪಿ ಪರ ವಕೀಲ ರಾಜೇಶ್ ಅಮ್ಟಾಡಿ ಕೋರ್ಟಿನಲ್ಲಿ ವಾದಿಸಿದ್ದಾರೆ. ಆರೋಪಿ ಹಿರಿಯ ನಾಗರಿಕರಾಗಿರುವುದು ಮತ್ತು ಚರ್ಚ್ ಸೇವೆಯಿಂದ ಬಿಡುಗಡೆ ಆಗಿರುವುದರಿಂದ ಪುನಃ ಸಂತ್ರಸ್ತರನ್ನು ಭೇಟಿಯಾಗುವ ಪ್ರಮೇಯ ಬರುವುದಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ವಾದಿಸಿದ್ದಾರೆ.
ಆರೋಪಿ ಪರ ವಕೀಲರ ವಾದವನ್ನು ಕೋರ್ಟ್ ಪುರಸ್ಕರಿಸಿದ್ದು, ಪ್ರತಿ ವಿಚಾರಣೆಗೂ ಆರೋಪಿ ಕೋರ್ಟಿಗೆ ಹಾಜರಾಗಬೇಕು, ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹೋಗಬೇಕು, ಅನುಮತಿ ಇಲ್ಲದೆ ವಿದೇಶಕ್ಕೆ ಹೋಗಬಾರದು, ಸಂತ್ರಸ್ತರಿಗೆ ಬೆದರಿಕೆ, ಒತ್ತಡ ಹಾಕಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ನ್ಯಾಯಾಧೀಶ ಮಾನು ಕೆ.ಎಸ್ ಅವರು ಪೋಕ್ಸೋ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಚರ್ಚ್ ನಲ್ಲಿ ಪ್ರಾರ್ಥನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕರನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅವರಿಗೆ ಚಾಕಲೇಟ್ ಕೊಟ್ಟು ಗುಪ್ತಾಂಗವನ್ನು ಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಪಾದ್ರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಾಂಗ ಬಂಧನ ಆಗಿದ್ದರೂ, ಆರೋಪಿ ಸಿಪ್ರಿಯನ್ ಪಿಂಟೋರನ್ನು ಜೈಲಿನಲ್ಲಿರಿಸದೆ ಆರೋಗ್ಯ ತೊಂದರೆ ನೆಪದಲ್ಲಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು ಎನ್ನುವ ಮಾಹಿತಿಯೂ ಇದೆ. ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು ಮತ್ತು ಕೋರ್ಟಿನಲ್ಲಿ ‘ಪ್ರಬಲರ’ ವಾದ ಮಂಡನೆಯಿಂದಾಗಿ ಪೋಕ್ಸೋ ಆರೋಪಿಗೆ ಜಾಮೀನು ಸಿಕ್ಕಿರುವಂತಿದೆ.
Cyprian Pinto, the priest of St. Vincent Ferrer Church in Valencia, Mangaluru, who was arrested in connection with a POCSO case involving allegations of sexual harassment of more than 50 minor boys, has been granted bail by the Additional District and Sessions (POCSO) Court in Dakshina Kannada.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
30-10-26 12:51 pm
HK News Staffer
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ; ಪಿಎಸ್ಐ ಯೋಗೀಶ್...
29-10-26 02:12 pm
30-10-26 11:01 pm
HK News Staffer
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm
ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಬೆಂಗಳೂ...
30-10-26 05:13 pm
ಶಿವಮೊಗ್ಗದಿಂದ ಮಂಗಳೂರಿಗೆ 1.15 ಕೋಟಿ ನಗದು ರವಾನೆ ;...
29-10-26 11:02 pm