ಬ್ರೇಕಿಂಗ್ ನ್ಯೂಸ್
15-07-25 07:19 pm Mangalore Correspondent ಕರಾವಳಿ
ಮಂಗಳೂರು, ಜುಲೈ 15 : ಕೆಎಂಸಿ ಆಸ್ಪತ್ರೆ ವತಿಯಿಂದ 25 ವರ್ಷಗಳಿಂದ ಸಾರ್ವಜನಿಕರಿಗೆ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದ್ದು, ಆಸ್ಪತ್ರೆ ಬಿಲ್, ನಿಯಮಿತ ತಪಾಸಣೆ, ತಜ್ಞ ವೈದ್ಯರ ಭೇಟಿ ಇತ್ಯಾದಿ ಆಸ್ಪತ್ರೆ ವೆಚ್ಚಗಳ ಮೇಲೆ ರಿಯಾಯಿತಿ ಪಡೆಯಬಹುದಾಗಿದೆ. ಕಾರ್ಡ್ ಮಾಡಿಸಿಕೊಂಡರೆ ಮಂಗಳೂರಿನ ಅತ್ತಾವರ ಕೆಎಂಸಿ, ಜ್ಯೋತಿ ಕೆಎಂಸಿ ಆಸ್ಪತ್ರೆ, ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರಿಯಾಯಿತಿ ಸೌಲಭ್ಯ ಸಿಗಲಿದೆ.
ವೈಯಕ್ತಿಕ ಅಗತ್ಯಕ್ಕೆ ಕಾರ್ಡ್ ಪಡೆಯುವುದಾದರೆ ಒಬ್ಬನಿಗೆ ಒಂದು ವರ್ಷಕ್ಕೆ 350 ರೂಪಾಯಿಗೆ ಕಾರ್ಡ್ ಸಿಗುತ್ತದೆ. ಅದೇ ಕುಟುಂಬ ಸದಸ್ಯರಿಗೆಲ್ಲ ಒಟ್ಟಾಗಿ ಮಾಡುವುದಿದ್ದರೆ 700 ಅಥವಾ ಸಂಖ್ಯೆ ಅನುಸರಿಸಿ 900 ರೂ.ಗೆ ಕಾರ್ಡ್ ಮಾಡಿಸಬಹುದು. ಎರಡು ವರ್ಷಕ್ಕೆ ವೈಯಕ್ತಿಕ ಅಗತ್ಯಕ್ಕೆ 600 ರೂ. ಹಾಗೂ ಕುಟುಂಬಕ್ಕೆ 950 ಅಥವಾ 1100 ರೂ.ಗೆ ಕಾರ್ಡ್ ಪಡೆಯಬಹುದು. ವೈಯಕ್ತಿಕ ಕಾರ್ಡ್ ನವೀಕರಣ ಒಂದು ವರ್ಷಕ್ಕೆ 300 ರೂ., ಎರಡು ವರ್ಷಕ್ಕೆ 450 ರೂ. ಇರಲಿದೆ. ಕುಟುಂಬದ ಕಾರ್ಡ್ ನವೀಕರಣಕ್ಕೆ ವರ್ಷಕ್ಕೆ 600 ರೂ., ಎರಡು ವರ್ಷಕ್ಕೆ 850 ರೂ. ಇರಲಿದೆ. ಕಾರ್ಡ್ ಮಾಡಿಸಿದವರಿಗೆ ಮಣಿಪಾಲ, ಮಂಗಳೂರು, ಕಟೀಲು, ಕಾರ್ಕಳ, ಗೋವಾದಲ್ಲಿರುವ ಕೆಎಂಸಿ ಆಸ್ಪತ್ರೆಗಳಲ್ಲಿ ರಿಯಾಯಿತಿ ಸೌಲಭ್ಯ ಸಿಗಲಿದೆ.


ಕಾರ್ಡ್ ಮಾಡಿಸಿದವರಿಗೆ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಹೊರರೋಗಿ ಸಮಾಲೋಚನೆಗೆ 50 ಶೇ. ಕಡಿತ ಇರಲಿದೆ. ಹೊರರೋಗಿ ಪ್ರಯೋಗಾಲಯ ಪರೀಕ್ಷೆಗಳಿಗೆ 20 ಶೇ., ರೇಡಿಯೋಲಜಿ ಪರೀಕ್ಷೆಗೆ 20 ಶೇ., ಹೊರ ರೋಗಿ ಇನ್ನಿತರ ತಪಾಸಣೆಗೆ ಹತ್ತು ಶೇಕಡಾ ರಿಯಾಯಿತಿ ಸಿಗಲಿದೆ. ಜ್ಯೋತಿ ಕೆಎಂಸಿ ಮತ್ತು ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಯಲ್ಲೂ ಕಾರ್ಡ್ ಮೇಲೆ ರಿಯಾಯಿತಿ ಸೌಲಭ್ಯ ಇದೆ. ಹೊರ ರೋಗಿ ಡಯಾಲಿಸಿಸ್ ಮಾಡುವುದಕ್ಕೆ 50 ಶೇಕಡಾ ಕಡಿತ ಇರಲಿದೆ. ಅತ್ತಾವರ ಕೆಎಂಸಿಯಲ್ಲಿ ಒಳರೋಗಿ (ಜನರಲ್ ವಾರ್ಡ್) ಬಿಲ್ ಮೇಲೆ 25 ಶೇಕಡಾ ರಿಯಾಯಿತಿ ಸಿಗಲಿದೆ. ಜ್ಯೋತಿ ಕೆಎಂಸಿಯಲ್ಲಿ ಎಲ್ಲಾ ವಾರ್ಡಿನಲ್ಲಿ 5 ಶೇಕಡಾ ರಿಯಾಯ್ತಿ ಸೌಲಭ್ಯ ಸಿಗಲಿದೆ. ಕಟೀಲು ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ ನವರಿಗೆ 25 ಶೇಕಡಾ ಕಡಿತ ಸಿಗಲಿದೆ.
ಮಂಗಳೂರು ಮತ್ತು ಮಣಿಪಾಲದ ದಂತ ವೈದ್ಯಕೀಯ ಆಸ್ಪತ್ರೆಗಳಲ್ಲಿಯೂ ಮಣಿಪಾಲ ಆರೋಗ್ಯ ಕಾರ್ಡ್ ಇದ್ದರೆ ರಿಯಾಯಿತಿ ಸೌಲಭ್ಯ ಸಿಗಲಿದೆ. ಇದಲ್ಲದೆ, ಮಣಿಪಾಲ್ ಆಸ್ಪತ್ರೆಯಲ್ಲಿ ಸಿಗುವ ಇನ್ನಿತರ ಚಿಕಿತ್ಸೆ, ಸೌಲಭ್ಯಗಳಿಗೂ ಈ ಕಾರ್ಡ್ ಲಾಭ ದೊರೆಯಲಿದೆ. ಸಾರ್ವಜನಿಕರು ಕಾರ್ಡ್ ಪಡೆಯಲು ಸಮೀಪದ ಕೆಎಂಸಿ ಆಸ್ಪತ್ರೆ ಅಥವಾ ಏಜಂಟರನ್ನು ಸಂಪರ್ಕಿಸಬಹುದು. ಹೆಲ್ತ್ ಇನ್ಶೂರೆನ್ಸ್ ಮಾದರಿಯಲ್ಲೇ ಮಣಿಪಾಲ್ ಸಂಸ್ಥೆಯವರು ಕಳೆದ 25 ವರ್ಷಗಳಿಂದ ಆರೋಗ್ಯ ಕಾರ್ಡ್ ವಿತರಿಸುತ್ತಿದ್ದಾರೆ ಎಂದು ಕೆಎಂಸಿ ಪ್ರಕಟಣೆ ತಿಳಿಸಿದೆ.
For the past 25 years, the KMC Hospitals under the Manipal Group have been offering the Manipal Health Card, a healthcare benefits program that provides discounts on hospital bills, regular health check-ups, specialist consultations, and other services across their network of hospitals.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
31-01-26 04:56 pm
HK News Desk
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
31-01-26 03:38 pm
Mangalore Correspondent
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm