ಬ್ರೇಕಿಂಗ್ ನ್ಯೂಸ್
11-07-24 09:43 pm Mangalore Correspondent ಕರಾವಳಿ
ಮಂಗಳೂರು, ಜುಲೈ.11: ಮುಸ್ಲಿಂ ಯುವಕನ ಪ್ರೇಮ ಪಾಶಕ್ಕೆ ಸಿಲುಕಿದ ಯುವತಿಯ ತಂದೆ, ಕಾಸರಗೋಡಿನ ವಿದ್ಯಾನಗರ ನಿವಾಸಿ ವಿನೋದ್ ಮಂಗಳೂರಿಗೆ ಬಂದು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ. 20 ವರ್ಷಗಳಿಂದ ಕಷ್ಟಪಟ್ಟು ಸಲಹಿದ ಮಗಳು ನಮ್ಮ ಸಂಬಂಧವನ್ನೇ ಕಡಿದು ಯಾರೋ ಕೆಲಸ ಇಲ್ಲದ ರೌಡಿಯ ಜೊತೆಗೆ ಹೋಗಿದ್ದಾಳಲ್ಲಾ.. ನಾನೇನು ಮಾಡಲಿ. ನನ್ನ ಈ ಗತಿಗೆ ಯಾರು ಹೊಣೆ ಎಂದು ಕಣ್ಣೀರು ಹಾಕಿದ್ದಾರೆ.
ವಿನೋದ್ ಅವರ 20 ವರ್ಷದ ಮಗಳು ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿಸಿಎ ಕಲಿಯುತ್ತಿದ್ದಳು. ಕಳೆದ ವರ್ಷ ಪ್ರಥಮ ವರ್ಷ ಪೂರೈಸಿದ್ದ ಆಕೆಯ ಎರಡನೇ ವರ್ಷದ ಫೀಸು ಕಟ್ಟಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಬಡ ಕುಟುಂಬವಾಗಿದ್ದು, ವಿನೋದ್ ಅವರು ವಿದ್ಯಾನಗರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನವರು ಎರಡನೇ ವರ್ಷ ಕಲಿಯೋದಕ್ಕೆ ಬಿಡದೆ, ಜೊತೆಗೆ ಆಕೆಯ ಶಿಕ್ಷಣದ ಒರಿಜಿನಲ್ ದಾಖಲೆ ಪತ್ರಗಳನ್ನೂ ತೆಗೆದಿಟ್ಟಿದ್ದರು. ಇದರಿಂದಾಗಿ ಬೇರೆ ಕಡೆ ಕಲಿಯುವುದಕ್ಕೂ ಹೋಗಲಾಗದೆ, ಆಕೆ ವಿದ್ಯಾನಗರದಲ್ಲಿ ಕೆಲಸಕ್ಕೆ ಸೇರಿದ್ದಳು.
ಇದೇ ಸಂದರ್ಭದಲ್ಲಿ ಕಾಸರಗೋಡಿನ ವಿದ್ಯಾನಗರ ನಿವಾಸಿಯೇ ಆಗಿರುವ ಮಹಮ್ಮದ್ ಅಶ್ಫಾಕ್ ಎಂಬಾತ ಸಂಪರ್ಕ ಆಗಿದ್ದ. ಅಶ್ಫಾಕ್ ಮೇಲೆ ಕಾಸರಗೋಡು ನಗರದ ಎರಡು ಠಾಣೆಗಳಲ್ಲಿ 15 ಕೇಸು ದಾಖಲಾಗಿದ್ದು, ಮೂರು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಅಲ್ಲದೆ, ಈ ಹಿಂದೆ ಎರಡು ಹೆಣ್ಮಕ್ಕಳನ್ನು ಮದುವೆಯಾಗಿ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಇಂಥ ಕ್ರಿಮಿನಲ್ ಹಿನ್ನೆಲೆಯ ಯುವಕನ ಜೊತೆಗೆ ಸಂಪರ್ಕ ಆಗಿರುವುದು ತಿಳಿಯುತ್ತಲೇ ಆಕೆಯನ್ನು ಉಳ್ಳಾಲದ ಸಂಬಂಧಿಕರ ಮನೆಯಲ್ಲಿ ಇರಿಸಿದ್ದರು. ಆದರೆ, ಅಶ್ಫಾಕ್ ಉಳ್ಳಾಲಕ್ಕೆ ಬಂದು ಆಕೆಯನ್ನು ಕರೆದೊಯ್ದಿದ್ದು ಜೊತೆಗೆ ಇರಿಸಿಕೊಂಡಿದ್ದ. ವಿಚಾರ ತಿಳಿಯುತ್ತಲೇ ಮಂಗಳೂರಿಗೆ ಬಂದು ವಿನೋದ್ ಪೊಲೀಸರಿಗೆ ಕಿಡ್ನಾಪ್ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿ, ಆಕೆಯನ್ನು ಕರೆತಂದಿದ್ದು, ಯುವತಿ ತನ್ನ ಇಷ್ಟದ ರೀತಿ ಆತನ ಜೊತೆಗೆ ತೆರಳಿದ್ದಾಗಿ ಹೇಳಿರುವುದು ಕುಟಂಬ ಮತ್ತು ಪೊಲೀಸರಿಗೆ ಪೀಕಲಾಟ ಸೃಷ್ಟಿಸಿದೆ.
ಮಗಳು ಮುಸ್ಲಿಂ ಯುವಕನ ಜೊತೆಗೆ ತೆರಳಿದ್ದಾನೆಂದು ತಂದೆಗೆ ಪಶ್ಚಾತ್ತಾಪ ಆಗಿಲ್ಲ. ಒಬ್ಬ ಒಳ್ಳೆಯ ಮನಸ್ಕ ವ್ಯಕ್ತಿಯಾದರೆ ತೊಂದರೆ ಇರಲಿಲ್ಲ. ಇಂಥ ಅಬ್ಬೇಪಾರಿ ಜೊತೆಗೆ ತೆರಳಿರುವುದು ಸಿಟ್ಟು ಮತ್ತು ಬೇಸರ ತರಿಸಿದೆ. ಈಗ ಯುವತಿಯನ್ನು ಪೊಲೀಸರು ಕರೆತಂದು ಮಂಗಳೂರಿನ ಕೌನ್ಸಿಲಿಂಗ್ ಸೆಂಟರ್ ಒಂದಕ್ಕೆ ಸೇರಿಸಿದ್ದಾರೆ. ಆದರೆ ಆಕೆ ಹೆತ್ತವರ ಮಾತನ್ನು ಕೇಳದ ಸ್ಥಿತಿಯಲ್ಲಿರುವುದನ್ನು ಕಂಡು ಸ್ವತಃ ತಂದೆಯೇ ಖುದ್ದು ಹೋಗಿದ್ದಾರೆ. ಆತ ನಿರಂತರ ಅಪರಾಧ ಚಟುವಟಿಕೆ ನಡೆಸುತ್ತಿದ್ದು ಪೊಲೀಸರು ಗೂಂಡಾ ಆಕ್ಟ್ ಹಾಕುವ ಸಾಧ್ಯತೆಯಿದೆ. ಈಗಲೇ ಜಾಮೀನಿನಲ್ಲಿ ಹೊರಗಿದ್ದಾನೆ. ಇಂಥ ವ್ಯಕ್ತಿಯ ಜೊತೆಗೆ ಹೋದರೆ ಮಗಳ ಗತಿಯೇನು, ಭವಿಷ್ಯವೇನಾದೀತು ಎಂದು ಕಣ್ಣೀರು ಹಾಕುತ್ತಿದ್ದಾರೆ. ತಂದೆಗೆ ಮಗಳಾದರೂ, ಆಕೆ ಪ್ರಾಯ ಪ್ರಬುದ್ಧಳಾಗಿರುವುದು ತನ್ನ ಇಷ್ಟದ ರೀತಿ ನಡೆದುಕೊಳ್ಳುತ್ತೇನೆ ಎನ್ನುವ ರೀತಿ ಮಾತಾಡುತ್ತಿದ್ದಾಳಂತೆ.
ಲವ್ ಜಿಹಾದ್ ಕೃತ್ಯ, ಕ್ರಮಕ್ಕೆ ಆಗ್ರಹ
ಬಡ ಕುಟುಂಬದ ವಿನೋದ್ ಮಂಗಳೂರಿಗೆ ಬಂದು ವಿಶ್ವ ಹಿಂದು ಪರಿಷತ್ ನಾಯಕರ ಸಹಾಯ ಕೇಳಿದ್ದಾರೆ. ಹೀಗಾಗಿ ಬಜರಂಗದಳ ನಾಯಕರು, ಕೃತ್ಯದ ಹಿಂದೆ ಲವ್ ಜಿಹಾದ್ ಆರೋಪ ಮಾಡಿದ್ದಾರೆ. ಹಿಂದು ಯುವತಿಯನ್ನು ಇಸ್ಲಾಮಿಗೆ ಮತಾಂತರ ಮಾಡುವ ಉದ್ದೇಶದಿಂದ ಮುಸ್ಲಿಂ ಯುವಕರು ಈ ಕೃತ್ಯ ಮಾಡುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲವಿದ್ದು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್ ಹಿನ್ನೆಲೆಯ ಆ ಯುವಕನನ್ನು ಪೊಲೀಸರು ಕರೆತಂದು ವಿಚಾರಣೆ ನಡೆಸಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
Mangalore love jihad case, father of girl cries before media, says daughter has been trapped. According to police, the girl was studying at a private college in Mangaluru and her parents had registered a missing complaint in Pandeshwar police station recently after she went incommunicado. Police tracked the missing girl and found that she was with a man called Mohammad Ashfaq.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm