Dharmasthala Case, SIT, Body Found: ಬಂಗ್ಲೆಗುಡ್ಡೆ ಕಾಡಿನಲ್ಲಿ ಕೊಳೆತ ಶವ, ಅಸ್ಥಿಗಳು ಪತ್ತೆ ? ಮೂಟೆಯಲ್ಲಿ ಉಪ್ಪು ಹೊತ್ತೊಯ್ದ ಪೊಲೀಸರು, ಎಸ್ಐಟಿ ಅಧಿಕಾರಿಗಳಿಗೇ ಅಚ್ಚರಿ

04-08-25 07:38 pm       Mangalore Correspondent   ಕರಾವಳಿ

ಹೆಣ ಹೂತ ಪ್ರಕರಣ ಸಂಬಂಧಿಸಿ ದೂರುದಾರ ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಹನ್ನೊಂದನೇ ಪಾಯಿಂಟ್ ಗುರುತಿಸಿದ್ದು ಆ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗುವಂತಹ ಬೆಳವಣಿಗೆ ನಡೆದಿದೆ. ಗುಡ್ಡದ ಮೇಲ್ಭಾಗದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯ ಕೊಳೆತು ನಾರುತ್ತಿದ್ದ ಶವ ಪತ್ತೆಯಾಗಿದೆ ಎನ್ನಲಾಗುತ್ತಿಗೆ.

ಬೆಳ್ತಂಗಡಿ, ಆ.4 : ಹೆಣ ಹೂತ ಪ್ರಕರಣ ಸಂಬಂಧಿಸಿ ದೂರುದಾರ ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಹನ್ನೊಂದನೇ ಪಾಯಿಂಟ್ ಗುರುತಿಸಿದ್ದು ಆ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗುವಂತಹ ಬೆಳವಣಿಗೆ ನಡೆದಿದೆ. ಗುಡ್ಡದ ಮೇಲ್ಭಾಗದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯ ಕೊಳೆತು ನಾರುತ್ತಿದ್ದ ಶವ ಪತ್ತೆಯಾಗಿದೆ ಎನ್ನಲಾಗುತ್ತಿಗೆ. ಇದಲ್ಲದೆ, ಆ ಜಾಗದಲ್ಲಿ ಅಗೆತ ಮಾಡಿದ ಸಂದರ್ಭದಲ್ಲಿ ಎಲುಬಿನ ತುಂಡುಗಳು ಸಿಕ್ಕಿವೆ ಎನ್ನುವ ಮಾಹಿತಿಗಳಿದ್ದು, ಹೆಣ ಹೂತ ಪ್ರಕರಣ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.

ಇಲ್ಲಿ ವರೆಗೆ ಅಗೆದಿರುವ ಹತ್ತು ಪಾಯಿಂಟ್ ಗಳಲ್ಲಿ ಆರನೇ ಗುರುತು ಹಾಕಿದ್ದ ಜಾಗದಲ್ಲಿ ಮಾತ್ರ ಶವದ ಅವಶೇಷ ಸಿಕ್ಕಿತ್ತು. ಉಳಿದ ಕಡೆ ಶವಗಳ ಯಾವುದೇ ಸಾಕ್ಷ್ಯ ಸಿಗದೇ ಇದ್ದುದರಿಂದ ದೂರುದಾರನ ಬಗ್ಗೆಯೇ ಸಂಶಯ ವ್ಯಕ್ತವಾಗಿತ್ತು. ಇದೇ ವೇಳೆ, ನೇತ್ರಾವತಿ ನದಿ ಪಕ್ಕದಲ್ಲಿ ಅನಾಥ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿಯೇ ಹೂಳಲಾಗಿತ್ತು ಎಂದು ವಿಧಿ ವಿಜ್ಞಾನ ತಂಡದ ವೈದ್ಯ ಡಾ.ಮಹಾಬಲ ಶೆಟ್ಟಿ ಅವರೂ ಹೇಳಿದ್ದರು. ಹೀಗಾಗಿ ಹೆಣ ಹೂತಿದ್ದೇನೆಂದು ತೋರಿಸಿದ್ದ ವಿಚಾರ ಗೊಂದಲಕ್ಕೆ ಕಾರಣವಾಗಿರುವಾಗಲೇ ದೂರುದಾರ ಹನ್ನೊಂದನೇ ಪಾಯಿಂಟನ್ನು ಬದಲಿಸಿದ್ದಾರೆ.

ಧರ್ಮಸ್ಥಳ ಸ್ನಾನಘಟ್ಟ ಬಳಿಯಿಂದ ಅಲ್ಲಿಯೇ ಮೇಲ್ಭಾಗದ ಬಂಗ್ಲೆಗುಡ್ಡೆ ಕಾಡಿಗೆ ಪೊಲೀಸರನ್ನು ಕರೆದೊಯ್ದಿದ್ದು ಅಲ್ಲಿ ಅನಿರೀಕ್ಷಿತವಾಗಿ ಇತ್ತೀಚೆಗೆ ಮೃತಪಟ್ಟ ಶವ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಮೂರು ಮೂಟೆಗಳಲ್ಲಿ ಉಪ್ಪನ್ನು ಪೊಲೀಸರು ಸ್ಥಳಕ್ಕೆ ಹೊತ್ತೊಯ್ದಿದ್ದಾರೆ. ಶವ ಕೊಳೆತಿರುವುದರಿಂದ ಉಪ್ಪು ಒಯ್ದಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇದರ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಎಸ್ಪಿ ಜಿತೇಂದ್ರ ದಯಾಮ ಸೇರಿದಂತೆ ಹಿರಿಯ ಅಧಿಕಾರಿಗಳು ಮಧ್ಯಾಹ್ನ ಊಟಕ್ಕೂ ಬಾರದೆ ಸಂಜೆಯ ವರೆಗೂ ಸ್ಥಳದಲ್ಲೇ ಇದ್ದು, ತನಿಖೆ ನಡೆಸುತ್ತಿದ್ದಾರೆ. ಶವ ಸಿಕ್ಕಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಗುಡ್ಡಕ್ಕೆ ಯಾರು ಹೋಗದಂತೆ ಎಎನ್ಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.

In a surprising twist in the ongoing Dharmasthala burial investigation, the Special Investigation Team (SIT) discovered a highly decomposed body and what appear to be human bone fragments in the Banglegudde forest area, near the eleventh excavation point marked by the original complainant.