ಬ್ರೇಕಿಂಗ್ ನ್ಯೂಸ್
13-06-25 01:05 pm Mangalore Correspondent ಕರಾವಳಿ
ಮಂಗಳೂರು, ಜೂನ್ 13 : ಕರಾವಳಿಯಲ್ಲಿ ಕೋಮು ದ್ವೇಷ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ರಚನೆ ಮಾಡಬೇಕು ಅಂತ ಬಹಳ ದಿನಗಳಿಂದ ಅಂದುಕೊಂಡಿದ್ದೆವು. ಇಲ್ಲಿ ಶಾಂತಿ ಕಾಪಾಡಬೇಕು ಅನ್ನೋದಷ್ಟೆ ಇದರ ಉದ್ದೇಶ. ಸೌಹಾರ್ದ ರೂಪದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನ ಪಟ್ಟೆವು. ಆದರೆ ಆ ಪ್ರಯತ್ನ ಫಲ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಬೈ ಫೋರ್ಸ್ ಆಗಿ ಶಾಂತಿ ಸ್ಥಾಪನೆಗೆ ಕಾರ್ಯಪಡೆ ರಚಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ವಿಶ್ವಾಸ ಇದೆ, ಇದರ ಹೆಚ್ಚಿನ ಉಪಯೋಗ ಇಲ್ಲಿ ಬರದು. ಜನ ಅರ್ಥ ಮಾಡಿಕೊಂಡರೆ ಇದರ ಅಗತ್ಯತೆ ಕಡಿಮೆಯಾಗಲಿದೆ ಎಂದುಕೊಳ್ತೀನಿ. ಶಾಂತಿ ಸ್ಥಾಪನೆಯೇ ಈ ವಿಶೇಷ ಕಾರ್ಯ ಪಡೆಯ ಮೂಲ ಉದ್ದೇಶ. ಏಂಟಿ ನಕ್ಸಲ್ ಪಡೆಯಲ್ಲಿದ್ದ ಸಿಬಂದಿಯನ್ನು ಇಲ್ಲಿ ಬಳಸಿಕೊಂಡಿದ್ದೇವೆ.
ANF ಪಡೆಯನ್ನು ಪೂರ್ತಿಯಾಗಿ ವಿಸರ್ಜನೆ ಮಾಡುವುದಿಲ್ಲ. ANF ಅಗತ್ಯತೆ ಸದ್ಯಕ್ಕೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಬರಬಹುದು. ದೇಶದ ನಾನಾ ಭಾಗಗಳಲ್ಲಿ ನಕ್ಸಲ್ ಚಟುವಟಿಕೆ ಇಂದಿಗೂ ಇದೆ. ಆ ಭಾಗದಿಂದ ನಮ್ಮ ರಾಜ್ಯಕ್ಕೆ ನಕ್ಸಲರು ವಲಸೆ ಬರುವ ಆತಂಕ ಇದೆ. ಈ ಹಿಂದೆ ಕೂಡ ಇಂತಹ ಸಂದರ್ಭಗಳು ಬಂದಿವೆ. ಒಂದು ವೇಳೆ ಬೇರೆ ಭಾಗಗಳಿಂದ ನಕ್ಸಲರು ಬಂದರೆ ನಾವು ತಯಾರಾಗಿರಬೇಕು ಎಂಬ ಕಾರಣಕ್ಕೆ ಅರ್ಧದಷ್ಟು ಪಡೆಯನ್ನು ಉಳಿಸಿಕೊಂಡಿದ್ದೇವೆ ಎಂದರು.
ಅಶ್ರಫ್ ಹಾಗೂ ರೆಹಮಾನ್ ಕೊಲೆ ಪ್ರಕರಣದ ತನಿಖೆ ನಡಿತಾ ಇದೆ. ತನಿಖೆ ಒಂದು ದಿನ, ಒಂದು ವಾರ ಒಂದು ತಿಂಗಳಲ್ಲಿ ಮುಗಿದು ಹೋಗುವುದಿಲ್ಲ. ಪ್ರಕರಣದ ಬುಡಕ್ಕೆ ಹೋಗಿ ಎಲ್ಲಿಂದ ಆಯಿತು? ಯಾರು ಅದರ ಹಿಂದೆ ಇದ್ದಾರೆ? ಎಂಬ ಬಗ್ಗೆ ಈ ಪ್ರಕರಣಗಳ ವಿಸ್ತ್ರತ ತನಿಖೆಯನ್ನು ನಡೆಸಲಾಗುತ್ತಿದೆ.
ಈ ಹತ್ಯೆಗಳು ವೈಯಕ್ತಿಕ ಕಾರಣಗಳಿಗಾಗಿ ಆಗಿದೆಯಾ? ಅಥವಾ ಕೋಮು ದ್ವೇಷದಿಂದ ಆಗಿದೆಯಾ? ಗೊತ್ತಿಲ್ಲ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ, ಆ ಬಳಿಕ ಏನು, ಯಾಕೆಂದು ಸ್ಪಷ್ಟವಾಗಲಿದೆ ಎಂದು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಎನ್ಐಎಗೆ ವಹಿಸಿರುವ ಕುರಿತಾಗಿ ಕೇಳಿದ ಪ್ರಶ್ನೆಗೆ, ಯಾವುದೇ ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳುವ ಅಧಿಕಾರ ಅವರಿಗಿದೆ. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದ್ದರಿಂದ ಅವರಿಗೆ ತನಿಖೆಗೆ ಪ್ರಕರಣ ಕೊಡಲೇಬೇಕಾದ ಅನಿವಾರ್ಯತೆ ಇದೆ. ಅಶ್ರಫ್ ಹಾಗೂ ರೆಹಮಾನ್ ಹತ್ಯೆ ಪ್ರಕರಣದ ತನಿಖೆಯನ್ನು NIA ಯವರು ಕೇಳಿಲ್ಲ. ಈ ಪ್ರಕರಣದ ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ. ಎನ್ಐಎಗೆ ನೀಡುವ ಅವಶ್ಯಕತೆ ಇಲ್ಲ.
ಸುಹಾಸ್ ಶೆಟ್ಟಿ ಪ್ರಕರಣವನ್ನು NIA ಯವರು ಸ್ಪೆಸಿಫಿಕ್ ಆಗಿ ಯಾಕೆ ಕೇಳಿದ್ದಾರೆ ಗೊತ್ತಿಲ್ಲ. ಅಶ್ರಫ್ ಹಾಗು ರೆಹಮಾನ್ ಹತ್ಯೆ ಪ್ರಕರದ ತನಿಖೆ ನಮ್ಮ ಪೊಲೀಸರು ಮಾಡುತ್ತಿದ್ದಾರೆ. ಅದನ್ನು ತೀವ್ರಗೊಳಿಸುವ ಅವಶ್ಯಕತೆ ಇದ್ದರೆ ಎಸ್ ಐ ಟಿ ರಚನೆ ಬಗ್ಗೆ ಮುಂದೆ ನೋಡುತ್ತೇವೆ ಎಂದು ಹೇಳಿದರು.
In a major move aimed at maintaining communal harmony in the coastal region, Karnataka Home Minister Dr. G. Parameshwara announced the formation of a special task force to curb the rising instances of communal tension. Addressing the media in Mangaluru, the minister clarified that the decision was taken as a last resort after peaceful efforts failed to yield results.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm