ಬ್ರೇಕಿಂಗ್ ನ್ಯೂಸ್
06-05-25 06:36 pm Mangalore Correspondent ಕರಾವಳಿ
ಮಂಗಳೂರು, ಮೇ 6 : ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ನಡೆಸುತ್ತಿರುವ ಮಹಮ್ಮದ್ ಮುಸ್ತಫಾ ಆಯೋಜಿಸಿದ್ದ ಕ್ರಿಕೆಟ್ ಮ್ಯಾಚ್ ಗೆ ಸ್ಪೀಕರ್ ಯುಟಿ ಖಾದರ್, ಕಾಂಗ್ರೆಸ್ ಮುಖಂಡ ಇನಾಯತ್ ಆಲಿ ಹೋಗಿದ್ದರು. ಅದೇ ರೆಸಾರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಮುಸ್ತಫಾಗೂ, ಕೊಲೆ ರೂವಾರಿ ಆದಿಲ್ ಗೂ ನೇರ ಸಂಪರ್ಕ ಇದೆ. ಫಾಜಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದ ಯುಟಿ ಖಾದರ್ ಗೂ ಮುಸ್ತಫಾಗೂ ಸಂಬಂಧ ಇದ್ದಿರುವ ಅನುಮಾನ ಇದೆ. ಹೀಗಾಗಿ ಕೊಲೆ ಪ್ರಕರಣದಲ್ಲಿ ಖಾದರ್ ಶಾಮೀಲಾತಿ ಇರುವ ಬಗ್ಗೆ ಅನುಮಾನಗಳಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಯುಟಿ ಖಾದರ್, ಇನಾಯತ್ ಆಲಿ, ರಮಾನಾಥ ರೈ ಅವರಿಗೆ ಮಹಮ್ಮದ್ ಮುಸ್ತಫಾ ಶುಭಕೋರಿ ಬ್ಯಾನರ್ ಹಾಕಿರುವ ಫೋಟೋ ಪ್ರದರ್ಶಿಸಿದರು. ಮುಸ್ತಫಾ ರೆಸಾರ್ಟಿನಲ್ಲೇ ಆರೋಪಿಗಳು ಪಾರ್ಟಿ ಮಾಡಿದ್ದಾರೆ. ಹೀಗಿದ್ದ ಮೇಲೆ ಯುಟಿ ಖಾದರಿಗೂ, ಇನಾಯತ್ ಆಲಿಗೂ ಈ ಕೊಲೆ ಪ್ರಕರಣದ ಬಗ್ಗೆ ಮೊದಲೇ ತಿಳಿದಿತ್ತೇ ಎನ್ನುವ ಅನುಮಾನ ಇದ್ದು, ಸ್ಪೀಕರ್ ಆಗಿದ್ದುಕೊಂಡು ಅವರು ಮಾತಾಡಿರುವ ರೀತಿ, ಫಾಜಿಲ್ ಕುಟುಂಬವನ್ನು ತನಿಖೆ ಮೊದಲೇ ಕ್ಲೀನ್ ಚಿಟ್ ಕೊಟ್ಟು ಸಮರ್ಥಿಸಿದ್ದು ಸಂಶಯಕ್ಕೆ ಎಡೆಮಾಡಿದೆ. ಇಂತಹ ವ್ಯಕ್ತಿ ಸ್ಪೀಕರ್ ಆಗಿ ಮುಂದುವರಿಯಬಾರದು, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ರಾಜ್ಯಪಾಲರು ಈ ಕುರಿತಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜ್ಪೆ ಠಾಣೆಯಲ್ಲಿ ಎಸ್ ಬಿ ಆಗಿರುವ ರಶೀದ್ ಎಂಬ ಪೊಲೀಸ್ ಪೇದೆ ಆರೋಪಿಗಳ ಜೊತೆ ಶಾಮೀಲಾತಿ ಹೊಂದಿದ್ದಾನೆ. ಆತನ ಹಿನ್ನೆಲೆ, ಕೊಲೆ ಪ್ರಕರಣದಲ್ಲಿ ನಂಟಿನ ವಿಚಾರದಲ್ಲಿ ತನಿಖೆ ಆಗಬೇಕಿದೆ. ಕೂಡಲೇ ಸೇವೆಯಿಂದ ಸಸ್ಪೆಂಡ್ ಮಾಡಿ, ಇಲಾಖೆಯಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದ ಅವರು, ಹಿಂದು ಸಂಘಟನೆ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದೇ ರೀತಿ ಮುಸ್ಲಿಮರ ಮನೆಗೂ ಪೊಲೀಸರು ನುಗ್ಗಿದ್ದಾರೆಯೇ ಅವರಲ್ಲೂ ರೌಡಿ ಶೀಟರ್ ಗಳು ಇದ್ದಾರಲ್ಲವೇ, ಪೊಲೀಸ್ ಕಮಿಷನರ್ ಯಾಕೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪೊಲೀಸರ ವರ್ತನೆ ನೋಡಿದರೆ, ಕೊಲೆ ಪ್ರಕರಣದಲ್ಲಿ ಇಲಾಖೆಯೇ ಶಾಮೀಲಾದ ಬಗ್ಗೆ ಅನುಮಾನ ಬರ್ತಿದೆ. ಈ ಬಗ್ಗೆ ಎನ್ಐಎ ತನಿಖೆಯಾದರೆ ಮಾತ್ರ ನಿಜ ಸಂಗತಿ ಹೊರಬಂದೀತು. ಇಲ್ಲಿನ ಪೊಲೀಸರ ಬಗ್ಗೆ ನಮಗೆ ವಿಶ್ವಾಸ ಇಲ್ಲ. ಮೊನ್ನೆ ಎಂಟು ಆರೋಪಿಗಳನ್ನು ಬಂಧಿಸಿದ್ದಾಗಿ ಹೇಳಿದ ಕಮಿಷನರ್, ಅವರನ್ನು ಎಲ್ಲಿ ಬಂಧಿಸಿದ್ದಾರೆಂದು ತಿಳಿಸಿಲ್ಲ ಯಾಕೆ. ಆರೋಪಿಗಳನ್ನು ಸರೆಂಡರ್ ಮಾಡಿದ್ದಾರೆಯೇ, ಅವರು ಕೊಲೆ ಮಾಡಿ ಪರಾರಿಯಾಗಿಲ್ಲವೇ, ಅಲ್ಲಿಯೇ ಉಳಿದುಕೊಂಡಿದ್ದರೇ, ಮೊದಲೇ ಈ ಬಗ್ಗೆ ಒಪ್ಪಂದ ಆಗಿತ್ತೇ ಎಂಬ ಬಗ್ಗೆ ಪ್ರಶ್ನೆಗಳಿವೆ. ಈ ಪ್ರಶ್ನೆಗೆ ಪೊಲೀಸರೇ ಉತ್ತರ ಕೊಡಬೇಕಾಗುತ್ತದೆ. ಪಹಲ್ಗಾಮ್ ರೀತಿಯಲ್ಲೇ ಮಹಿಳೆಯರು, ಮಕ್ಕಳ ಎದುರಲ್ಲೇ ಕಡಿದು ಹಾಕಿದ್ದಾರೆ. ಇದೊಂದು ರೀತಿಯ ಭಯೋತ್ಪಾದಕ ಕೃತ್ಯವಾಗಿದ್ದು, ಪಿಎಫ್ಐ ಸಂಘಟನೆಯ ನೇರ ಕೈವಾಡದಿಂದಲೇ ಈ ಕೃತ್ಯ ಆಗಿದೆ ಎಂದು ಹೇಳಿದರು.
ಸುಹಾಸ್ ಶೆಟ್ಟಿ ಮೇಲೆ ಬಿಜೆಪಿಯವರೇ ರೌಡಿ ಶೀಟ್ ಹಾಕಿದ್ದರು ಎಂಬ ಪ್ರಶ್ನೆಗೆ, ರೌಡಿಶೀಟ್ ಹಾಕುವುದು ಪೊಲೀಸರು. ಒಂದೆರಡು ಕೇಸ್ ಇದ್ದ ಮಾತ್ರಕ್ಕೆ ಯಾರ ಮೇಲೂ ರೌಡಿಶೀಟ್ ಹಾಕಬಹುದು. ಕಾಂಗ್ರೆಸ್ ಮುಖಂಡರ ಮೇಲೆ ಕೇಸ್ ಇಲ್ವಾ.. ರೌಡಿಶೀಟಲ್ಲಿದ್ದ ಮಾತ್ರಕ್ಕೆ ಆತನನ್ನು ಕೊಲ್ಲಬೇಕು ಅನ್ನುತ್ತಾರೆಯೇ ಉಸ್ತುವಾರಿ ಸಚಿವರು. ಎಲ್ಲ ರೌಡಿಗಳನ್ನು ಕತ್ತಿಯಿಂದ ಕೊಲ್ಲುವುದಕ್ಕೆ ಆದೇಶ ಮಾಡಿದ್ದಾಗಿ ಕಾಂಗ್ರೆಸ್ ಸರಕಾರ ಹೇಳಿಬಿಡಲಿ ಎಂದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಚಿಕ್ಕಮಗಳೂರಿನ ಮುಸ್ತಫಾ ಮತ್ತು ಯುಟಿ ಖಾದರಿಗೂ ಇರುವ ಸಂಬಂಧ ಏನೆಂಬುದು ಜನರಿಗೆ ತಿಳಿಯಬೇಕು. ಕೊಲೆಗಾರರು ಮುಸ್ತಫಾ ಜೊತೆಗಿದ್ದವರು, ಆತನ ರೆಸಾರ್ಟಿನಲ್ಲಿಯೇ ಇದ್ದು ಪಾರ್ಟಿ ಮಾಡಿದ್ದಾರೆ ಎಂದ ಮೇಲೆ ಆತನ ಪಾತ್ರ ಇಲ್ಲ ಎನ್ನಲಿಕ್ಕಾಗುತ್ತಾ. ಇಂಥ ವ್ಯಕ್ತಿಯ ಜೊತೆಗೆ ಸ್ಪೀಕರ್ ಆದವರು ಸಂಪರ್ಕ ಇಟ್ಟುಕೊಂಡಿದ್ದಾರೆ, ಅದೇ ನೆಪದಲ್ಲಿ ಫಾಜಿಲ್ ಮನೆಯವರಿಗೆ ಕ್ಲೀನ್ ಚಿಟ್ ಕೊಡುತ್ತಾರೆ, ಪ್ರವೀಣ್ ನೆಟ್ಟಾರು, ಪ್ರಶಾಂತ್ ಪೂಜಾರಿ ಮನೆಗೆ ಹೋಗಿರದ ಕಾಂಗ್ರೆಸ್ ನಾಯಕರು ಫಾಜಿಲ್ ಮನೆಗೆ ತೆರಳಿ 25 ಲಕ್ಷ ಪರಿಹಾರ ಕೊಟ್ಟಿದ್ದರು. ಈಗ ಅದೇ ದುಡ್ಡು ಕೊಲೆಗೆ ಬಳಕೆಯಾಗಿದೆ, ಅದರ ಜೊತೆಗೆ ವಿದೇಶದಿಂದಲೂ ದೊಡ್ಡ ಮಟ್ಟದ ಫಂಡಿಂಗ್ ಆಗಿದೆ. ಇದರಲ್ಲಿ ಯುಟಿ ಖಾದರ್ ಪಾತ್ರ ಇಲ್ಲ ಎಂದು ಹೇಳಕ್ಕಾಗುತ್ತಾ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ಎಂಎಲ್ಸಿ ಕಿಶೋರ್ ಕುಮಾರ್, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.
BJP leader Satish Kumpala has stirred political controversy by questioning the alleged connections between Chikkamagaluru-based resort owner Mohammad Mustafa and Karnataka Assembly Speaker UT Khader, following reports that murder accused individuals were seen partying at Mustafa’s resort.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
12-07-25 04:21 pm
HK News Desk
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
12-07-25 01:42 pm
Mangalore Correspondent
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
12-07-25 01:32 pm
HK News Desk
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm