ಬ್ರೇಕಿಂಗ್ ನ್ಯೂಸ್
08-05-25 04:52 pm Mangalore Correspondent ಕರಾವಳಿ
ಮಂಗಳೂರು, ಮೇ 8 : ಮಂಗಳೂರಿನ ಹೆಸರಾಂತ ಬಿಲ್ಡರ್ ಮತ್ತು ಡೆವಲಪರ್ ಆಗಿರುವ ರೋಹನ್ ಕಾರ್ಪೊರೇಷನ್ ಕರ್ನಾಟಕ ಸಂಸ್ಥೆಗೆ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಘೋಷಿಸಲಾಗಿದೆ.
ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ರೋಹನ್ ಕಾರ್ಪೊರೇಷನ್ ಸಂಸ್ಥೆಯು ಮೂರು ದಶಕಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದು ಅತ್ಯುತ್ತಮ ಸೇವೆಗೆ ಹೆಸರಾಗಿದೆ. ಮಂಗಳೂರಿನಲ್ಲಿ ರೋಹನ್ ಸಂಸ್ಥೆಯು ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ ಇತ್ಯಾದಿ ಪ್ರಮುಖ ಆಕಾಶದೆತ್ತರದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖವಾಗಿದೆ.
25 ಪೂರ್ಣ ಪ್ರಮಾಣದ ಯೋಜನೆಗಳು ಹಾಗೂ ಸುಸ್ಥಿರ, ಗ್ರಾಹಕ ಕೇಂದ್ರಿತ ಅಭಿವೃದ್ಧಿ ಯೋಜನೆಗಳಿಂದಾಗಿ ಕರ್ನಾಟಕದ ರಿಯಲ್ ಎಸ್ಟೇಟ್ ವಲಯದಲ್ಲಿ ರೋಹನ್ ಸಂಸ್ಥೆ ಹೊಸ ಗುರುತನ್ನು ಮೂಡಿಸಿದೆ. ಇದೀಗ ಬಾಲಿವುಡ್ಡಿನ ಖ್ಯಾತ ಸಿನಿಮಾ ತಾರೆ ಶಾರುಖ್ ಖಾನ್ ಅವರನ್ನು ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದ್ದು, ಸಂಸ್ಥೆಯ ಪಾಲಿಗೆ ಹೊಸ ಗರಿ ಮೂಡಿಸಿದೆ.
ಶಾರುಖ್ ಖಾನ್ ನಮ್ಮ ರಾಯಭಾರಿಯಾಗಿರುವುದು ಸಂಸ್ಥೆಯ ಪಾಲುದಾರಿಕೆಗಿಂತ ದೊಡ್ಡದೆಂದು ನಂಬುತ್ತೇವೆ. ಇದು ನಮ್ಮ ಕನಸು ಹಾಗೂ ಬದ್ಧತೆಗೆ ಸಿಕ್ಕ ಪ್ರತಿಫಲವಾಗಿದೆ. ಶಾರುಖ್ ಖಾನ್ ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ಆಗಿರುವಂತೆ, ರೋಹನ್ ಕಾರ್ಪೊರೇಷನ್ ಜನಸಾಮಾನ್ಯರ ಜೀವನವನ್ನು ಮಾರ್ಪಡಿಸುವ ಮೂಲಕ ಸ್ಫೂರ್ತಿ ನೀಡುವ ಆಕಾಂಕ್ಷೆ ಹೊಂದಿದೆ. ಶಾರುಖ್ ಸಹಭಾಗಿತ್ವದಲ್ಲಿ ನಾವು ಕರ್ನಾಟಕ ಹಾಗೂ ಅದರಾಚೆಗೆ ನಗರ ಜೀವನವನ್ನು ಮರು ವ್ಯಾಖ್ಯಾನಿಸುವ ಭರವಸೆಗೆ ಬದ್ಧರಾಗಿದ್ದೇವೆ ಎಂದು ಸಂಸ್ಥೆಯ ಚೇರ್ಮನ್ ರೋಹನ್ ಮೊಂತೇರೊ ಹೇಳಿದ್ದಾರೆ.
"ನನ್ನ ಪರಿಶ್ರಮ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಫಲಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್ ಜೊತೆಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುಸ್ಥಿರ, ಸಾಮುದಾಯಿಕ ಅಭಿವೃದ್ಧಿ ವಿಚಾರಗಳು ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತವೆ. ದೂರದೃಷ್ಟಿಯೊಂದಿಗೆ ನಾಳಿನ ನಗರಗಳನ್ನು ರೂಪಿಸುವ ಅದ್ಭುತ ಪ್ರಯಾಣದ ಭಾಗವಾಗಿರಲು ನಾನು ಎದುರು ನೋಡುತ್ತಿದ್ದೇನೆ ಎಂಬುದಾಗಿ ಶಾರುಖ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ಶಾರುಖ್ ಖಾನ್ ಅವರೊಂದಿಗೆ ರೋಹನ್ ಕಾರ್ಪೊರೇಷನ್ ಸಂಸ್ಥೆಯ ಪಾಲುದಾರಿಕೆ ಕ್ರಿಯಾತ್ಮಕ ಬೆಳವಣಿಗೆ, ವ್ಯಾಪಕ ತೊಡಗುವಿಕೆ ಮತ್ತು ದೃಢವಾದ ಬ್ರ್ಯಾಂಡ್ ಅಸ್ತಿತ್ವದ ನವಯುಗವನ್ನು ಸಂಕೇತಿಸುತ್ತಿದ್ದು ಇದು ಕರ್ನಾಟಕದಾದ್ಯಂತ ಕನಸುಗಾರರ ಹೊಸ ತಲೆಮಾರು ಸೃಷ್ಟಿಸಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Rohan Corporation, a real estate company, has announced actor Shah Rukh Khan as its official brand ambassador for Karnataka. Rohan Monteiro, Founder and Chairman, Rohan Corporation, said, "Having Khan represent Rohan Corporation is more than a partnership — it’s a meeting of dreams and determination. Just as Khan has inspired millions through his journey of hard work and passion, Rohan Corporation aspires to inspire through spaces that transform lives. With him on board, we are reaffirming our promise to redefine urban living in Karnataka and beyond.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
12-07-25 04:21 pm
HK News Desk
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
12-07-25 01:42 pm
Mangalore Correspondent
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
12-07-25 01:32 pm
HK News Desk
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm