ಬ್ರೇಕಿಂಗ್ ನ್ಯೂಸ್
20-01-26 10:59 pm Mangalore Correspondent ಕರಾವಳಿ
ಮಂಗಳೂರು, ಜ.20 : ನಗರದ ಹೊಯ್ಗೆ ಬಜಾರ್ ನಲ್ಲಿರುವ 158 ವರ್ಷಗಳ ಇತಿಹಾಸವುಳ್ಳ, ದೇಶದ ಮೊದಲ ಟೈಲ್ ಫ್ಯಾಕ್ಟರಿಯೆಂದು ಹೆಸರಾಗಿರುವ ಮಂಗಳೂರು ಟೈಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ನಸುಕಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ನಸುಕಿನ 3-4 ಗಂಟೆ ವೇಳೆಗೆ ಹಠಾತ್ತಾಗಿ ಫ್ಯಾಕ್ಟರಿಯ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡಿದ್ದು ಬಹಳಷ್ಟು ನಷ್ಟ ಉಂಟಾಗಿದೆ.
ಆಬಳಿಕ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಮಾಲಕರಾದ ಅಲ್ಬುಕರ್ಕ್ ಸನ್ಸ್ ಕುಟುಂಬದ ಸದಸ್ಯರಲ್ಲಿ ಕೇಳಿದಾಗ, ನಷ್ಟದ ಬಗ್ಗೆ ಮತ್ತು ಹೇಗೆ ಬೆಂಕಿ ಉಂಟಾಗಿದೆಯೆಂದು ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. ಮಂಗಳೂರು ಟೈಲ್ ಫ್ಯಾಕ್ಟರಿಯನ್ನು 1868ರಲ್ಲಿ ಬ್ರಿಟಿಷರ ಆಡಳಿತ ಇದ್ದಾಗ ಅಲೆಕ್ಸ್ ಅಲ್ಬುಕರ್ಕ್ ಪೈಯವರು ಆರಂಭಿಸಿದ್ದರು. ಸದ್ಯ ಈ ಕುಟುಂಬದ ನಾಲ್ಕನೇ ತಲೆಮಾರಿನವರು ಸಂಸ್ಥೆಯನ್ನು ನಡೆಸುತ್ತಿದ್ದಾರೆ.



ದೇಶ- ವಿದೇಶಕ್ಕೆ ಟೈಲ್ಸ್ ಮತ್ತು ಇನ್ನಿತರ ಮಣ್ಣಿನ ಸಾಮಗ್ರಿಗಳನ್ನು ತಯಾರಿಸಿ ಪೂರೈಸುವುದರಲ್ಲಿ ಅಲ್ಬುಕರ್ಕ್ ಸನ್ಸ್ ಒಡೆತನದ ಈ ಫ್ಯಾಕ್ಟರಿ ಹೆಸರು ಪಡೆದಿದೆ. ಬೆಂಕಿ ಅವಘಡದಿಂದ ಫ್ಯಾಕ್ಟರಿಯ ಒಂದು ಭಾಗಕ್ಕೆ ಮಾತ್ರ ಹಾನಿಯಾಗಿದ್ದು ಉತ್ಪಾದನೆಗೇನೂ ತೊಂದರೆಯಾಗಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಈಗಲೂ ಮಂಗಳೂರು ಟೈಲ್ಸ್ ಸಂಸ್ಥೆಯ ಇಟ್ಟಿಗೆ, ಹಂಚುಗಳಿಗೆ ದೇಶಾದ್ಯಂತ ಬೇಡಿಕೆ ಇದೆ. ವಿಷಯ ತಿಳಿದು ಬೆಂಗಳೂರಿನಲ್ಲಿ ನೆಲೆಸಿದ್ದ ಅಲ್ಬುಕರ್ಕ್ ಸಂಸ್ಥೆಯವರು ಮಂಗಳೂರಿಗೆ ಬಂದಿದ್ದಾರೆ.
A fire broke out in the early hours of Tuesday at the historic Mangalore Tile Factory in Hoigebazar, known as India’s first tile factory with a 158-year legacy. The blaze reportedly started around 3–4 a.m., damaging a section of the factory and causing significant loss.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
15-06-26 04:52 pm
HK News Staffer
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
15-06-26 09:21 pm
HK News Staffer
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm
ಸೋಲಾಪುರದಲ್ಲಿ ಭೀಕರ ದುರಂತ! ನಿಯಂತ್ರಣ ತಪ್ಪಿ ನಾಲೆಗ...
15-06-26 11:50 am
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am