ಬ್ರೇಕಿಂಗ್ ನ್ಯೂಸ್
26-08-26 06:41 pm HK News Staffer ದೇಶ - ವಿದೇಶ
ಕಣ್ಣೂರು, ಆ.26: ಪುತ್ರಿ ಅಂತರ್ಜಾತಿ ವಿವಾಹವಾಗಿದ್ದ ನೆಪದಲ್ಲಿ ದೇವಸ್ಥಾನದ ಅರ್ಚಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿದ ಆರೋಪ ಕೇರಳದ ಕಣ್ಣೂರಿನಲ್ಲಿ ಕೇಳಿಬಂದಿದೆ. ಮಲಬಾರ್ ದೇವಸ್ವಂ ಮಂಡಳಿಗೆ ಒಳಪಟ್ಟ ಕಣ್ಣೂರಿನ ಮುಚಿಲೋಟ್ ಭಗವತಿ ದೇವಸ್ಥಾನದಲ್ಲಿ ಪೂಜಾ ಸಹಾಯಕರಾಗಿದ್ದ ಸಿ.ವಿ. ರಾಜನ್ ಅವರು ತನ್ನ ಅಮಾನತು ಕ್ರಮವನ್ನು ಪ್ರಶ್ನಿಸಿ ಮಲಬಾರ್ ದೇವಸ್ವಂ ಮಂಡಳಿಯ ಉಪ ಆಯುಕ್ತರಿಗೆ ದೂರು ನೀಡಿದ್ದಾರೆ.
ರಾಜನ್ ಅವರು ಕಳೆದ 30 ವರ್ಷಗಳಿಂದ ಪೂಜಾ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನ ಸಮಿತಿ ತಮ್ಮನ್ನು ಅಮಾನತುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಅವರು ಮಂಡಳಿಯ ಉಪ ಆಯುಕ್ತರಿಗೆ ದೂರು ನೀಡಿದ್ದು, ತನ್ನ ಪುತ್ರಿಯ ಮದುವೆ ಕಾರಣದಿಂದಲೇ ತಮ್ಮನ್ನು ಅಮಾನತು ಮಾಡಿದ್ದಾಗಿ ಆರೋಪಿಸಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ರಾಜನ್ ದೂರು ಸಲ್ಲಿಸಿದ್ದಾರೆ.
ವಣಿಯ ಸಮುದಾಯಕ್ಕೆ ಸೇರಿದ ರಾಜನ್ ಅವರ ಪುತ್ರಿಯ ವಿವಾಹವು ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಮೇಲ್ಜಾತಿಯ ಪೊದುವಾಳ್ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದು ಸಾಂಪ್ರದಾಯಿಕ ಪದ್ಧತಿ ಅನುಸರಿಸುತ್ತಿದ್ದ ಇವರ ಜಾತಿ ಪ್ರಮುಖರಲ್ಲಿ ಚರ್ಚೆಗೆ ಕಾರಣವಾಗಿತ್ತು. ಪುತ್ರಿಯ ನಿಶ್ಚಿತಾರ್ಥ ಒಂದು ವರ್ಷದ ಹಿಂದೆಯೇ ನಡೆದಿದ್ದು ಆಬಳಿಕ ತಮ್ಮನ್ನು ಕೆಲಸದಿಂದ ದೂರ ಉಳಿಯುವಂತೆ ದೇವಸ್ಥಾನ ಸಮಿತಿ ಸೂಚಿಸಿತ್ತು ಎಂದು ರಾಜನ್ ಆರೋಪಿಸಿದ್ದಾರೆ.
ಶಾಸಕ ವಿ. ಕುಂಜಿಕೃಷ್ಣನ್ ಅವರಿಗೂ ರಾಜನ್ ದೂರು ನೀಡಿದ್ದು ತಾನು ಮತ್ತು ತನ್ನ ಪುತ್ರಿ ಕೇರಳಂ ಮಾನವ ಹಕ್ಕುಗಳ ಆಯೋಗಕ್ಕೆ ಒಟ್ಟು ಮೂರು ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ, ಆಯೋಗ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm