ಬ್ರೇಕಿಂಗ್ ನ್ಯೂಸ್
08-08-25 04:42 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.8 : ಧರ್ಮಸ್ಥಳ ಹೆಣ ಹೂತ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು:ದೂರುದಾರನ ಹೇಳಿಕೆಯಂತೆ ಧರ್ಮಸ್ಥಳ - ಸುಬ್ರಹ್ಮಣ್ಯ ಹೆದ್ದಾರಿಯ ಬೋಳಿಯಾರ್ ಎಂಬ ಹೊಸ ಜಾಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಳೆದ ಎರಡು ವಾರಗಳಿಂದ ನೇತ್ರಾವತಿ ಸ್ನಾನಘಟ್ಟದ ಸಮೀಪ ದೂರುದಾರ ತೋರಿಸಿದ ಜಾಗದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ನಡೆಸಲಾಗಿತ್ತು. ಅಲ್ಲಿ ಎರಡು ಕಡೆ ಅಸ್ಥಿಪಂಜರದ ಸಾಕ್ಷ್ಯ ಲಭಿಸಿತ್ತು. ಆನಂತರ, ಅಲ್ಲಿ ಗುರುತಿಸಿರುವ 13ನೇ ಪಾಯಿಂಟ್ ನಲ್ಲಿ ಇನ್ನೂ ಶೋಧ ಕಾರ್ಯ ನಡೆದಿಲ್ಲ.




ಈ ನಡುವೆ, ಎಸ್.ಐ.ಟಿ ತಂಡವನ್ನು ದೂರುದಾರ ಹೊಸ ಜಾಗಕ್ಕೆ ಕರೆದೊಯ್ದಿದ್ದಾನೆ. ಧರ್ಮಸ್ಥಳದಿಂದ ಎರಡು ಕಿಮೀ ದೂರದ ಬೊಳಿಯಾರ್ ಗೋಂಕ್ರತಾರ್ ಎಂಬಲ್ಲಿನ ದಟ್ಟ ಅರಣ್ಯಕ್ಕೆ ಎಸ್.ಐ.ಟಿ ತಂಡ ಆಗಮಿಸಿದೆ. ಹೊಸ ಜಾಗದಲ್ಲಿ ದೂರುದಾರ ಎಷ್ಟು ಸ್ಥಳಗಳನ್ನು ಗುರುತಿಸುತ್ತಾನೆ ಎಂಬ ಕುತೂಹಲ ಇದೆ. ಹೊಸ ಜಾಗದಲ್ಲಿ ಸ್ಥಳ ಗುರುತು ಹಾಕಲು ಎಸ್ಐಟಿ ಮುಂದಾಗಿದ್ದು ಪಾಯಿಂಟ್ ನಂ 15 ರ ಸೈನ್ ಬೋರ್ಡ್ ತೆಗೆದುಕೊಂಡು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ.
ಕಲ್ಲೇರಿಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಹೊಸ ಜಾಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಎಸ್ಐಟಿ ತಂಡ ಮತ್ತು ಶವ ಹೂತಿದ್ದಾನೆ ಎನ್ನಲಾದ ಅರಣ್ಯದೊಳಕ್ಕೆ ದೂರುದಾರ ಕರೆದೊಯ್ದಿದ್ದಾನೆ. ಜುಲೈ 3ರಂದು ನೀಡಿದ್ದ ದೂರಿನಲ್ಲಿ ಕಲ್ಲೇರಿ ಎಂಬಲ್ಲಿ ಶಾಲಾ ಸಮವಸ್ತ್ರದ ಜೊತೆಗೆ ಬಾಲಕಿಯನ್ನು ಹೂತು ಹಾಕಿದ್ದಾಗಿ ಹೇಳಿದ್ದ. ಅಲ್ಲಿಂದ ಒಂದು ಕಿಮೀ ಮುಂದೆ ಬೊಳಿಯಾರ್ ಎಂಬಲ್ಲಿಗೆ ತಂಡ ತಲುಪಿದ್ದು ಕಾಡಿನಲ್ಲಿ ಸ್ಥಳ ಶೋಧ ಕಾರ್ಯ ಆರಂಭಿಸಲಾಗಿದೆ. ಸ್ಥಳಕ್ಕೆ ಹಾರೆ ಪಿಕ್ಕಾಸಿನ ಜೊತೆಗೆ ಕಾರ್ಮಿಕರು ಮತ್ತು ಸಣ್ಣ ಹಿಟಾಚಿಯೂ ತೆರಳಿದೆ.
The Special Investigation Team (SIT) probing the Dharmasthala burial case has launched a fresh search operation in a newly identified location near Boliyar along the Dharmasthala-Subrahmanya highway. This move follows a tip-off by the complainant, who recently guided the team to the dense forest area.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am