ಬ್ರೇಕಿಂಗ್ ನ್ಯೂಸ್
02-04-25 04:11 pm Mangalore Correspondent ಕರಾವಳಿ
ಮಂಗಳೂರು, ಎ.2 : ಬುಡಕಟ್ಟು ಜನರ ಬದುಕು, ಬವಣೆ ಮತ್ತು ಕೊರಗಜ್ಜನ ಆರಾಧನೆಯ ಕತೆಯುಳ್ಳ ‘’ಕೋರಾ’’ ಕನ್ನಡ ಸಿನಿಮಾ ಇದೇ ಎಪ್ರಿಲ್ 18ರಂದು ದೇಶಾದ್ಯಂತ ತೆರೆ ಕಾಣಲಿದೆ. ತೆಲುಗು, ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಪಾನ್ ಇಂಡಿಯಾ ಸಿನಿಮಾವಾಗಿ ಜನರನ್ನು ಆಕರ್ಷಿಸಲಿದೆ ಎಂದು ಚಿತ್ರದ ನಿರ್ದೇಶಕ ಒರಾಟಶ್ರೀ ತಿಳಿಸಿದ್ದಾರೆ.
ಕೋರಾ ಸಿನಿಮಾವನ್ನು ಒರಟಾ ಐ ಲವ್ ಯು ಚಿತ್ರದ ಖ್ಯಾತಿಯ ನಿರ್ದೇಶಕ ಒರಟಾಶ್ರೀ ನಿರ್ದೇಶಿಸಿದ್ದಾರೆ. ಇವರ ಮೊದಲ ಚಿತ್ರ ಒರಟಾ ಪ್ರದರ್ಶನ ಕಂಡಿದ್ದು ಬೆಸ್ಟ್ ಸ್ಕ್ರೀನ್ ಪ್ಲೇಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು. ಕೋರಾ ಇವರ ನಾಲ್ಕನೇ ಸಿನಿಮಾವಾಗಿದ್ದು, 85 ದಿನಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಲಾಗಿದೆ.
ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ನಿಂತಿಕಲ್ ಎಸ್ಟೇಟ್, ಸಕಲೇಶಪುರದ ಬಾಳ್ಳುಪೇಟೆ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ನಾಯಕ ನಟನಾಗಿದ್ದು, ಕೊಡಗಿನ ಚರಿಷ್ಮಾ ಚೌಂದಮ್ಮ ನಾಯಕಿಯಾಗಿ ನಟಿಸಿದ್ದಾರೆ. ಚರಿಷ್ಮಾಗೆ ಎರಡನೇ ಚಿತ್ರವಾಗಿದ್ದು ಈ ಹಿಂದೆ ಕಾಕ್ಟೇಲ್ ಚಿತ್ರದಲ್ಲಿ ನಟಿಸಿದ್ದರು. ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರೂ ಆದ ಪಿ ಮೂರ್ತಿ ಚಿತ್ರದ ನಿರ್ಮಾಪಕರು ಮತ್ತು ವಿಲನ್ ಪಾತ್ರವನ್ನೂ ಮಾಡಿದ್ದಾರೆ. ಇವರಿಗೆ ಎರಡನೇ ಸಿನಿಮಾವಾಗಿದ್ದು, ಸ್ಲಮ್ ಎನ್ನುವ ಹೆಸರಿನಲ್ಲಿ ಮೊದಲ ಚಿತ್ರ ನಿರ್ಮಾಣ ಮಾಡಿದ್ದರು.
ಉಪ್ಪಿನಂಗಡಿ ಮೂಲದ ಎಂ.ಕೆ. ಮಠ ಅವರು ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ನಾವು ಇಡೀ ಚಿತ್ರತಂಡ ಕೊರಗಜ್ಜನ ಭಕ್ತರಾಗಿದ್ದು, ನಿರ್ಮಾಪಕರು ಪರಮ ಭಕ್ತರು. ಕೋಲದ ಸನ್ನಿವೇಶ ಚಿತ್ರದಲ್ಲಿ ಇದೆ. ಹಾಗೆಂದು ನಾವು ಇದನ್ನು ಕೃತಕವಾಗಿ ಮಾಡಿಲ್ಲ. ಕೋಲ ನಡೆಯುತ್ತಿದ್ದಾಗಲೇ ನಾವು ಚಿತ್ರೀಕರಣ ಮಾಡಿದ್ದು ಅದರ ಒಂದೆರಡು ದೃಶ್ಯಗಳನ್ನು ಮಾತ್ರ ಬಳಸಿಕೊಂಡಿದ್ದೇವೆ. ಉಳಿದಂತೆ, ಕೊರಗಜ್ಜನಿಗೂ ಚಿತ್ರಕ್ಕೂ ಬೇರಾವುದೇ ಸಂಬಂಧ ಇಲ್ಲ ಎಂದು ಚಿತ್ರದ ನಿರ್ದೇಶಕ ಒರಾಟ ಶ್ರೀ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಕೋಲದ ಚಿತ್ರೀಕರಣ ಮಾಡುವಾಗಲೂ ಚಪ್ಪಲಿ ಹಾಕದೆ, ಮಾಂಸಾಹಾರ ಸ್ವೀಕರಿಸದೆ ಭಕ್ತಿಯಿಂದ ನಡೆದುಕೊಂಡಿದ್ದೇವೆ ಎಂದರು.
ಸುನಾಮಿ ಕಿಟ್ಟಿ ಪಾಲಿಗೆ ಇದು ಮೊದಲ ಸಿನಿಮಾವಾಗಿದ್ದು, ಒಟ್ಟು ಚಿತ್ರೀಕರಣ ಕಾಡಿನಲ್ಲೇ ಹೆಚ್ಚಾಗಿ ನಡೆದಿದೆ. ಕಾಡಿನಲ್ಲಿ ಬದುಕುವ ಬುಡಕಟ್ಟು ಜನರ ಬದುಕು, ಎದುರಿಸುವ ದೌರ್ಜನ್ಯ, ಆಚರಣೆಗಳ ಚಿತ್ರಣವನ್ನು ಈ ಚಿತ್ರ ಕಮರ್ಶಿಯಲ್ ಆಗಿ ಕಟ್ಟಿಕೊಡಲಿದೆ. ಚಿತ್ರವನ್ನು ಕರಾವಳಿಯ ತುಳುವರು ಕೂಡ ಸ್ವೀಕರಿಸಲಿದ್ದಾರೆ ಎನ್ನುವ ನಂಬಿಕೆ ಇದೆ ಎಂದು ಚಿತ್ರದ ನಿರ್ದೇಶಕ ಒರಾಟ ಶ್ರೀ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ಮಾಪಕ ಪಿ ರಾಮಮೂರ್ತಿ, ನಾಯಕ ನಟ ಸುನಾಮಿ ಕಿಟ್ಟಿ ಉಪಸ್ಥಿತರಿದ್ದರು.
The highly anticipated Kannada film Kora is set to hit theaters on April 18, and excitement is building as it will be released in three languages: Kannada, Tamil, and Telugu. Produced by esteemed DSS leader P. Murthy, this film marks a significant milestone in the Kannada film industry. Orata Shree takes the helm as the director, promising a captivating storyline and engaging visuals that will resonate with audiences across different linguistic backgrounds.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 07:38 pm
Mangalore Correspondent
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
VK Furniture & Electronics Launches 4th Annua...
04-08-25 04:48 pm
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm