ಬ್ರೇಕಿಂಗ್ ನ್ಯೂಸ್
25-07-25 06:05 pm Mangalore Correspondent ಕರಾವಳಿ
ಮಂಗಳೂರು, ಜುಲೈ 25 : ಧರ್ಮಸ್ಥಳ ಹೆಣ ಹೂತ ಪ್ರಕರಣದಲ್ಲಿ ಎಸ್ಐಟಿ ರಚನೆಗೊಂಡು ಐದು ದಿನಗಳ ನಂತರ ಪೊಲೀಸ್ ಅಧಿಕಾರಿಗಳು ತನಿಖೆಗೆ ಇಳಿದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ, ಡಿಐಜಿ ದರ್ಜೆಯ ಎಂ.ಎನ್.ಅನುಚೇತ್ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಮಂಗಳೂರಿಗೆ ಆಗಮಿಸಿದ್ದು ತನಿಖಾ ತಂಡದ ಸದಸ್ಯರ ಜೊತೆಗೆ ನಗರದ ಮಲ್ಲಿಕಟ್ಟೆ ಐಬಿಯಲ್ಲಿ ಕುಳಿತು ಸಭೆ ನಡೆಸಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಅನುಚೇತ್ ನೇರವಾಗಿ ನಗರದ ಓಷ್ಯನ್ ಪರ್ಲ್ ಹೊಟೇಲ್ ಆಗಮಿಸಿದ್ದಾರೆ. ಅಲ್ಲಿಂದ ಮಲ್ಲಿಕಟ್ಟೆಯ ಸರಕಾರಿ ಅತಿಥಿ ಬಂಗಲೆಗೆ ತೆರಳಿ ಎಸ್ಐಟಿ ತಂಡದ ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಎಸ್ಐಟಿ ತಂಡದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್ ಪೆಕ್ಟರ್, ಎಸ್ಐ ಇನ್ನಿತರ ಸಿಬಂದಿಯನ್ನು ನೇಮಿಸಲಾಗಿದೆ.




ಏಂಟಿ ನಕ್ಸಲ್ ಟೀಮಿನಲ್ಲಿದ್ದ ಜಿತೇಂದ್ರ ಕುಮಾರ್ ದಯಾಮ ತನಿಖಾ ತಂಡದಲ್ಲಿ ಎಸ್ಪಿ ಇದ್ದಾರೆ. ಈಗ ಮಂಗಳೂರಿಗೆ ಬಂದಿರುವ ತಂಡದಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದು ಖಚಿತವಾಗಿಲ್ಲ. 2-3 ಪೊಲೀಸರ ವಾಹನಗಳಿದ್ದು, ಐಪಿಎಸ್ ಅಧಿಕಾರಿ ಅನುಚೇತ್ ಕೂಡ ಮಂಗಳೂರಿಗೆ ಬಂದು ತನಿಖಾ ತಂಡದ ಜೊತೆ ಸೇರಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ದಕ್ಷಿಣ ಕನ್ನಡ ಎಸ್ಪಿಯಿಂದ ಮಾಹಿತಿ ಪಡೆದು ಆನಂತರ ಧರ್ಮಸ್ಥಳ ತೆರಳುವ ಸಾಧ್ಯತೆಯಿದೆ. ಜುಲೈ 3ರಂದು ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿದ್ದೆ ಎಂದು ಹೇಳಿಕೊಂಡಿದ್ದ ವ್ಯಕ್ತಿ ತಾನು ನೂರಾರು ಹೆಣಗಳನ್ನು ಕಾಡಿನಲ್ಲಿ ಹೂತು ಹಾಕಿದ್ದೆ, ಪ್ರಾಯಶ್ಚಿತ್ತಕ್ಕಾಗಿ ಎಲ್ಲವನ್ನೂ ಹೇಳುತ್ತೇನೆ, ಹೆಣ ಹೂತಿದ್ದನ್ನು ತೆಗೆದು ತೋರಿಸುತ್ತೇನೆ ಎಂದು ಹೇಳಿದ್ದ. ಈ ವಿಚಾರ ಇಡೀ ದೇಶದಲ್ಲಿ ಸುದ್ದಿಯಾಗಿದ್ದಲ್ಲದೆ, ರಾಷ್ಟ್ರೀಯ ಮಾಧ್ಯಮಗಳು ಮತ್ತು ಕೇರಳದ ಮಾಧ್ಯಮಗಳು ಹೆಚ್ಚು ಬೆನ್ನು ಬಿದ್ದಿವೆ. ಇದರಿಂದ ಒತ್ತಡಕ್ಕೆ ಬಿದ್ದ ರಾಜ್ಯ ಸರಕಾರ ಘಟನೆ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಮಾಡಿತ್ತು.
Five days after the Karnataka government constituted a Special Investigation Team (SIT) to probe the alleged mass burial case in Dharmasthala, senior police officers have officially launched the investigation. DIG M.N. Anucheth, a key member of the SIT, arrived in Mangaluru on Friday evening at 4 PM to initiate proceedings on the ground.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm