ಬ್ರೇಕಿಂಗ್ ನ್ಯೂಸ್
19-12-25 09:46 pm Mangalore Correspondent ಕರಾವಳಿ
ಮಂಗಳೂರು, ಡಿ.19 : ಮಂಗಳೂರಿನ ಬಾಲಪ್ರತಿಭೆ ಒಂದು ವರ್ಷ ಎಂಟು ತಿಂಗಳ ಪ್ರಾಯದ ಜೋಹಾನ್ ಓಝಿಲ್ ಎಂಬ ಪೋರ ಅಪೂರ್ವ ಸಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗೆ ಸೇರಿದ್ದಾನೆ. 200ಕ್ಕೂ ಹೆಚ್ಚು ಬಗೆಯ ವಸ್ತುಗಳು, ದೇಶಗಳ ಹೆಸರು ಸೇರಿದಂತೆ ವಿವಿಧ ಕೆಟಗರಿಯಲ್ಲಿ ಗುರುತಿಸಲ್ಪಟ್ಟು ಸಣ್ಣ ವಯಸ್ಸಿನಲ್ಲೇ ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾನೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ನೊಬೆಲ್ ವರ್ಲ್ಡ್ ರೆಕಾರ್ಡ್ ಬಾಲ ಪುರಸ್ಕಾರದಲ್ಲಿ ದಾಖಲೆಯನ್ನು ಮಾಡಿದ್ದಾನೆ. ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ವಿಭಾಗದಲ್ಲಿ ಜೋಹಾನ್ ಓಝಿಲ್ ನನ್ನು ಸೂಪರ್ ಟ್ಯಾಲೆಂಟೆಡ್ ಕಿಡ್ ಇನ್ ಎ ಮಿಲಿಯನ್ ಎಂದು ಗುರುತಿಸಲಾಗಿದೆ.



ಜೋಹಾನ್ ಓಝಿಲ್ ಒಂದು ವರ್ಷ ಎರಡು ತಿಂಗಳು ಇರುವಾಗಲೇ ವಿಭಿನ್ನವಾಗಿ ಗುರುತಿಸಿಕೊಂಡಿದ್ದ. ಯಾವುದನ್ನು ನೋಡಿದರೂ ಸುಲಭದಲ್ಲಿ ಗುರುತು ಹಿಡಿಯುತ್ತಿದ್ದ. ಹೀಗಾಗಿ ಹೆತ್ತವರು ಪುಟಾಣಿಯನ್ನು ಏನಾದರೂ ಸಾಧನೆ ಮಾಡಿಸಬೇಕೆಂದು ಜಾಲತಾಣದಲ್ಲಿ ಹುಡುಕಾಡಿದಾಗ, ಇಂಥದ್ದೊಂದು ವೇದಿಕೆ ಸಿಕ್ಕಿತ್ತು. ಅದರಲ್ಲಿ ಬೇರೆ ಬೇರೆ ದೇಶಗಳ ಹೆಸರು ಹೇಳುವುದು, ಹಣ್ಣುಗಳನ್ನು ಗುರುತಿಸುವುದು, ವಿಭಿನ್ನ ಆಟ, ವಿಚಾರಗಳನ್ನು ಗುರುತಿಸಿ ಹೇಳುವುದು ಇತ್ಯಾದಿ ಕೆಟಗರಿ ಇತ್ತು.
ಅದರಂತೆ, 3-4 ನಿಮಿಷದ ವಿಡಿಯೋವನ್ನು ಮಾಡಿ ಹೆತ್ತವರೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳುಹಿಸಿದ್ದರು. ಈ ವಿಡಿಯೋದಿಂದಲೇ ರೆಕಾರ್ಡ್ಸ್ ತಂಡದವರ ಸೂಚನೆಯಂತೆ ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೂ ಕಳುಹಿಸಿದ್ದರು. ಒಂದು ತಿಂಗಳ ಹಿಂದೆ ಜೋಹಾನ್ ಓಝಿಲ್ ಹೆಸರು ದಾಖಲೆಗೆ ಸೇರಿದ ಬಗ್ಗೆ ಘೋಷಣೆಯಾಗಿದ್ದು, ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಂಡದ ವೆಬ್ ಸೈಟ್ ನಲ್ಲಿ ಓಝಿಲ್ ಹೆಸರು ಪ್ರಕಟವಾಗಿದೆ.
ಮಂಗಳೂರಿನ ಅಶೋಕನಗರ ನಿವಾಸಿಗಳಾದ ಮಹಮ್ಮದ್ ತನ್ಝೀಲ್ ಮತ್ತು ಮೆಹ್ರೋಜ್ ದಂಪತಿಯ ಪುತ್ರನಾಗಿರುವ ಓಝಿಲ್ 2024ರ ಜನವರಿ 1ರಂದು ಜನಿಸಿದ್ದು, ಒಂದು ವರ್ಷ ಎಂಟು ತಿಂಗಳು ಪೂರೈಸುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದ ರೆಕಾರ್ಡ್ಸ್ ನಲ್ಲಿ ಹೆಸರು ಸಂಪಾದಿಸಿದ್ದಾನೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವೆಬ್ ಸೈಟ್ ನಲ್ಲಿ ಐಬಿಆರ್ ಅಚೀವರ್ ಎಂದು ಗುರುತಿಸಿದ್ದು, ಅಲ್ಲದೆ, ವಿವಿಧ ರೀತಿಯ ಸಾಧನೆಗಳ ಪಟ್ಟಿಯನ್ನು ಗುರುತು ಮಾಡಿದ್ದಾರೆ.
ಜೋಹಾನ್ ಓಝಿಲ್ ತನ್ನ 1.8 ವರ್ಷದಲ್ಲಿ 33 ಬಗೆಯ ಮನೆಯ ಸಾಮಗ್ರಿಗಳು, 20 ಹಣ್ಣುಗಳು, 20 ವಾಹನಗಳು, ದೇಹದ 16 ಅಂಗಗಳು, 14 ತರಕಾರಿ ವಸ್ತುಗಳು, 10 ಪ್ರಾಣಿಗಳು, 9 ಬಣ್ಣಗಳು, 8 ಆಕೃತಿಗಳು, ಏಳು ದೇಶಗಳ ಧ್ವಜಗಳು, ದೇಹದ ಆರು ಇಂದ್ರಿಯಗಳು, ನಾಲ್ಕು ಪ್ರಸಿದ್ಧ ಸ್ಥಳಗಳು, ಇಂಗ್ಲಿಷ್ ಆಲ್ಫಾಬೆಟ್ ಮತ್ತು ಅದಕ್ಕೆ ಸೂಚಿಸಲ್ಪಟ್ಟ ಪದಗಳು, ಆಲ್ಫಾ ಬೆಟ್ ಬಳಸಿಕೊಂಡು ಪಝಲ್ ಗಳನ್ನು ತಯಾರಿಸುವುದು, ಏಳು ಪ್ರಾಣಿಗಳ ದನಿಗಳನ್ನು ಅನುಕರಿಸುವುದನ್ನು ಮಾಡಿರುವುದಾಗಿ 2025ರ ಸೆಪ್ಟಂಬರ್ 25ರಂದು ದಾಖಲೆಗೆ ಸೇರಿಸಿದ್ದಾಗಿ ಬರೆಯಲಾಗಿದೆ.
A remarkable child prodigy from Mangaluru, 1-year-8-month-old Johan Ozil, has achieved global recognition by entering the International Book of Records for his extraordinary abilities at such a tender age. Demonstrating skills far beyond his years, Johan has identified over 200 different objects, including names of countries, fruits, colours, vehicles, and more, earning him multiple record titles.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm