ಬ್ರೇಕಿಂಗ್ ನ್ಯೂಸ್
27-11-20 11:59 am Mangalore Correspondent ಕರಾವಳಿ
ಬಂಟ್ವಾಳ, ನವೆಂಬರ್ 27: ಜಾಗದ ಪಹಣಿ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಒಂದು ಸಾವಿರ ಲಂಚ ಕೇಳಿದ ಬಂಟ್ವಾಳದ ಉಪ ತಹಸೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿರುವ ರವಿಚಂದ್ರ ಲಂಚ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದವರು. ಪಜೀರು ನಿವಾಸಿ ವೆರೋನಿಕಾ ರೋಡ್ರಿಗಸ್ ಎಂವಬರು, ಬೆಂಜನಪದವಿನ ತಮ್ಮ ಜಾಗದ ದಾಖಲೆ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಅರ್ಜಿ ಸಲ್ಲಿಸಿದ್ದರು.
ಸರ್ವೆ ನಂಬರ್ 107-14 ಆಗಬೇಕಾಗಿದ್ದಲ್ಲಿ 107-1ಎಚ್ ಎಂದು ನಮೂದಾಗಿತ್ತು. ಸಣ್ಣ ಬದಲಾವಣೆಯನ್ನು ಸರಿಪಡಿಸಲು 2018ರ ಜೂನ್ 12ರಂದು ತಹಸೀಲ್ದಾರ್ ಕಚೇರಿಗೆ ಅರ್ಜಿ ಬರೆದಿದ್ದರು. ಆದರೆ, ವರ್ಷ ಕಳೆದರೂ ಅರ್ಜಿ ಅಲ್ಲಿಂದ ಕದಲಿರಲಿಲ್ಲ. ಮತ್ತೆ ಮತ್ತೆ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಗೋಗರೆದಾಗ, 2019 ಮೇ ತಿಂಗಳಲ್ಲಿ ಅರ್ಜಿ ಮೇರಮಜಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬಂದಿತ್ತು. ಆನಂತರವೂ ತಮ್ಮ ಕೆಲಸ ಆಗಲೇ ಇಲ್ಲ.
ಮತ್ತೊಂದು ವರ್ಷ ಕಳೆದ ಬಳಿಕ, 2020ರಲ್ಲಿ ಅರ್ಜಿ ಗ್ರಾಮಾಧಿಕಾರಿಯಿಂದ ಮತ್ತೆ ತಹಸೀಲ್ದಾರ್ ಕಚೇರಿಗೆ ಅಪ್ರೂವಲ್ ಗೆ ಬಂದಿತ್ತು. ಗ್ರಾಮಾಧಿಕಾರಿ ಕೊಟ್ಟ ಉಲ್ಲೇಖ ಪತ್ರಕ್ಕೆ ತಹಸೀಲ್ದಾರ್ ಸಹಿ ಹಾಕಿ ಅರ್ಜಿಯನ್ನು ಮುಂದಕ್ಕೆ ಕೊಡಬೇಕಿತ್ತು. ಅರ್ಜಿದಾರರು ಮತ್ತೆ ಮತ್ತೆ ಉಪ ತಹಸೀಲ್ದಾರ್ ಅವರನ್ನು ಭೇಟಿಯಾಗಿದ್ದು, ಕೊನೆಗೆ ಸಹಿ ಹಾಕಿ ಕೊಡಲು ಹಣದ ಬೇಡಿಕೆ ಇಟ್ಟಿದ್ದಾರೆ.
ಅರ್ಜಿದಾರ ವೆರೋನಿಕಾ ರೋಡ್ರಿಗಸ್, ಈ ವಿಚಾರವನ್ನು ಮಂಗಳೂರಿನ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಧಿಕಾರಿಗಳು ಮೊದಲೇ ಕೊಟ್ಟಿದ್ದ ಒಂದು ಸಾವಿರ ರೂ. ಹಣವನ್ನು ಅರ್ಜಿದಾರರಿಂದ ಪಡೆಯುತ್ತಿದ್ದಾಗಲೇ ಉಪ ತಹಸೀಲ್ದಾರ್ ಈಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಕೆ.ಸಿ ಪ್ರಕಾಶ್ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ಗುರುರಾಜ್ ಮತ್ತು ಶ್ಯಾಮಸುಂದರ್ ದಾಳಿ ಕಾರ್ಯಾಚರೆ ನಡೆಸಿದ್ದರು. ಒಂದು ಸಣ್ಣ ಫೈಲ್ ಮುಂದಿಟ್ಟು ಕಂದಾಯ ಇಲಾಖೆ ಅಧಿಕಾರಿಗಳು ಹೇಗೆಲ್ಲಾ ಪೀಡಿಸುತ್ತಾರೆ, ಹಣ ಕೊಡದಿದ್ದರೆ ವರ್ಷಗಟ್ಟಲೆ ಹೇಗೆ ಸತಾಯಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ.
The Anti-Corruption Bureau (ACB) officials caught deputy tahsildar in Bantwal taluk office, Ravishankar, when accepting a bribe.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
10-10-26 10:31 pm
HK News Staffer
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm