ಬ್ರೇಕಿಂಗ್ ನ್ಯೂಸ್
16-10-24 08:19 pm Mangalore Correspondent ಕರಾವಳಿ
ಪುತ್ತೂರು, ಅ.16: ಬಿಲ್ಲವ ಸಮಾಜದ 1 ಲಕ್ಷ ಹುಡುಗಿಯರು ವೇಶ್ಯೆಯಾಗಲು ಹಿಂದೂ ಸಂಘಟನೆಯ ಯುವಕರು ಕಾರಣ ಮತ್ತು ಭಜನೆ ಮಾಡಿದ ಹಿಂದು ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದು ಹುಡುಗರು ಎಂಬುದಾಗಿ ಪಂಜ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರು ಜಾಲತಾಣದಲ್ಲಿ ವಿಕೃತ ಟೀಕೆ ಮಾಡಿದ್ದು ಇವರನ್ನು ಸರ್ಕಾರದ ಸೇವೆಯಿಂದ ಕೂಡಲೇ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದು ಜಾಗರಣ ವೇದಿಕೆ ಪೊಲೀಸರಿಗೆ ದೂರು ನೀಡಿದೆ.
ಹಿಂದೂ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ತೀರ ಅವಹೇಳನಕಾರಿಯಾಗಿ ಮಾತನಾಡಿದ್ದು ಈ ಮಾತುಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಹಿಂದು ಜಾಗರಣ ವೇದಿಕೆಯ ಮುಖಂಡರು ಬೆಳ್ಳಾರೆ ಠಾಣೆಯಲ್ಲಿ ಮತ್ತು ಮಂಗಳೂರು ಅರಣ್ಯ ಅಧಿಕಾರಿ ಅಂತೋಣಿ ಮರಿಯಪ್ಪ ಇವರಿಗೆ ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಒಂದು ಲಕ್ಷ ಪೂಜಾರಿ ಹುಡುಗಿಯರು ಸೂಳೆಯರಿದ್ದಾರೆ. ನನ್ನ ಬಳಿ ಇದಕ್ಕೆ ಹತ್ತು ಸಾವಿರ ದಾಖಲೆ ಇದೆ. ಹಿಂದುತ್ವದ ಹುಡುಗರು ಇವರನ್ನು ಸೂಳೆಯರಾಗಿ ಮಾಡಿದ್ದಾರೆ. ಭಜನೆ ಮಾಡಿ ರಾತ್ರಿ ವೇಳೆ ಅವರನ್ನು ಮರದಡಿಯಲ್ಲಿ ಮಲಗಿಸುತ್ತಾರೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಅಪಘಾತವಾದಲ್ಲಿ ಮುಸ್ಲಿಂ ಯುವಕರು ಸಹಾಯಕ್ಕೆ ಬರುತ್ತಾರೆ. ಹಿಂದು ಹುಡುಗರು ಫೋಟೊ ತೆಗೆದು ಹಂಚುತ್ತಾರೆ ಇತ್ಯಾದಿಯಾಗಿ ಹಿಂದು ಧರ್ಮದವರನ್ನು ಅವಾಚ್ಯವಾಗಿ ಮಾತನಾಡಿದ್ದಾರೆ.
ಈತ ಈ ಹಿಂದೆಯೂ ಇಂತಹ ವಿಕೃತ ಮನಸ್ಥಿತಿಯಿಂದ ಹಿಂದುಗಳ ಭಜನೆ ಬಗ್ಗೆ ಟೀಕೆ ಮಾಡಿ ಸೇವೆಯಿಂದ ಅಮಾನತು ಆಗಿದ್ದರು. ಆನಂತರ, ಸೇವೆಗೆ ಸೇರಿದ್ದ ಸಂಜೀವ ಪೂಜಾರಿ ಸಮಯದಲ್ಲಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ. ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಹಿಂಜಾವೇ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಮತ್ತಿತರರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.
Derogatory messages on social media, Hindu Jagrana vedike demands action against deputy range forest officer Sanjeeva Poojari. In 2022 Sanjeeva Poojari Kaniyooru, deputy range forest officer, was accused of spreading derogatory messages on Facebook.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm