ಬ್ರೇಕಿಂಗ್ ನ್ಯೂಸ್
24-08-26 07:04 pm HK News Staffer ಕ್ರೈಂ
ಮಂಗಳೂರು, ಆ.24: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಸಾವಿರಾರು ಕೋಟಿ ವಂಚನೆಗೈದು ಇಡಿ ಬಲೆಗೆ ಬಿದ್ದಿದ್ದ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಜೈಲು ಸೇರಿದ್ದಾನೆ. ಜಾರಿ ನಿರ್ದೇಶನಾಲಯದ ಮಂಗಳೂರು ವಿಭಾಗದ ಅಧಿಕಾರಿಗಳು ಆಗಸ್ಟ್ 13ರಂದು ನೀಲಣ್ಣವರ್ ನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದರು. 12 ದಿನಗಳ ಕಸ್ಟಡಿ ಮುಗಿದು ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಹಣಕಾಸು ವಂಚನೆ ಮಾಡಿದ್ದ. ತಿಂಗಳಿಗೆ ಗರಿಷ್ಠ ಬಡ್ಡಿಯ ಆಸೆ ತೋರಿಸಿ ಜನಸಾಮಾನ್ಯರಲ್ಲಿ ಭಾರೀ ಹೂಡಿಕೆ ಮಾಡಿಸಿದ್ದು ಕೆಲವೇ ವರ್ಷಗಳಲ್ಲಿ ಹಣಕಾಸು ಸಾಮ್ರಾಜ್ಯ ಕಟ್ಟಿದ್ದ. 2019ರ ಬಳಿಕ ಈತನ ಕಂಪನಿ ನಷ್ಟದ ಹಾದಿ ಹಿಡಿದಿದ್ದು ತಿಂಗಳ ಬಡ್ಡಿ ಮೊತ್ತ ಹಿಂತಿರುಗಿಸಲಾಗದೆ ನೆಪಗಳನ್ನು ಹೇಳುತ್ತ ತಿರುಗಾಡಿದ್ದ. ಈತನ ವಂಚನೆಯ ಬಗ್ಗೆ ಎರಡು ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಹಣಕಾಸು ವಂಚನೆಯ ಬಗ್ಗೆ ಇಡಿ, ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಬೆಳಗಾವಿ ಪೊಲೀಸರ ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರೂ, ಆ.12ರಂದು ವಿಚಾರಣೆ ಸಲುವಾಗಿ ಇಡಿ ಅಧಿಕಾರಿಗಳು ಮಂಗಳೂರಿನ ಕಚೇರಿಗೆ ಕರೆಸಿಕೊಂಡಿದ್ದರು. ಅಂದು ಇಡೀ ದಿನದ ವಿಚಾರಣೆ ಬಳಿಕ ಮರುದಿನ ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದರು.



ಇಡಿ ತನಿಖೆಯಲ್ಲಿ ನೀಲಣ್ಣವರ್ ಸಂಸ್ಥೆಯು 2110 ಕೋಟಿ ವಂಚನೆಗೈದಿರುವುದಾಗಿ ಕಂಡುಬಂದಿತ್ತು. 2002ರ ಹಣಕಾಸು ಅಕ್ರಮ ವರ್ಗಾವಣೆ ನಿಷೇಧ ಕಾಯ್ದೆ ಮತ್ತು 2019ರ ಅಕ್ರಮ ಹೂಡಿಕೆ ಯೋಜನೆಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸಾವಿರಾರು ಜನರಿಂದ ಹೂಡಿಕೆ ಮಾಡಿಸಿ ಹಣವನ್ನು ಸಂಗ್ರಹಿಸಿದ್ದಲ್ಲದೆ, ಆ ಹಣದಲ್ಲಿ ಶಿವಾನಂದ ನೀಲಣ್ಣವರ್ ಐಷಾರಾಮಿ ಜೀವನ ಮಾಡಿಕೊಂಡಿದ್ದ. ಪ್ರಕರಣದಲ್ಲಿ ಆರೋಪಿ ನೀಲಣ್ಣವರ್ ನನ್ನು ಇಡಿ ಅಧಿಕಾರಿಗಳು 12 ದಿನಗಳ ಕಸ್ಟಡಿಗೆ ಪಡೆದ ಹಿನ್ನೆಲೆಯಲ್ಲಿ ಆತನ ಪರ ವಕೀಲರು ಮಂಗಳೂರಿನ ಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಇಂದು ಮಂಗಳೂರಿನ ಜೆಎಂಎಫ್ ಸಿ (ಪಿಎಂಎಲ್ಎ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶದ ಬಗ್ಗೆ ಭೀತಿ ವ್ಯಕ್ತಪಡಿಸಿದ್ದರು. ಹೀಗಾಗಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆಮೂಲಕ ಅಂದಾಜು ನಾಲ್ಕು ಸಾವಿರ ಕೋಟಿ ಸಾಮ್ರಾಜ್ಯ ಕಟ್ಟಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಜೈಲು ಪಾಲಾಗಿದ್ದಾನೆ.
21-10-26 10:31 pm
HK News Desk
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
21-10-26 09:20 pm
HK News Desk
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
Mangalore Accident, Ullal: ಓವರ್ ಟೇಕ್ ಧಾವಂತದಲ್...
19-10-26 08:41 pm
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
22-10-26 10:32 am
HK News Staffer
ಬೋಳಿಯಾರಿನಲ್ಲಿ ಸ್ಕೂಟರ್ ಸವಾರರ ಸಾವು ಪ್ರಕರಣ ; ಅಪಘ...
20-10-26 05:06 pm
ಮಂಗಳೂರಿನ ಮಹಿಳಾ ಅಧಿಕಾರಿಗೆ ಅಶ್ಲೀಲ ವಿಡಿಯೋ ಕಳುಹಿಸ...
20-10-26 04:13 pm
ಮೊಗವೀರಪಟ್ನ ಶಾರದಾ ಮೆರವಣಿಗೆ ; ಟ್ಯಾಬ್ಲೋಗಳಿಗೆ ಬಾಂ...
20-10-26 03:10 pm
ಮೈಸೂರು ದಸರಾ ನೋಡಿ ವಾಪಸಾಗುತ್ತಿದ್ದ ವೇಳೆ ಬೆಳ್ತಂಗ...
20-10-26 10:56 am