ಬ್ರೇಕಿಂಗ್ ನ್ಯೂಸ್
13-08-25 10:17 am Mangalore Correspondent ಕರಾವಳಿ
ಉಳ್ಳಾಲ, ಆ.13 : ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ (44)ಯಾನೆ ರಘು ಮೃತ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದ ರಾಘವೇಂದ್ರ ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಂಬಿಕಾ ರಸ್ತೆಯ ನಿರ್ಮಲಾ ಟ್ರಾವೆಲ್ಸ್ ಗ್ಯಾರೇಜ್ ಬಳಿ ರಸ್ತೆ ಅಪಘಾತ ನಡೆದಿದೆ.

ಘಟನೆಯಲ್ಲಿ ರಾಘವೇಂದ್ರ ಅವರ ತಲೆಯು ರಸ್ತೆ ಬದಿಯ ಆವರಣ ಗೋಡೆಗೆ ಬಡಿದ ಪರಿಣಾಮ ಸ್ಥಳದಲ್ಲಿ ರಕ್ತದೋಕುಳಿಯೇ ಹರಿದಿದೆ. ಅಂಬುಲೆನ್ಸ್ ತುರ್ತು ವಾಹನವು ಸ್ಥಳಕ್ಕೆ ಬರಲು ತಡವರಿಸಿದ ಕಾರಣ ಸ್ಥಳೀಯ ಯುವಕರು ಆಟೋ ರಿಕ್ಷಾದಲ್ಲಿ ಗಾಯಾಳು ರಾಘವೇಂದ್ರ ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲೇ ಅವರು ಉಸಿರು ಚೆಲ್ಲಿದ್ದರೆನ್ನಲಾಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ರಾಘವೇಂದ್ರ ಅವರು ತಾಯಿ, ಪತ್ನಿ ಮತ್ತು ಏಕೈಕ ಗಂಡು ಮಗುವನ್ನ ಅಗಲಿದ್ದಾರೆ.
In a tragic road accident on Tuesday night, a scooter skidded out of control and crashed into the compound wall of a roadside house in the Someshwar Town Panchayat limits, Ambika Road, leading to the death of the rider.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am