ಬ್ರೇಕಿಂಗ್ ನ್ಯೂಸ್
26-04-25 08:03 pm Mangalore Correspondent ಕರಾವಳಿ
ಮಂಗಳೂರು, ಎ.26 : ಭಾರೀ ಕುತೂಹಲ ಮೂಡಿಸಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟ (ಕೆಎಂಎಫ್) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಬಣಕ್ಕೆ ಭರ್ಜರಿ ಜಯ ಸಿಕ್ಕಿದೆ. ಉಡುಪಿ ಜಿಲ್ಲೆಯಲ್ಲಿ ಬೆಳಪು ನೇತೃತ್ವದ ಹೈನುಗಾರರ ಬಳಗದ ಅಭ್ಯರ್ಥಿಗಳು ಎಂಟಕ್ಕೆ ಎಂಟು ಸ್ಥಾನವನ್ನೂ ಗೆದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಮತ್ತು ಇಬ್ಬರು ಹೈನುಗಾರರ ಬಳಗದವರು ಗೆಲುವು ಸಾಧಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ(165), ಉದಯ ಕೋಟ್ಯಾನ್(172 ಮತ), ಎಸ್.ಪ್ರಕಾಶ್ಚಂದ್ರ ಮೇಕೋಡು-(185), ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ(-145), ಕೊಡವೂರು ರವಿರಾಜ ಹೆಗ್ಡೆ(220), ಕೆ.ಶಿವಮೂರ್ತಿ ಉಪಾಧ್ಯ(124), ಮುಡಾರು ಸುಧಾಕರ ಶೆಟ್ಟಿ(162), ಹದ್ದೂರು ಮಮತಾ ಶೆಟ್ಟಿ(190) ಗೆಲುವು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಯಾವ ಅಭ್ಯರ್ಥಿಯೂ ಗೆಲುವು ಪಡೆದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಕೆ.ಚಂದ್ರಶೇಖರ ರಾವ್ (169 ಮತ), ಎಸ್.ಬಿ ಜಯರಾಮ ರೈ-190, ಹೆಚ್.ಪ್ರಭಾಕರ್-157, ಭರತ್ ಎನ್-173, ಸುಧಾಕರ ರೈ-97 ಮತ್ತು ಮಹಿಳಾ ಕೋಟಾದಿಂದ ಸ್ಪರ್ಧಿಸಿದ್ದ ಸವಿತಾ ಶೆಟ್ಟಿ(235 ಮತ) ಗೆಲುವು ಕಂಡಿದ್ದಾರೆ. ಕಾಂಗ್ರೆಸಿನ ಹೈನುಗಾರರ ಬಳಗದಿಂದ ಸ್ಪರ್ಧಿಸಿದ್ದ ಸುಚರಿತ ಶೆಟ್ಟಿ-99 ಮತ್ತು ನಂದರಾಮ ರೈ-97 ಪ್ರಯಾಸದಲ್ಲಿ ಗೆಲುವು ಕಂಡಿದ್ದಾರೆ. ಎರಡು ಜಿಲ್ಲೆಯ ವ್ಯಾಪ್ತಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟಕ್ಕೆ 16 ಸದಸ್ಯರಿದ್ದು, 10-6 ಅಂತರದಲ್ಲಿ ಹೈನುಗಾರರ ಬಳಗ ಗೆಲುವು ದಾಖಲಿಸಿದೆ. ಆಮೂಲಕ ಸಹಕಾರಿ ಧುರೀಣನ ನೇತೃತ್ವದ ಬಣವು ಅಧಿಕೃತವಾಗಿ ಕೆಎಂಎಫ್ ಅಧಿಕಾರ ಹಿಡಿಯಲು ಎಂಟ್ರಿಯಾಗಿದೆ.
ಠುಸ್ಸಾದ ಸಂಘ ಪರಿವಾರದ ನಡೆ
ಸಂಘ ಪರಿವಾರದಿಂದ ಈ ಬಾರಿ ಹೊಸಬರಿಗೆ ಮಾತ್ರ ಟಿಕೆಟ್ ಎನ್ನುವ ನಡೆ ಇಟ್ಟಿದ್ದು ಉಡುಪಿ ಜಿಲ್ಲೆಯಲ್ಲಿ ಭಾರೀ ಹಿನ್ನಡೆಗೆ ಕಾರಣವಾಗಿದೆ. ಹಿಂದಿನಿಂದಲೂ ಕೆಎಂಎಫ್ ಸಹಕಾರ ಭಾರತಿ ಹಿಡಿತದಲ್ಲೇ ಇತ್ತು. ಆದರೆ ಈ ಬಾರಿ 'ಸಹಕಾರ ರತ್ನ'ನ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಒಳಕ್ಕೆಳೆದು ಅಲ್ಲಿಯೂ ಅಧಿಕಾರ ಹಿಡಿಯುವ ತಂತ್ರಗಾರಿಕೆ ಯಶಸ್ವಿಯಾಗಿದೆ.
In a significant turn of events, the Dakshina Kannada Milk Federation (KMF) has elected a new governing body led by Congress leader Belupu Deviprasad Shetty. The election results have sparked excitement among dairy farmers and stakeholders across the region.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm