ಬ್ರೇಕಿಂಗ್ ನ್ಯೂಸ್
19-09-25 10:21 pm Mangalore Correspondent ಕರಾವಳಿ
ಮಂಗಳೂರು, ಸೆ.19 : ಕೇಂದ್ರ ಸರಕಾರ ಕಡೆಗೂ ಜನಸಾಮಾನ್ಯರಿಗೆ ಭಾರವಾಗಿದ್ದ ಜಿಎಸ್ಟಿ ಹೊರೆಯನ್ನು ಇಳಿಸುವ ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ತೆರಿಗೆ ಹೊರೆ ಇಳಿಸುವ ಬದಲು ಮತ್ತೆ ಬರೆ ಎಳೆಯುವ ಮುನ್ಸೂಚನೆ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವಾ ದರವನ್ನೂ ಹೆಚ್ಚಿಸಿ ಶಾಕ್ ನೀಡಿದೆ.
ಕರಾವಳಿಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವೆಗಳ ದರವನ್ನು ದುಪ್ಪಟ್ಟು ಮಾಡಲಾಗಿದೆ. ಅಕ್ಟೋಬರ್ 1ರಿಂದ ಸೇವಾ ದರವು ಪರಿಷ್ಕೃತವಾಗಲಿದೆ ಎಂದು ಕಟೀಲು ದೇವಸ್ಥಾನ ಮುಂಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಪಟ್ಟಿಯನ್ನು ನೋಡಿದರೆ ಒಂದೊಂದು ದರವನ್ನೂ ದುಪ್ಪಟ್ಟು ಮಾಡಿರುವುದು ಕಂಡುಬರುತ್ತದೆ.
120 ರೂ. ಇದ್ದ ಹೂವಿನ ಪೂಜೆಗೆ 220 ರೂ. ಮಾಡಿದ್ದಾರೆ. ದುರ್ಗಾ ನಮಸ್ಕಾರಕ್ಕೆ 60 ರೂ. ಇದ್ದುದನ್ನು 140 ಮಾಡಲಾಗಿದೆ. ಪಂಚ ಕಜ್ಜಾಯ 20 ರೂ.ನಿಂದ 40 ರೂ. ಮಾಡಲಾಗಿದೆ. ಸರ್ವ ಸೇವೆ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಮಾಡಲಾಗಿದೆ. ರಂಗಪೂಜೆ ಸೇವೆಯನ್ನು 3 ಸಾವಿರ ರೂ.ನಿಂದ ಆರು ಸಾವಿರಕ್ಕೆ ಹೆಚ್ಚಿಸಲಾಗಿದೆ. ನಾಮಕರಣ ಚೀಟಿಗೆ 40 ರೂ. ಇದ್ದುದನ್ನು 200 ರೂ.ಗೆ ಹೆಚ್ಚಿಸಲಾಗಿದೆ. ಲಡ್ಡು ಪ್ರಸಾದ 20ರಿಂದ 60 ರೂ.ಗೆ ಹೆಚ್ಚಿಸಲಾಗಿದೆ.
ಏಕಾಏಕಿ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಸೇವಾ ದರಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಜಾಲತಾಣದಲ್ಲಿ ಟೀಕೆ ಮಾಡಿದೆ. ಸಿದ್ದರಾಮಯ್ಯ ಸರಕಾರದ ಬೆಲೆ ಏರಿಕೆ ಬಿಸಿ ದೇವಸ್ಥಾನದ ಸೇವೆಗೂ ತಟ್ಟಿದೆ. ಸರ್ಕಾರದ ಖಜಾನೆ ತುಂಬಿಸಲು ಹಿಂದು ದೇವಸ್ಥಾನಗಳಲ್ಲಿ ಬರೆ ಹಾಕಲಾಗಿದೆ ಎಂದು ಟೀಕಿಸಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದೆ.
Even as the Central Government hints at reducing GST to ease the burden on common citizens, the Karnataka State Government has come under fire for hiking service charges at temples under the Muzrai Department — sparking sharp criticism from opposition leaders and devotees alike.
30-01-26 06:35 pm
Bangalore Correspondent
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 08:56 pm
Mangalore Correspondent
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm