ಬ್ರೇಕಿಂಗ್ ನ್ಯೂಸ್
04-03-24 03:00 pm Mangalore Correspondent ಕರಾವಳಿ
ಉಳ್ಳಾಲ, ಮಾ.4: ಕೊಂಡಾಣ ಕ್ಷೇತ್ರದ ಭಂಡಾರಮನೆಯನ್ನು ಪುಡಿಗೈದ ರಾಕ್ಷಸರನ್ನ ಕೆಲವೇ ಗಂಟೆಗಳಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಉಳ್ಳಾಲದ ಶಾಸಕ ಖಾದರ್ ಹೊರತುಪಡಿಸಿ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹಿಂದು ಧಾರ್ಮಿಕ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆರೋಪಿಸಿದ್ದಾರೆ.
ಕೋಟೆಕಾರು ಪಟ್ಟಣದ ಶ್ರೀ ಕ್ಷೇತ್ರ ಕೊಂಡಾಣದ ಭಂಡಾರಮನೆಯ ಕಟ್ಟಡ ಧ್ವಂಸ ಪ್ರಕರಣದ ಆರೋಪಿಗಳು, ಸಹಕರಿಸಿದ ಪಟಲಾಂ ವಿರುದ್ಧ ಹಾಗೂ ಕ್ಷೇತ್ರದ ಭಂಡಾರಮನೆ ರಕ್ಷಣೆ, ಒಡವೆಗಳ ರಕ್ಷಣೆ ಕುರಿತಾಗಿ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತಮಗೆ ಬೇಕಾದಷ್ಟು ಸ್ವಾಹ ಮಾಡಲು ಅಸ್ತ್ರವಾಗಿ ಬಳಸಿದ ಕ್ಷೇತ್ರದ ಆಡಳಿತ ತಮ್ಮ ಅಧೀನದಲ್ಲಿ ಇಲ್ಲ ಎಂಬ ಸ್ವಾರ್ಥಕ್ಕೆ ಭಂಡಾರಮನೆಯನ್ನೇ ಪುಡಿಗೈದಿರುವ ಮುತ್ತಣ್ಣ ಶೆಟ್ಟಿ ಮತ್ತು ಪಟಾಲಮಿನ ಕಿಡಿಗೇಡಿ ಕೃತ್ಯ ಅತೀ ಖಂಡನೀಯ. ಇಂತಹ ರಾಕ್ಷಸರನ್ನ ರಾತ್ರೋ ರಾತ್ರಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಕ್ಷೇತ್ರದ ಶಾಸಕ ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಅವರ ಕೈವಾಡ ಇದೆ ಎಂದು ಆರೋಪಿಸಿದರು.
ಹಿಂದೂ ಮುಖಂಡ, ವಕೀಲ ಜಗದೀಶ ಶೇಣವ ಮಾತನಾಡಿ ಅನ್ಯಮತೀಯ ಬಾಬರ ಒಡೆದ ರಾಮ ಮಂದಿರ ಮತ್ತೆ ಪ್ರತಿಷ್ಠಾಪನೆ ಮಾಡಲು ಐನೂರು ವರ್ಷ ಬೇಕಾಯಿತು. ಆದರೆ ಹಿಂದೂ ಆಗಿ ಕೊಂಡಾಣ ಕ್ಷೇತ್ರದ ಅನ್ನ ತಿಂದು ಭಂಡಾರ ಮನೆಯನ್ನೇ ಕೆಡವಿದ ಮುತ್ತಣ್ಣ ಶೆಟ್ಟಿ ಒಬ್ಬ ರಾಕ್ಷಸ ಎಂದರು. ಕೊಂಡಾಣ ಕ್ಷೇತ್ರ ಮುತ್ತಣ್ಣ ಶೆಟ್ಟರ ಕುಟುಂಬದ ಆಸ್ತಿ ಅಲ್ಲ. ಹಿಂದೂ ಸಮಾಜದ ಯಾರೂ ಕೂಡ ಮುತ್ತಣ್ಣ ಶೆಟ್ಟರನ್ನು ಯಾವುದೇ ಕಾರ್ಯಕ್ರಮಕ್ಕೆ ಆಮಂತ್ರಿಸಬಾರದು. ಧರ್ಮದ್ರೋಹಿಯಾಗಿರುವ ಅವರಿಂದಲೇ ಮೂವತ್ತು ಲಕ್ಷ ರೂಪಾಯಿ ವೆಚ್ಚದ ಕಟ್ಟಡ ನಿರ್ಮಾಣ ವೆಚ್ಚವನ್ನು ಭರಿಸುವಂತೆ ಮುಜರಾಯಿ ಇಲಾಖೆ ಕ್ರಮ ಜರಗಿಸಬೇಕು. ಪೊಲೀಸರು ಇಂತಹ ರಾಕ್ಷಸರ ವಿರುದ್ಧ ಸರಳ ಸೆಕ್ಷನ್ ಹಾಕಲು ಶಾಸಕ ಖಾದರ್ ಅವರ ಒತ್ತಡವೇ ಕಾರಣ ಎಂದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ಮಾಜಿ ಸದಸ್ಯೆ ದಿನಮಣಿ ರಾವ್, ವಿ.ಹಿಂ.ಪ ಮುಖಂಡ ಗೋಪಾಲ ಕುತ್ತಾರು, ಬಜರಂಗದಳ ಪ್ರಮುಖರಾದ ಅರ್ಜುನ್ ಮಾಡೂರು ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು. ಭಾನುವಾರ ಕೊಂಡಾಣದ ಭಂಡಾರ ಮನೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಕ್ಷೇತ್ರದ ಗುರಿಕಾರ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಬೇಲ್ ನೀಡಿ ಬಿಡುಗಡೆಗೊಳಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ಜೆಸಿಬಿಯನ್ನ ಉಳ್ಳಾಲ ಪೊಲೀಸರು ಇನ್ನೂ ವಶಪಡಿಸಿರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Mangalore Kotelar Kondana temple house demolish, three accused get bail within hours of arrest. Speaker MLA Ut Khader pressure over police offcers reason says temple authorities.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 04:07 pm
Mangalore Correspondent
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am