ವಿಟ್ಲ ; ಈಜಲು ತೆರಳಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ ಉದ್ಯೋಗಿ ನೀರಿನಲ್ಲಿ ಮುಳುಗಿ ಸಾವು

25-08-26 12:46 pm       HK News Staffer   ಕ್ರೈಂ

ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವಿಟ್ಲದ ಕೋಟಿಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ವಿಟ್ಲ ಕಸಬಾ ಗಾಳಿಹಿತ್ಲು ನಿವಾಸಿ ವೀರಪ್ಪ ಗೌಡ ಅವರ ಪುತ್ರ, ಎಸ್‌ಸಿಡಿಸಿಸಿ ಬ್ಯಾಂಕ್‌ ಉದ್ಯೋಗಿ ಲಿತಿನ್‌ (32) ಎಂದು ಗುರುತಿಸಲಾಗಿದೆ.

ವಿಟ್ಲ , ಆ. 25: ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವಿಟ್ಲದ ಕೋಟಿಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ವಿಟ್ಲ ಕಸಬಾ ಗಾಳಿಹಿತ್ಲು ನಿವಾಸಿ ವೀರಪ್ಪ ಗೌಡ ಅವರ ಪುತ್ರ, ಎಸ್‌ಸಿಡಿಸಿಸಿ ಬ್ಯಾಂಕ್‌ ಉದ್ಯೋಗಿ ಲಿತಿನ್‌ (32) ಎಂದು ಗುರುತಿಸಲಾಗಿದೆ.

ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ನೀರಿನಲ್ಲಿ ಮುಳುಗಿದ್ದ ಲಿತಿನ್‌ ಅವರನ್ನು ಸ್ಥಳೀಯರು ತಕ್ಷಣ ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಲಿತಿನ್‌ ಅವರು ತಂದೆ, ತಾಯಿ, ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.